Site icon Vistara News

Priyanka Chopra : ಬಾಲಿವುಡ್‌ನ ಮಾಜಿ ಪ್ರಿಯತಮರ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

#image_title

ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಭಾರತದಿಂದ ದೂರವಾಗಿ ಹಾಲಿವುಡ್‌ನಲ್ಲಿ ಜೀವನ ಕಂಡುಕೊಂಡಿದ್ದಾರೆ. ನಿಕ್‌ ಜೋನಸ್‌ ಅವರೊಂದಿಗೆ ವೈವಾಹಿಕ ಜೀವನದಲ್ಲಿರುವ ಅವರು ಬಾಡಿಗೆ ತಾಯಿ ಮೂಲಕ ಮಗುವಿಗೂ ಜನ್ಮ ಕೊಟ್ಟು ತಾಯ್ತನದ ಸಂತಸದಲ್ಲಿದ್ದಾರೆ. ಹೀಗಿರುವಾಗ ನಟಿ ತಮ್ಮ ಮಾಜಿ ಪ್ರಿಯತಮರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪೋಡ್‌ಕಾಸ್ಟ್‌ ಒಂದರಲ್ಲಿ ನಟಿ ತಮ್ಮ ಲವ್‌ ಜರ್ನಿಯ ಬಗ್ಗೆ ಹೇಳಿಕೊಂಡಿದ್ದಾರೆ.

“ನಾನು ಒಂದು ರೀತಿಯಲ್ಲಿ ಸೀರಿಯಲ್‌ ಲವರ್‌ ರೀತಿಯಲ್ಲಿ ಆಗಿಬಿಟ್ಟಿದ್ದೆ. ಒಬ್ಬರಾದ ಮೇಲೆ ಒಬ್ಬರೊಂದಿಗೆ ರಿಲೇಶನ್‌ಶಿಪ್‌ ಬೆಳೆಸಿಕೊಂಡು ಹೋದೆ. ಯಾರ ಮಧ್ಯೆಯೂ ಸಮಯವನ್ನೇ ಕೊಡಲಿಲ್ಲ. ನಾನು ಹೆಚ್ಚಾಗಿ ಸೆಟ್‌ನಲ್ಲಿ ಭೇಟಿಯಾದ, ನನ್ನೊಂದಿಗೆ ಕೆಲಸ ಮಾಡಿದ ನಟರೊಂದಿಗೇ ರಿಲೇಶನ್‌ಶಿಪ್‌ ಬೆಳೆಸಿಕೊಂಡೆ” ಎಂದು ನಟಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Karnataka Election: ಜನರ ಸಮಸ್ಯೆ ಪರಿಹರಿಸಲು ಗ್ಯಾರಂಟಿ ಯೋಜನೆಗಳ ಜಾರಿ: ಪ್ರಿಯಾಂಕಾ ಗಾಂಧಿ
“ನನಗೆ ರಿಲೇಶನ್‌ಶಿಪ್‌ ಹೀಗೇ ಇರಬೇಕು ಎನ್ನುವ ಚೌಕಟ್ಟು ಇತ್ತು. ಯಾರೊಂದಿಗೆ ರಿಲೇಶನ್‌ಶಿಪ್‌ಗೆ ಬಿದ್ದರೂ ಅವರನ್ನು ಆ ಚೌಕಟ್ಟಿನಲ್ಲಿ ಕೂರಿಸುವ ಕೆಲಸವನ್ನೇ ನಾನು ಮಾಡುತ್ತಿದ್ದೆ. ಹಾಗಾಗಿ ಯಾವುದೂ ವರ್ಕ್‌ಔಟ್‌ ಆಗಲಿಲ್ಲ. ಕೆಲವು ರಿಲೇಶನ್‌ಶಿಪ್‌ ಅಂತೂ ತುಂಬಾ ಕ್ರೂರವಾಗಿ ಅಂತ್ಯವಾದವು. ಆದರೆ ನಾನು ರಿಲೇಶನ್‌ಶಿಪ್‌ನಲ್ಲಿದ್ದ ನನ್ನೆಲ್ಲ ಮಾಜಿ ಪ್ರಿಯತಮರು ಕೂಡ ತುಂಬಾನೇ ಒಳ್ಳೆಯವರಿದ್ದರು” ಎಂದು ನಟಿ ತಮ್ಮ ಮಾಜಿ ಪ್ರಿಯತಮರ ಬಗ್ಗೆ ಹೇಳಿಕೊಂಡಿದ್ದಾರೆ.

ನಿಕ್‌ ಜೋನಸ್‌ ಬಗ್ಗೆ ಪ್ರೀತಿಯಲ್ಲಿ ಬಿದ್ದ ವಿಚಾರದಲ್ಲಿಯೂ ಹೇಳಿಕೊಂಡಿರುವ ನಟಿ, “ಕ್ವಾಂಟಿಕೋ ಚಿತ್ರೀಕರಣದ ಸಮಯದಲ್ಲಿ ನಾನು ನಿಕ್‌ರೊಂದಿಗೆ ಪ್ರೀತಿಯಲ್ಲಿ ಬಿದ್ದೆ. ಆಗ ನಾನು ಸುಮ್ಮನೆ ಫೋನ್‌ನಲ್ಲಿ ಮಾತನಾಡುತ್ತಲೇ ಇರುತ್ತಿದ್ದೆ. ನನ್ನೆಲ್ಲ ಸ್ನೇಹಿತರು ನಾನು ನಿಕ್‌ಗೆ ಒಂದು ಚಾನ್ಸ್‌ ಕೊಡಬೇಕು ಎಂದು ಬಯಸಿದ್ದರು. ಹಾಗೆಯೇ ನಿಕ್‌ರ ಸಹೋದರ ಕೂಡ ಹಾಗೆಯೇ ಬಯಸಿದ್ದರು. ಹಾಗಾಗಿ ನಾನು ನಿಕ್‌ ಬಗ್ಗೆ ಒಂದೇ ರಾತ್ರಿಯಲ್ಲಿ ಗೂಗಲ್‌ ಮಾಡಿ ಮಾರನೇ ದಿನ ಬೆಳಗ್ಗೆಯೇ ಡೇಟ್‌ಗೆ ಓಕೆ ಎಂದೆ” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Priyanka Chopra: ಮಗಳು ಮಾಲತಿ ಜತೆ ಪ್ರಿಯಾಂಕಾ ಚೋಪ್ರಾ ಶಾಪಿಂಗ್‌ ಹೇಗಿತ್ತು?
ಪ್ರಿಯಾಂಕಾ ಅವರು ಬಾಲಿವುಡ್‌ನ ಶಹಿದ್‌ ಕಪೂರ್‌, ಶಾರುಖ್‌ ಖಾನ್‌, ಹರ್ಮಾನ್‌ ಬವೇಜಾ ಸೇರಿ ಅನೇಕರೊಂದಿಗೆ ರಿಲೇಶನ್‌ಶಿಪ್‌ನಲ್ಲಿದ್ದರು.

Exit mobile version