ಬೆಂಗಳೂರು : ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra)`ʻಪ್ರಜೆಯೇ ಪ್ರಭು’ ಎಂಬ ಚಿತ್ರದ ಮೂಲಕ ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಪೇಂದ್ರ ಅವರ ಪ್ರಜಾಕೀಯದ ವಿಚಾರಗಳನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ರಾಜಕೀಯ ಹಿನ್ನೆಲೆಯುಳ್ಳ ಈ ಸಿನಿಮಾ ಮಹಿಳಾ ಪ್ರಧಾನ ಕಥೆಯನ್ನೂ ಹೊಂದಿದೆ.
ಸಾಯಿಲಕ್ಷಣ್ ಅವರು ಈ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸೌಭಾಗ್ಯ ಸಿನಿಮಾಸ್ ಅಡಿಯಲ್ಲಿ ಮೂವರು ಉದ್ಯಮಿ ಗೆಳೆಯರು ಸೇರಿಕೊಂಡು ಬಂಡವಾಳ ಹೂಡುತ್ತಿದ್ದಾರೆ. ಭಾರತವನ್ನು ಅಭಿವೃದ್ದಿ ಪಥಕ್ಕೆ ತೆಗೆದುಕೊಂಡು ಹೋಗಬೇಕೆನ್ನುವ ಪ್ರಿಯಾಂಕಾ ಮಾನವ ಜೀವ ಒಂದೇ ಅಲ್ಲ, ಸರ್ವ ಜೀವಿಗಳು ಸುಖವಾಗಿರಲು ಎಂದೇ ಇವಳ ಅಭಿಲಾಷೆಯಾಗಿರುತ್ತದೆ. ಹಾಗೆಯೇ ಜನರು ನಿಸ್ವಾರ್ಥದಿಂದ ಉನ್ನತ ಹುದ್ದೆಗೆ ಜನಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಅವರು ಸ್ಥಾರ್ಥವನ್ನು ಬಯಸದೆ ಕೆಲಸ ಮಾಡಬೇಕು. ಆಸೆಗಳಿಗೆ ಬಲಿಯಾಗಬಾರದು ಎಂಬುದನ್ನು ಹೇಳಲು ಹೊರಟಿದ್ದಾರೆ.
ಇದನ್ನೂ ಓದಿ | Snehith Jagadeesh | ಸ್ನೇಹಿತ್ ಬೆನ್ನಿಗೆ ನಿಂತ ನಟಿ ಪ್ರಿಯಾಂಕಾ, ನಟ ಉಪೇಂದ್ರ
ಎಂ.ಕೆ.ಇಂದ್ರ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ವಿ.ನಾಗೇಂದ್ರ ಪ್ರಸಾದ್ ಗೀತ ರಚನೆ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿರೋ ಸಂಭಾಷಣೆ ಉತ್ತರ ಕರ್ನಾಟಕ ಶೈಲಿಯಲ್ಲಿಯೇ ಇರುತ್ತದೆ.
ಇದನ್ನೂ ಓದಿ | Kabza Movie | ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಚಿತ್ರದ ರಿಲೀಸ್ ಡೇಟ್‌ಗಾಗಿ ಹೆಚ್ಚಾಗಿದೆ ಕಾತರ!