ಬೆಂಗಳೂರು: ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರ ಆಸ್ಕರ್‌ಗೆ ನಾಮಕರಣ ಆದಾಗಿನಿಂದಲೂ ಪ್ರಿಯಾಂಕಾ ಚೋಪ್ರಾ (Priyanka Chopra) ಅದನ್ನು ಬೆಂಬಲಿಸುತ್ತಾ ಬಂದಿದ್ದರು. ಅಮೆರಿಕದಲ್ಲಿ ಚಿತ್ರದ ಪ್ರದರ್ಶನದಲ್ಲಿಯೂ ನಟಿ ಹಾಜರಾಗಿದ್ದರು.
ಆದರೆ ಪಾಡ್‌ಕ್ಯಾಸ್ಟ್ ಚಾನೆಲ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಆರ್‌ಆರ್‌ಆರ್ ಚಿತ್ರವನ್ನು ‘ತಮಿಳು ಚಿತ್ರ’ ಎಂದು ಉಲ್ಲೇಖಿಸಿದ್ದು ಟ್ರೋಲ್‌ಗೆ ಒಳಗಾಗಿತ್ತು. ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ನಟಿಯ ವಿರುದ್ಧ ಗರಂ ಆಗಿದ ಬೆನ್ನಲ್ಲೇ ನಟಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ʻʻಈ ಕಾಮೆಂಟ್‌ಗಳು ಮತ್ತು ಟ್ರೋಲ್‌ಗಳಿಗೆ ನಾನು ಹೆಚ್ಚು ಗಮನ ಕೊಡುವುದಿಲ್ಲ, ಆದರೆ ನಾನು ಮುಂದೆ ಏನು ಮಾತನಾಡುತ್ತೇನೆ ಎಂಬುದರ ಬಗ್ಗೆ ಹೆಚ್ಚು ಜಾಗರೂಕಳಾಗಿರುತ್ತೇನೆʼ ಎಂದು ಹೇಳಿದ್ದಾರೆ.
ಪ್ರಿಯಾಂಕ ಚೋಪ್ರಾ ಟ್ರೋಲ್‌ಗೆ ಗುರಿಯಾಗಿದ್ಯಾಕೆ?
ಡಾಕ್ಸ್ ಶೆಪರ್ಡ್ ಅವರೊಂದಿಗೆ ಪಾಡ್‌ಕ್ಯಾಸ್ಟ್ ಚಾನೆಲ್ ಆರ್ಮ್‌ಚೇರ್ ಎಕ್ಸ್‌ಪರ್ಟ್‌ನ ಇತ್ತೀಚಿನ ಸಂದರ್ಶನದಲ್ಲಿ, ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಗ್ಗೆ ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡಿದ್ದರು. ಸಂದರ್ಶನದ ಸಮಯದಲ್ಲಿ, ನಿರೂಪಕರು RRR ಅನ್ನು ಬಾಲಿವುಡ್ ಚಲನಚಿತ್ರ ಎಂದು ಹೇಳಿದ್ದಾರೆ. ಬಾಲಿವುಡ್ ಮತ್ತು ಹಾಲಿವುಡ್ ಹೋಲಿಕೆ ಮಾಡುವಾಗ, ʻಕೆಲವು ಸೆಲೆಬ್ರಿಟಿಗಳನ್ನು ಮತ್ತು ಸ್ಟುಡಿಯೋಗಳು ಎಲ್ಲವನ್ನೂ ನಿಯಂತ್ರಿಸುತ್ತವೆʼ ಎಂದು ಹೇಳಿದರು. ಪ್ರಿಯಾಂಕಾ ಅವರ ಮಾತಿಗೆ ಒಪ್ಪಿಗೆ ಸೂಚಿಸಿ, “ನೀವು ದೂರದಲ್ಲಿದ್ದೀರಿ ಎಂದು ನಾನು ಭಾವಿಸುತ್ತೇನೆ, ದೊಡ್ಡ ಸ್ಟುಡಿಯೋಗಳು, ಕೆಲವು ನಟರುಗಳು ದೊಡ್ಡ ಸಿನಿಮಾಗಳನ್ನು ಚಲನಚಿತ್ರಗಳನ್ನು ಮಾಡುತ್ತಾರೆ. ಆದರೆ ಇದೀಗ ಎಲ್ಲವೂ ಬದಲಾಗಿದೆ. ಮೊದಲನೆಯದಾಗಿ ಸ್ಟ್ರೀಮಿಂಗ್ ಆಗಿದೆ. ಇದು ಕಂಟೆಂಟ್ ಮಾಡುತ್ತಿರುವ ಹಲವಾರು ಜನರಿಗೆ ಸಾಥ್ ನೀಡಿದೆ. ಬಾಲಿವುಡ್ ಉದ್ಯಮ ನಂಬಲಾಗದ ರೀತಿಯಲ್ಲಿ ವಿಕಸನಗೊಂಡಿದೆ.ʼʼಎಂದರು. ಆಗ ಸಂದರ್ಶನಕಾರ ʻಆರ್‌ಆರ್‌ಆರ್ ಸಿನಿಮಾ ಅಂತೆʼ ಎಂದು ಹೇಳಿದಾಗ, ನಟಿ ʻಆರ್‌ಆರ್‌ಆರ್ ಬಾಲಿವುಡ್ ಸಿನಿಮಾವಲ್ಲ, ತಮಿಳು ಸಿನಿಮಾʼ ಎಂದಿದ್ದಾರೆ.
ಪ್ರಿಯಾಂಕ ಸಂದರ್ಶಕರ ಮಾತನ್ನು ಸರಿಪಡಿಸಿ,ʻʻಆರ್‌ಆರ್‌ಆರ್ ತಮಿಳು ಚಿತ್ರ. ಇದು ದೊಡ್ಡ, ಮೆಗಾ, ಬ್ಲಾಕ್‌ಬಸ್ಟರ್ ಸಿನಿಮಾ. ಇದು ನಮ್ಮ ಅವೆಂಜರ್ಸ್‌ನಂತೆ” ಎಂದು ಹೇಳಿದರು. ನಟಿ ಆರ್‌ಆರ್‌ಆರ್ ಸಿನಿಮಾ ತಮಿಳು ಸಿನಿಮಾ ಅಂದಿರುವುದಕ್ಕೆ ಟ್ರೋಲ್‌ಗೆ ಗುರಿಯಾಗಿದ್ದರು. ಪ್ರಿಯಾಂಕಾ ಚೋಪ್ರಾ 2023ರ ಆಸ್ಕರ್‌ಗೆ ಮುಂಚಿತವಾಗಿ ಆರ್‌ಆರ್‌ಆರ್ ಸಿನಿಮಾವನ್ನು ಪ್ರಚಾರ ಮಾಡಿದ್ದರು. ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ ಚಲನಚಿತ್ರವನ್ನು ಅಭಿನಂದಿಸಿದ್ದರು. ಇಷ್ಟೆಲ್ಲ ಸಪೋರ್ಟ್ ಮಾಡಿರುವ ನಟಿ ಟ್ರೋಲ್‌ಗೆ ಗುರಿಯಾಗಿದ್ದರು.ʻʻ ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದಿರಿ. ಸಿನಿಮಾ ಬಗ್ಗೆ ಮಾತನಾಡುವ ಮೊದಲು ಸ್ವಲ್ಪ ಸಂಶೋಧನೆಯನ್ನು ಮಾಡಿ ಬನ್ನಿʼʼಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದರು.
ಇದನ್ನೂ ಓದಿ: Priyanka Chopra: ಆರ್‌ಆರ್‌ಆರ್ ತಮಿಳು ಸಿನಿಮಾ ಎಂದ ಪ್ರಿಯಾಂಕಾ ಚೋಪ್ರಾ: ಟ್ರೋಲ್‌ಗೆ ಗುರಿಯಾದ ನಟಿ
ಎತ್ತರಕ್ಕೆ ಹೋದ ತಕ್ಷಣ ಕೆಳಕ್ಕೆ ಎಳೆಯುವ ಪ್ರವೃತ್ತಿಯನ್ನು ಕೆಲವರು ಹೊಂದಿರುತ್ತಾರೆ ಎಂದ ಪ್ರಿಯಾಂಕ
ಈಗ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ, ʻʻಈ ಕಾಮೆಂಟ್‌ಗಳು ಮತ್ತು ಟ್ರೋಲ್‌ಗಳಿಗೆ ನಾನು ಹೆಚ್ಚು ಗಮನ ಕೊಡುವುದಿಲ್ಲ. ಆದರೆ ನಾನು ಮುಂದೆ ಏನು ಮಾತನಾಡುತ್ತೇನೆ ಎಂಬುದರ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತೇನೆ. ಜನರು ನಾನು ಮಾಡುವ ಯಾವುದಾದರೂ ತಪ್ಪನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಅಷ್ಟೇ ಅಲ್ಲದೇ ತಪ್ಪುಗಳನ್ನು ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ಹೆಚ್ಚು ಮುಕ್ತ ಮನೋಭಾವವನ್ನು ಹೊಂದಿದ್ದೆ, ಆದರೆ ಈಗ, ನಾನು ಸ್ವಲ್ಪ ಹೆಚ್ಚು ಜಾಗರೂಕನಾಗಿರುತ್ತೇನೆʼʼಎಂದರು.
ʻʻನೀವು ಜೀವನದಲ್ಲಿ ಎತ್ತರಕ್ಕೆ ಹೋದ ತಕ್ಷಣ ಇತರರನ್ನು ಕೆಳಕ್ಕೆ ಎಳೆಯುವ ಪ್ರವೃತ್ತಿಯನ್ನು ಕೆಲವರು ಹೊಂದಿರುತ್ತಾರೆ. ಆದರೆ ಅದೇ ಸಮಯದಲ್ಲಿ, ನನ್ನ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಂದ ನನಗೆ ತುಂಬಾ ಪ್ರೀತಿ ಮತ್ತು ಬೆಂಬಲವಿದೆ. ನಾನು ಅದರ ಮೇಲೆ ಹಚ್ಚು ಕೇಂದ್ರೀಕರಿಸಲು ಬಯಸುತ್ತೇನೆʼʼಎಂದರು.
ಪ್ರಿಯಾಂಕಾ ಇತ್ತೀಚೆಗೆ ಸಿಟಾಡೆಲ್ ಪ್ರಚಾರಕ್ಕಾಗಿ ನೀತಾ ಮುಖೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆಗಾಗಿ ಭಾರತಕ್ಕೆ ಭೇಟಿ ನೀಡಿದ್ದರು. ನಿಕ್ ಜೊನಾಸ್ ಸಹ ನಟಿಯ ಜತೆ ಬಂದಿದ್ದರು. ಶೀಘ್ರದಲ್ಲೇ ನಟಿ ‘ಸಿಟಾಡೆಲ್’ ಮತ್ತು ‘ಲವ್ ಎಗೇನ್’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ದಿ ರುಸ್ಸೋ ಬ್ರದರ್ಸ್‌ನ ನೇತೃತ್ವದಲ್ಲಿ, ಸಿಟಾಡೆಲ್ ಏಪ್ರಿಲ್ 28 ರಿಂದ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮ್ ಆಗಲಿದೆ.