Site icon Vistara News

Project K Prabhas: `ಪ್ರಾಜೆಕ್ಟ್‌ ಕೆ’ ಚಿತ್ರದ ಪ್ರಭಾಸ್‌ ಫಸ್ಟ್‌ ಲುಕ್‌ ಔಟ್‌!

Project K first look

ಬೆಂಗಳೂರು; ಪ್ರಭಾಸ್​ ಅಭಿನಯಿಸುತ್ತಿರುವ ʻಪ್ರಾಜೆಕ್ಟ್ ಕೆʼ (Project K Prabhas) ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ (Project K First Look Poster) ಈಗ ಬಿಡುಗಡೆ ಆಗಿದೆ. ನಿರ್ದೇಶಕ ನಾಗ್ ಅಶ್ವಿನ್ ಅವರು ಲುಕ್‌ ಅನಾವರಣಗೊಳಿಸಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ, ಅಮಿತಾಭ್‌ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಸಹ ನಟಿಸಿದ್ದಾರೆ. ಈಗಾಗಲೇ ಬಾಲಿವುಡ್‌ನ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಲುಕ್‌ ಬಿಡುಗಡೆಗೊಂಡಿದೆ.

ವೈಜಯಂತಿ ಮೂವೀಸ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫಸ್ಟ್‌ ಲುಕ್‌ ಅನಾವರಂಗೊಂಡಿದೆ. ಪ್ರಭಾಸ್ ರಕ್ಷಾಕವಚದಲ್ಲಿ ಕಾಣಿಸಿಕೊಂಡಿದ್ದು, ಮುಷ್ಟಿಯಿಂದ ನೆಲಕ್ಕೆ ಹೊಡೆಯುವಂತೆ ಭಾರಿ ಲುಕ್‌ನಲ್ಲಿ ಕಂಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಪ್ರಭಾಸ್‌ ಉದ್ದ ಕೂದಲು ಮತ್ತು ಗಡ್ಡ ಬಿಟ್ಟಿದ್ದಾರೆ. ಸೈನ್ಸ್​ ಫಿಕ್ಷನ್​ ಪ್ರಕಾರದಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ಬಹುಕೋಟಿ ರೂಪಾಯಿ ಬಂಡವಾಳ ಹೂಡಲಾಗುತ್ತಿದೆ. ಆದರೂ ಕೂಡ ಫಸ್ಟ್​ ಲುಕ್​ ಪೋಸ್ಟರ್​ ಮಿಶ್ರ ಪ್ರತಿಕ್ರಿಯೆ ಪಡೆದಿದೆ.

ಪ್ರಾಜೆಕ್ಟ್‌ ಕೆ ಸಿನಿಮಾ ವಿಷ್ಣು ದೇವರ ಭವಿಷ್ಯದ ಪುನರ್ಕಲ್ಪನೆಯ ಕುರಿತಾದ ಸಿನಿಮಾ ಎಂದು ಹೇಳಲಾಗುತ್ತಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ಮಹಾನಟಿ’ಯನ್ನು ನಿರ್ದೇಶಿಸಿದ್ದ ನಿರ್ದೇಶಕ ನಾಗ್‌ ಅಶ್ವಿನ್‌ ಅವರು ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಇದನ್ನೂ ಓದಿ: Kamal Haasan: ʻಪ್ರಾಜೆಕ್ಟ್ ಕೆʼ ಸಿನಿಮಾದಲ್ಲಿ ಪ್ರಭಾಸ್‌ಗೆ ಕಮಲ್ ಹಾಸನ್ ವಿಲನ್‌!

ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ತಿಂಗಳ ಆರಂಭದಲ್ಲಿ ಪ್ರಾಜೆಕ್ಟ್‌ ಕೆ ಸಿನಿಮಾ ಸ್ಯಾನ್‌ ಡಿಯಾಗೊದಲ್ಲಿ ಕಾಮಿಕ್‌ ಕಾನ್‌ನ ಭಾಗವಾಗಲಿದೆ ಎಂದು ಘೋಷಿಸಲಾಗಿತ್ತು. ಈ ರೀತಿ ಕಾಮಿಕ್‌ ಕಾನ್‌ಗೆ ಆಯ್ಕೆಯಾದ ಮೊದಲನೇ ಭಾರತೀಯ ಸಿನಿಮಾ ಎನ್ನುವ ಖ್ಯಾತಿಯನ್ನೂ ಇದು ಪಡೆದುಕೊಂಡಿತ್ತು. ಈ ಬಗ್ಗೆ ದೀಪಿಕಾ ಪಡುಕೋಣೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. “ಕಾಮಿಕ್ ಕಾನ್‌ಗೆ ಹೋದ ಮೊದಲ ಭಾರತೀಯ ಚಲನಚಿತ್ರದ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಅಲ್ಲಿ ನಿಮ್ಮನ್ನು ನೋಡೋಣ” ಎಂದು ದೀಪಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

ದೀಪಿಕಾ ಅವರು ʼಪ್ರಾಜೆಕ್ಟ್‌ ಕೆʼ ಸಿನಿಮಾದ ನಂತರ ಬಾಲಿವುಡ್‌ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ʼಜವಾನ್‌ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಅವರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ ಮತ್ತು ಪ್ರಿಯಾಮಣಿ ಬಣ್ಣ ಹಚ್ಚಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದಾರೆ.

Exit mobile version