Site icon Vistara News

Naga Vamsi: ಸಪ್ತ ಸಾಗರದಾಚೆ ಎಲ್ಲೋ ತುಂಬಾ ಗೋಳು ಸಿನಿಮಾ, ಯಾಕೆ ನೋಡಬೇಕು? ನಿರ್ಮಾಪಕ ನಾಗ ವಂಶಿ!

Producer Naga Vamsi reviews Rakshit Shetty Sapta Sagaradaache Ello

ಬೆಂಗಳೂರು: ತೆಲುಗಿನ ನಿರ್ಮಾಪಕ ನಾಗ ವಂಶಿ (Naga Vamsi) ಆಗಾಗ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಮುಂಚೆ ನಿರ್ಮಾಪಕ ನಾಗ ವಂಶಿ ಮಾತ್ರ ಅವತಾರ್-2 ಬಗ್ಗೆ ಟೀಕಿಸಿ ಟ್ವೀಟ್ ಮಾಡಿ ಸಖತ್‌ ಚರ್ಚೆಯಲ್ಲಿದ್ದರು. ಆದರೀಗ ರಕ್ಷಿತ್‌ ಶೆಟ್ಟಿ ನಟನೆಯ ಸಪ್ತ ಸಾಗರ ದಾಚೆ ಸಿನಿಮಾ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಅತ್ಯಂತ ಗೋಳಿನ ಚಿತ್ರಗಳನ್ನು ನೋಡಲು ಹಣ ಖರ್ಚು ಮಾಡುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಫಿಲಂ ಕಂಪ್ಯಾನಿಯನ್ ಸೌಥ್ ಯೂಟ್ಯೂಬ್ ಚಾನೆಲ್​ನಲ್ಲಿ ಆಯೋಜಿಸಲಾಗಿದ್ದ ರೌಂಡ್ ಟೇಬಲ್ ಸಂವಾದದಲ್ಲಿ ನಾಗ ವಂಶಿ ಮಾತನಾಡಿ, ‘ನಾವು ಈಗಾಗಲೇ ಜೀವನದಲ್ಲಿ ನಮ್ಮದೇ ಆದ ಹೋರಾಟ ನಡೆಸುತ್ತಿದ್ದೇವೆ. ದುಃಖದ ಚಿತ್ರಗಳನ್ನು ನೋಡಿ ನಾವು ಮತ್ತೆ ಏಕೆ ಖಿನ್ನತೆಗೆ ಒಳಗಾಗಬೇಕು? ಜನರು ಮನರಂಜನೆಗಾಗಿ ಮತ್ತು ನಿಜ ಜೀವನದಲ್ಲಿ ಮಾಡಲಾಗದ ವಿಷಯಗಳನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಹೋಗುತ್ತಾರೆʼʼಎಂದರು.

“ಜೆರ್ಸಿಯಂತಹ ರಿಯಲಿಸ್ಟಿಕ್ ಸಿನಿಮಾ ಮಾಡಿದ್ದೇವೆ. ಇದು ಖಿನ್ನತೆಯ ಚಿತ್ರವಲ್ಲ. ನಾಯಕನ ಮಗ ತನ್ನ ತಂದೆ ಮಾಡಿದ್ದಕ್ಕೆ ಹೆಮ್ಮೆ ಪಡುತ್ತಾನೆ ಮತ್ತು ಅವನು ದುಃಖಿಸುವುದಿಲ್ಲ. ನಾನು ನೋಡಲು ಇಷ್ಟಪಡುವ ಚಿತ್ರಗಳನ್ನು ನಾನು ನಿರ್ಮಿಸುತ್ತೇನೆ. ಇದು ಮತ್ತೊಮ್ಮೆ ಒಬ್ಬರ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆʼʼಎಂದಿದ್ದಾರೆ. ಕೆಲವು ಜನರು ಈ ಹೇಳಿಕೆಯನ್ನು ಬೆಂಬಲಿಸಿದರೆ, ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಕೆಲವು ಅಭಿಮಾನಿಗಳು ವಂಶಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: SSE SideB Twitter Review: ʻಸಪ್ತ ಸಾಗರದಾಚೆ ಎಲ್ಲೋʼ ಸೈಡ್‌ ಬಿ ಬಗ್ಗೆ ಜನಾಭಿಪ್ರಾಯ ಹೀಗಿದೆ

ಫಿಲಂ ಕಂಪ್ಯಾನಿಯನ್ ಸೌಥ್ ಯೂಟ್ಯೂಬ್ ಚಾನೆಲ್​ನಲ್ಲಿ ಆಯೋಜಿಸಲಾಗಿದ್ದ ರೌಂಡ್ ಟೇಬಲ್ ಸಂವಾದದಲ್ಲಿ ನಿರೂಪಕ ರಾಮ್ ವೆಂಕಟ್, ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ತುಸು ಲ್ಯಾಗ್ ಅನಿಸುತ್ತದೆ ಆದರೆ ಒಳ್ಳೆಯ ಸಿನಿಮಾ, ಆದರೆ ಸೈಡ್ ಬಿ ರಿವಾರ್ಡಿಂಗ್ ಆಗಿದೆ’ ಎಂದರು. ಅವರ ಮಾತಿಗೆ ನಟಿ ಸ್ವಾತಿ ರೆಡ್ಡಿ, ‘ನಾನು ಸಹ ಇದನ್ನು ಕೇಳಿದ್ದೇನೆ, ‘ಸೈಡ್ ಬಿ’ ನಲ್ಲಿ ಸ್ಯಾಡ್ ಅಂಶಗಳಿಲ್ಲ ಬದಲಿಗೆ ಅವರು ಭರವಸೆಯನ್ನು ಮೂಡಿಸುವ ಕ್ಲೈಮ್ಯಾಕ್ಸ್ ಇಟ್ಟಿದ್ದಾರಂತೆ. ನಾನು ಆ ಸಿನಿಮಾ ನೋಡಬೇಕು’’ ಎಂದರು.

ಇದೀಗ ಈ ವಿಡಿಯೊ ವೈರಲ್‌ ಆಗುತ್ತದ್ದಂತೆ ನೆಟ್ಟಿಗರು ʻʻಸಪ್ತ ಸಾಗರ ಸಿನಿಮಾ ನಿಮ್ಮನ್ನು ಖಿನ್ನತೆಗೆ ಒಳಪಡಿಸುವುದಿಲ್ಲ, ಇದು ನಿಜ ಜೀವನದಲ್ಲಿ ನಿಜವಾದ ಪ್ರೀತಿ ಏನೆಂದು ತೋರಿಸುತ್ತದೆ” ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಸೈಡ್ ಎ ಮತ್ತು ಬಿ ಸಿನಿಮಾವನ್ನು ವೀಕ್ಷಿಸದಿದ್ದರೆ ನಿಮ್ಮ ಜೀವನವು ಯಾವಾಗಲೂ ಅಪೂರ್ಣವಾಗಿರುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜತೆಗೆ ಅಚ್ಯುತ್ ಕುಮಾರ್, ಅವಿನಾಶ್, ಚೈತ್ರಾ ಆಚಾರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ರಕ್ಷಿತ್ ಶೆಟ್ಟಿ.

Exit mobile version