ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ʻಕ್ಯಾಪ್ಚರ್ʼ ಹಾರರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಇಂದು ಹ್ಯಾಲೋವೀನ್ ಹಬ್ಬ. ಇದರ ಅಂಗವಾಗಿ ಪ್ರಿಯಾಂಕಾ ಅವರ ಮಗ ಆಯುಷ್ ಅವರು ಪ್ರಿಯಾಂಕಾ ಅವರಿಗೆ ಸಿನಿಮಾ ಕುರಿತಾಗಿ ವಿಶೇಷ ಸಂದರ್ಶನವನ್ನು ಮಾಡಿದರು.
ಹ್ಯಾಲೋವೀನ್ ಅಂದರೆ ಏನು?
ಹಬ್ಬವನ್ನು ಹೆಚ್ಚಾಗಿ ಅಮೆರಿಕ, ಬ್ರಿಟನ್ ಮತ್ತು ಇತರೆ ಐರೋಪ್ಯ ದೇಶಗಳಲ್ಲಿ ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಜನರು ಹ್ಯಾಲೋವೀನ್ ಪಾರ್ಟಿಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈ ದಿನ ಜನರು ದೆವ್ವ, ಪಿಶಾಚಿ, ಪ್ರೇತಾತ್ಮ, ಮಮ್ಮಿ, ರಾಕ್ಷಸರು ಮುಂತಾದ ಭಯಾನಕ ವೇಷಗಳನ್ನು ಧರಿಸಿ ಅದ್ದೂರಿ ಪಾರ್ಟಿಗಳನ್ನು ಆಯೋಜಿಸುತ್ತಾರೆ.
ಆಯುಷ್ ಸಂದರ್ಶನ
ಪ್ರಿಯಾಂಕಾ ಅವರು ಹಾರರ್ ಸಿನಿಮಾ ಬಗ್ಗೆ ಹಲವು ಮಾಹಿತಿಯನ್ನು ಹಂಚಿಕೊಂಡರು. ʻʻವೀಕೆಂಡ್ ಬಂತೆಂದರೆ ಹಾರರ್ ಸಿನಿಮಾವನ್ನು ಚಿಕ್ಕ ವಯಸ್ಸಿನಲ್ಲಿ ನಾವು ನೋಡುತ್ತಿದ್ದೇವು. ಹಾರರ್ ಸಿನಿಮಾವನ್ನು ಎಂಟರ್ಟೈನಮೆಂಟ್ ಆಗಿ ತೆಗೆದುಕೊಳ್ಳಬೇಕು. ಥ್ರಿಲ್ ಇರುತ್ತೆ. ಅದನ್ನು ಸಿರಿಯೇಸ್ ಆಗಿ ತೆಗೋಬಾರದು. ನನ್ನ ಫಸ್ಟ್ ಹಾರರ್ ʻಮಮ್ಮಿʼಸಿನಿಮಾ. ಆ ಸಿನಿಮಾ ಮಾಡುವಾಗ ಖುಷಿ ಇತ್ತು. ಆ ಸಿನಿಮಾದಲ್ಲಿ ಎಲ್ಲ ಕಟೆಂಟ್‌ಗಳು ಇದ್ದವು. ತಾಯಿ ಮಗುವಿನ ಸಂಬಂಧ ಹೀಗೆ ಹಲವು ವಿಚಾರಗಳು ಇದ್ದವುʼʼಎಂದರು.
ಇದನ್ನೂ ಓದಿ: Priyanka Upendra: ‘ಕ್ಯಾಪ್ಚರ್’ನಲ್ಲಿ ಪ್ರಿಯಾಂಕಾ ಮಗಳಾಗಿ ಮಾನ್ವಿತಾ ಎಂಟ್ರಿ!
ಕಲ್ಪನಾ ನನ್ನ ಇಷ್ಟದ ಸಿನಿಮಾ
ʻ ಉಪೇಂದ್ರ ಅವರ ಹಾರರ್ ಸಿನಿಮಾದಲ್ಲಿ ಕಲ್ಪನಾ ಸಿನಿಮಾ ನನಗೆ ತುಂಬಾ ಇಷ್ಟವಾಗಿತ್ತು. ಉಶ್ ಕೂಡ ಹೌದು. ನಾನು ತುಂಬಾ ಪೂಜೆ ಮಾಡುವುದು ನಿಮಗೆ ಗೊತ್ತು. ಸೈಕಾಲಿಜಿಕಲಿ ನನಗೆ ಮನೆಗೆ ಬಂದಾಗ ಅದಿಕ್ಕೆ ಭಯ ಎನಿಸುವುದಿಲ್ಲ. ನಾವು ಶೂಟಿಂಗ್ ಮಾಡುವ ಮುಂಚೆಯೂ ಪೂಜೆ ಮಾಡುತ್ತೇವೆ. ಕ್ಯಾಪ್ಚರ್ ಸಿನಿಮಾ ಇದೀಗ ರಿಲೀಸ್ ಹಂತದಲ್ಲಿದೆ. ಈ ಸಿನಿಮಾ ತುಂಬಾ ಹೆದರಿಕೆ ಹುಟ್ಟಿಸುತ್ತದೆ. ನಾನು, ಮಾನ್ವಿತಾ ಎಲ್ಲರೂ ಕೆಲವೊಂದು ದೃಶ್ಯಗಳಿಗೆ ಹೆದರಿದ್ದೂ ಇದೆ. ನಾವು ಜಾಸ್ತಿ ರಾತ್ರಿ ಶೂಟಿಂಗ್ ಮಾಡುತ್ತಿದ್ದೇವು. ಈ ಸಿನಿಮಾದಲ್ಲಿ ಸಿಸಿಟಿವ್ ಪಾಯಿಂಟ್ ಆಫ್ ವ್ಯೂವ್ ಇದೆ. ಇಡೀ ಮನೆ ಕತ್ತಲಾಗಿತ್ತು. ಕ್ಯಾಮೆರಾ ಆನ್ ಮಾಡಿರುತ್ತಿದ್ದರು. ಆದರೂ ಈ ಸಿನಿಮಾ ಶೂಟ್ ಮಾಡುವಾಗ ಮನೆಯಲ್ಲಿ ಯಾರೂ ಇಲ್ಲ, ನಾವು ಮಾತ್ರ ಎಂಬ ಫಿಲ್ ಇತ್ತು. ಈ ಸಿನಿಮಾ ಇಡೀ ಕನ್ನಡ ಚಿತ್ರರಂಗದಲ್ಲಿಯೇ ಹೊಸ ಪ್ರಯೋಗʼʼಎಂದು ಹಲವು ಮಾಹಿತಿಗಳನ್ನು ಹಂಚಿಕೊಂಡರು.
ಇದನ್ನೂ ಓದಿ: Priyanka Upendra: ಪ್ರಿಯಾಂಕಾ ನಟನೆಯ ‘ಕ್ಯಾಪ್ಚರ್’ ಸಿನಿಮಾ; 60 ಅಡಿ ಎತ್ತರದ ಟೈಟಲ್ ಪೋಸ್ಟರ್ ರಿಲೀಸ್!
ವಿಶೇಷ ಎಂದರೆ ಈ ಸಿನಿಮಾಗೆ ಮಮ್ಮಿ, ದೇವಕಿ ಸಿನಿಮಾ ಖ್ಯಾತಿಯ ನಿರ್ದೇಶಕ ಲೋಹಿತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಷನ್‌ನ 3ನೇ ಸಿನಿಮಾ ಇದಾಗಿದೆ. ಈ ಸಿನಿಮಾಗೆ ರವಿರಾಜ್ ಅವರು ತಮ್ಮ ಶ್ರಿ ದುರ್ಗಾ ಪರಮೇಶ್ವರಿ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಈ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಅಂದಹಾಗೆ ರವಿರಾಜ್ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರ ಸಹೋದರ.ಕ್ಯಾಪ್ಚರ್ ಬಗ್ಗೆ ಹೇಳುವುದಾದರೆ ಹಾರರ್ ಅಂದಮೇಲೆ ಭಯ, ಕುತೂಹಲ, ಟ್ವಿಸ್ಟ್‌ಗಳು ಇದ್ದೇ ಇರುತ್ತೆ. ಇದೆಲ್ಲದರ ಜತೆಗೆ ಈ ಸಿನಿಮಾ ಒಂದು ವಿಭಿನ್ನ ಅನುಭವ ನೀಡಲಿದೆ. ಯಾಕೆಂದರೆ ಸಂಪೂರ್ಣ ಸಿನಿಮಾ ಸಿಸಿ ಟಿವಿ ಕಾನ್ಸೆಪ್ಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ.
ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡಲಾಗಿದೆ.ಚಿತ್ರಕ್ಕೆ ಎಸ್ ಪಾಂಡಿಕುಮಾರ್ ಕ್ಯಾಮೆರಾ ವರ್ಕ್ ಮಾಡಿದ್ದು ರವಿಚಂದ್ರನ್ ಅವರ ಸಂಕಲನವಿದೆ. ಸಿನಿಮಾ ಮುಂದಿನ ತಿಂಗಳು ನವೆಂಬರ್‌ನಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.