ಬೆಂಗಳೂರು: ಪಾಪ್ ಗಾಯಕ ಮತ್ತು ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಮೈದುನ ಅಂದರೆ ಪತಿ ನಿಕ್ ಜೋನಸ್ ಅವರ ಸಹೋದರ ಕೆವಿನ್ ಜೋನಸ್ (Kevin Jonas) ಅವರಿಗೆ ಚರ್ಮದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಗಾಯಕ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ,ಇತ್ತೀಚಿಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ ಎಂದು ಬಹಿರಂಗಪಡಿಸಿದ್ದಾರೆ.
‘ಲೀವ್ ಬಿಫೋರ್ ಯು ಲವ್ ಮಿ’ ಎಂಬ ಹಿಟ್ ಹಾಡಿಗೆ ಹೆಸರುವಾಸಿಯಾದ ಕೆವಿನ್, ಚರ್ಮದ ಕ್ಯಾನ್ಸರ್‌ನಿಂದ ಬಳ ಲುತ್ತಿದ್ದರು. ಜೂನ್ 11, ಮಂಗಳವಾರ ಪೋಸ್ಟ್ ಮಾಡಿದ ಅವರ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಅವರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಆರೋಗ್ಯಕ್ಕೆ ಆದ್ಯತೆ ನೀಡುವಂತೆ ತಮ್ಮ ಫಾಲೋವರ್ಸ್‌ಗಳಿಗೆ ಮನವಿ ಕೂಡ ಮಾಡಿದ್ದಾರೆ. ವಿಡಿಯೊದಲ್ಲಿ ಕೆವಿನ್ ಶಸ್ತ್ರಚಿಕಿತ್ಸೆಯ ನಂತರದ ತುಣುಕನ್ನು ಹಂಚಿಕೊಂಡಿದ್ದಾರೆ.
ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿ ಕೆವಿನ್ ತನಗೆ ಚರ್ಮದ ಕ್ಯಾನ್ಸರ್ ಇದ್ದ ಬಗ್ಗೆ ಹೇಳಿಕೊಂಡಿದ್ದು, ಶಸ್ತ್ರಚಿಕಿತ್ಸೆಯ ಬಳಿಕ ಸಂಪೂರ್ಣವಾಗಿ ಗುಣಮುಖವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಚರ್ಮದ ಮೇಲೆ ಕಂಡುಬರುವ ಗುಳ್ಳೆಗಳು, ಮಚ್ಚೆಗಳು, ಎಲ್ಲವೂ ಕ್ಯಾನ್ಸರ್ ಅಲ್ಲದಿದ್ದರೂ ಇದನ್ನು ಇಷ್ಟಕ್ಕೆ ನಿರ್ಲಕ್ಷ್ಯ ಮಾಡುವುದು ಕೂಡ ಒಳ್ಳೆಯದಲ್ಲ. ಏಕೆಂದರೆ ಇದು ಯಾವುದೇ ಸಂದರ್ಭದಲ್ಲಿ ಕ್ಯಾನ್ಸರ್ ಸ್ವರೂಪಕ್ಕೆ ತಿರುಗಬಹುದು ಎಂದು ಇದಾಗಲೇ ವೈದ್ಯರು ಕೂಡ ಎಚ್ಚರಿಕೆ ಕೊಟ್ಟಿದ್ದು, ಗಾಯಕ ಕೂಡ ಅದನ್ನೇ ಹೇಳಿದ್ದಾರೆ. ಸದ್ಯ ನಾನು ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದೇನೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಸದ್ಯ ಹುಷಾರಿಗಿದ್ದೇನೆ ಎಂದಿರುವ ಕೇವಿನ್ ಅವರು ಅಭಿಮಾನಿಗಳು ಧೈರ್ಯಗೆಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Priyanka Chopra: ಆಸ್ಟ್ರೇಲಿಯಾದ ಬೀಚ್‌ನಲ್ಲಿ ಅಮ್ಮನ ಸಿನಿ ತಂಡದ ಜತೆ ಎಂಜಾಯ್ ಮಾಡಿದ ಮಾಲತಿ ಮೇರಿ ಚೋಪ್ರಾ!
ನಿಕ್ ಜೋನಾಸ್ ಈ ಹಿಂದೆ ಕೆವಿನ್ ಆರೋಗ್ಯದ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದರು. ಕೆವಿನ್, ನಿಕ್ ಅವರಂತೆಯೇ, ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಅವರು ನಿಕ್ ಜೊತೆಗೆ ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿದ್ದರು. ಸಂಗೀತ ಪ್ರದರ್ಶನ ಕೂಡ ನೀಡಿದ್ದರು.
ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಚರ್ಮದ ಮೇಲೆ ಹೊಸ ಮಚ್ಚೆಯಂತಹದ್ದು ಬೆಳವಣಿಗೆಯಾದರೆ ಅದು ಚರ್ಮದ ಕ್ಯಾನ್ಸರ್ ಆಗಿರಬಹುದು. ಆರಂಭಿಕ ಹಂತದಲ್ಲಿಯೇ ಈ ರೋಗವನ್ನು ಪತ್ತೆ ಹಚ್ಚಿದರೆ, ಸುಲಭವಾಗಿ ಚಿಕಿತ್ಸೆ ಪಡೆದು ಚರ್ಮದ ಕ್ಯಾನ್ಸರ್ ತಡೆಗಟ್ಟಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.