Site icon Vistara News

Priyanka Chopra: ಮಾಲತಿ ಲುಕ್ಕಿಂಗ್‌ ಲೈಕ್‌ ಎ ʻನಿಕ್‌ʼ ಅಂದ್ರು ನೆಟ್ಟಿಗರು; ಫೋಟೊ ವೈರಲ್‌!  

Priyanka Chopra steps out with Malti Marie

ಬೆಂಗಳೂರು: ಪ್ರಿಯಾಂಕಾ ಚೋಪ್ರಾ (Priyanka Chopra) ಜೋನಾಸ್ ಇತ್ತೀಚೆಗೆ ಲಾಸ್ ಏಂಜಲೀಸ್‌ನಲ್ಲಿ ಮುದ್ದಿನ ಮಗಳು ಮಾಲತಿ ಮೇರಿ ಚೋಪ್ರಾ ಜೊನಾಸ್‌ನೊಂದಿಗೆ ಕಂಡಿದ್ದಾರೆ. ಕ್ಯಾಶುಯಲ್ ಮತ್ತು ಸ್ಪೋರ್ಟಿ ಉಡುಗೆಯಲ್ಲಿ ಮುದ್ದಾಗಿ ಕಾಣುತ್ತಿದ್ದರು ಪ್ರಿಯಾಂಕಾ. ಮಗಳನ್ನು ಎತ್ತಿಕೊಂಡು ಹೊರಟ ಪ್ರಿಯಾಂಕ ಫೋಟೊ ವೈರಲ್‌ ಅಗುತ್ತಿದ್ದಂತೆ, ʻಮಾಲತಿ ಲುಕ್ಕಿಂಗ್‌ ಲೈಕ್‌ ಎ ನಿಕ್‌ʼ ಎಂದು ಕಮೆಂಟ್‌ ಮಾಡಿದ್ದಾರೆ ನೆಟ್ಟಿಗರು.

ʻಮಾಲತಿ ತಂದೆಯಂತೆಯೇ ಕಾಣುತ್ತಿದ್ದಾಳೆʼʼಎಂದು ಬಹುತೇಕರು ಕಮೆಂಟ್‌ ಮೂಲಕ ವ್ಯಕ್ತಪಡಿಸಿದ್ದಾರೆ. ಕೆಲವು ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದಿದ್ದಾರೆ. 2018ರಲ್ಲಿ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ 2022ರ ಜನವರಿಯಲ್ಲಿ ತಮಗೆ ಹೆಣ್ಣುಮಗು ಹುಟ್ಟಿದ್ದಾಗಿ ತಿಳಿಸಿದ್ದರು. ಹಾಗೇ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾಗಿಯೂ ಹೇಳಿದ್ದರು. ಪ್ರಿಯಾಂಕಾ ಪ್ರಸ್ತುತ ತನ್ನ ಮುಂದಿನ ಹಾಲಿವುಡ್ ಪ್ರಾಜೆಕ್ಟ್ – ʻಹೆಡ್ಸ್ ಆಫ್ ಸ್ಟೇಟ್‌ʼನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಜಾನ್ ಸೆನಾ ಮತ್ತು ಇದ್ರಿಸ್ ಎಲ್ಬಾ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ಜ್ಯೂ. ಎನ್‌ಟಿಆರ್‌ ಜತೆ ಪ್ರಿಯಾಂಕಾ ಚೋಪ್ರಾ!

ಈಗಾಗಲೇ ಜ್ಯೂನಿಯರ್‌ ಎನ್‌ಟಿಆರ್‌ ʻದೇವರʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ NTR 31 ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್‌ ಕೆಲವು ದಿನಗಳ ಹಿಂದೆ ಪ್ರಶಾಂತ್ ನೀಲ್ ಅವರ ಜನ್ಮದಿನಕ್ಕೆ ಶುಭಹಾರೈಸಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿತ್ತು. ಜ್ಯೂನಿಯರ್‌ ಎನ್‌ಟಿಆರ್‌ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಅವರ ನಿರ್ಮಾಣ ಸಂಸ್ಥೆಯಾಗಿರುವ ಎನ್ ಟಿಆರ್ ಆರ್ಟ್ಸ್ ಹಾಗೂ ಮೈತ್ರಿ ಮೂವಿ ಮೇಕರ್ಸ್‌ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದೀಗ ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Priyanka Chopra: ಮುಂಬೈನಲ್ಲಿ ಪ್ರಿಯಾಂಕಾ ಚೋಪ್ರಾ; ಪತ್ರಕರ್ತರಿಗೆ ಕೈ ಮುಗಿದ ನಟಿ!

ಜ್ಯೂನಿಯರ್‌ ಎನ್‌ಟಿಆರ್‌ NTR 31 ಚಿತ್ರದಲ್ಲಿ ನಟಿಸಲು ಪ್ರಿಯಾಂಕಾ ಚೋಪ್ರಾ ಜೋನಸ್ ಅವರನ್ನು ಸಂಪರ್ಕಿಸಲಾಗಿದೆ ಎಂಬುದು ಇತ್ತೀಚಿನ ಸುದ್ದಿ. ಜ್ಯೂನಿಯರ್‌ ಎನ್‌ಟಿಆರ್‌ ಜತೆ ಪಿಗ್ಗಿ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. NTR 31 2024ರಲ್ಲಿ ತೆರೆಗೆ ಬರಲಿದೆ. ಪ್ರಿಯಾಂಕಾ ಅವರು ಸಿಟಾಡೆಲ್‌ನಲ್ಲಿ ಈಗಾಗಲೇ ಆ್ಯಕ್ಷನ್‌ ಸಿಕ್ವೆನ್ಸ್‌ಗಳಲ್ಲಿ ನಟಿಸಿದ್ದಾರೆ. NTR 31 ಸಿನಿಮಾ ಕೂಡ ಆ್ಯಕ್ಷನ್‌ ಸಿನಿಮಾ ಆಗಿದ್ದು. ಪಾತ್ರಗಳು ಕೂಡ ರೋಮಾಂಚನಕಾರಿಯಾಗಿರಲಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ರಣವೀರ್ ಸಿಂಗ್ ಜತೆಗೆ ಡಾನ್ 3 ನಲ್ಲಿ ನಟಿಸಲು ಪ್ರಿಯಾಂಕಾ ಅವರನ್ನು ಸಂಪರ್ಕಿಸಲಾಗಿದೆ ಎನ್ನಲಾಗಿದೆ. ಹಿಂದಿನ ಎರಡು ಅಧ್ಯಾಯಗಳು ಕೂಡ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

Exit mobile version