Site icon Vistara News

Priyanka Chopra : ಮಗಳಿಗೆ ಪ್ರಿಯಾಂಕಾ-ನಿಕ್ ನೀಡಿದ ಸರ್‌ಪ್ರೈಸ್‌ ಏನು? ಮಾಲತಿ ಫುಲ್‌ ಖುಷ್‌!

Priyanka Chopra and Nick Jonas with daughter Malti Marie Chopra

ಬೆಂಗಳೂರು: ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಸಿಟಾಡೆಲ್‌ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇಟಲಿಯಲ್ಲಿ ಸಿಟಾಡೆಲ್ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ ನಂತರ ಈ ದಂಪತಿ ಮಗಳು ಮಾಲತಿ ಮೇರಿ ಚೋಪ್ರಾ ಜೋನಾಸ್ ಜತೆ ಕಾಲ ಕಳೆದಿದ್ದಾರೆ. ಪ್ರಿಯಾಂಕಾ ಅವರು ಮಾಲತಿ ಹಾಗೂ ನಿಕ್ ಜತೆಗಿನ ಫೋಟೊಗಳನ್ನು ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಮೊದಲ ಫೋಟೊದಲ್ಲಿ, ಪ್ರಿಯಾಂಕಾ ಮತ್ತು ಮಾಲತಿ ಹಾಸಿಗೆಯಲ್ಲಿ ಸಮಯ ಕಳೆದದ್ದು ಕಾಣಬಹುದು. ಪ್ರಿಯಾಂಕಾ ಮಲಗಿಕೊಂಡು ತಮ್ಮ ಕೈಯಲ್ಲಿದ್ದ ಆಟಿಕೆ ಹೆಲಿಕಾಪ್ಟರ್‌ ಹಿಡಿದು ಮಗಳಿಗೆ ಆಡಿಸುತ್ತಿರುವುದು ಕಾಣಬಹುದು. ಹಾಸಿಗೆಯ ಮೇಲೆ ಕೆಲವು ಪುಸ್ತಕಗಳೂ ಕಂಡವು. ಕಪ್ಪು ಬಣ್ಣದ ಬಟ್ಟೆ ತೊಟ್ಟಿದ್ದ ಪ್ರಿಯಾಂಕಾ ಮಗಳ ಜತೆ ಆಟವಾಡುತ್ತಿದ್ದಾರೆ. ಮಾಲತಿ ಪ್ರಿಂಟೆಡ್ ಪಿಂಕ್ ಡ್ರೆಸ್ ಧರಿಸಿದ್ದಾಳೆ.

ಎರಡನೇ ಫೋಟೊದಲ್ಲಿ, ಪ್ರಿಯಾಂಕಾ ಅವರು ಮಾಲತಿ ಬಳಿ ಕುಳಿತು ಕೈಯಲ್ಲಿ ಬ್ರೆಡ್ ಸ್ಟಿಕ್‌ಗಳ ಪ್ಯಾಕೆಟ್ ಹಿಡಿದಿದ್ದಾರೆ. ಮಾಲತಿ ಅಂಬೆಗಾಲಿಡುತ್ತ ಬ್ರೆಡ್ ಸ್ಟಿಕ್‌ಗಳ ಪ್ಯಾಕೆಟ್ ಹಿಡಿದುಕೊಳ್ಳಲು ಬರುವ ಫೋಟೊ ಹಂಚಿಕೊಂಡಿದ್ದಾರೆ. ನಿಕ್, ಕಪ್ಪು ಹೂಡಿ ಮತ್ತು ಮ್ಯಾಚಿಂಗ್ ಶಾರ್ಟ್ಸ್ ಧರಿಸಿ, ಪಕ್ಕದಲ್ಲಿ ನಿಂತು ಮಾಲತಿಯನ್ನು ಗಮನಿಸುತ್ತಿದ್ದಾರೆ. “ಗ್ರಿಸ್ಸಿನಿ ಲವ್” ಎಂದು ಪ್ರಿಯಾಂಕಾ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಕೆಲವು ಆರೋಗ್ಯ ಸಮಸ್ಯೆಗಳ ಕಾರಣಕ್ಕೆ ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದಿದ್ದಾರೆ. 2018ರಲ್ಲಿ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ 2022ರ ಜನವರಿಯಲ್ಲಿ ತಮಗೆ ಹೆಣ್ಣುಮಗು ಹುಟ್ಟಿದ್ದಾಗಿ ತಿಳಿಸಿದ್ದರು. ಹಾಗೇ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾಗಿಯೂ ಹೇಳಿದ್ದರು.

ಇದನ್ನೂ ಓದಿ: Priyanka Chopra: ಬಾಲ್ಕನಿ, ಲಿಫ್ಟ್‌ನಲ್ಲಿಯೂ ಪ್ರಿಯಾಂಕ-ನಿಕ್‌ ರೊಮ್ಯಾನ್ಸ್‌: ಫ್ಯಾನ್ಸ್‌ ಫುಲ್‌ ಖುಷ್‌!

ಪ್ರಿಯಾಂಕಾ ಸಿಟಾಡೆಲ್ ಸ್ಪೈ ಸೀರಿಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ದಿ ರುಸ್ಸೋ ಬ್ರದರ್ಸ್ ನಿರ್ದೇಶಿಸಿದ್ದಾರೆ. ಏಪ್ರಿಲ್ 28ರಂದು ಪ್ರೈಮ್ ವಿಡಿಯೊದಲ್ಲಿ ಎರಡು ಸಂಚಿಕೆಗಳೊಂದಿಗೆ ಪ್ರೀಮಿಯರ್ ಆಗಲಿದೆ. ನಂತರ ಪ್ರತಿ ಶುಕ್ರವಾರದಿಂದ ಮೇ 26ರವರೆಗೆ ಹೊಸ ಸಂಚಿಕೆಯನ್ನು ವಾರಕ್ಕೊಮ್ಮೆ ಬಿಡುಗಡೆ ಮಾಡಲಾಗುತ್ತದೆ.

ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ಪ್ರಿಯಾಂಕಾ

ಪ್ರಿಯಾಂಕಾ ಚೋಪ್ರಾ ನಟಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ `ಜೀ ಲೆ ಜರಾ’ದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಫರ್ಹಾನ್ ಅಖ್ತರ್ ನಿರ್ದೇಶಿಸಲಿದ್ದು, ಅವರು ನಟಿಸಲಿದ್ದಾರೆ. ಜಾನ್ ಸೆನಾ ಮತ್ತು ಇಡ್ರಿಸ್ ಎಲ್ಬಾ ಸಹ-ನಟಿಸಿದ `ಹೆಡ್ಸ್ ಆಫ್ ಸ್ಟೇಟ್’ ಎಂಬ ಅವರ ಮುಂದಿನ ಚಿತ್ರ ಪ್ರೈಮ್ ವಿಡಿಯೊದಲ್ಲಿ ಸ್ಟ್ರೀಮ್ ಆಗುತ್ತದೆ.

Exit mobile version