ಬೆಂಗಳೂರು: ಎಆರ್ ರೆಹಮಾನ್ (AR Rahman) ಪುಣೆಯಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವನ್ನು ಪೊಲೀಸರು ಅರ್ಧಕ್ಕೇ ಮೊಟಕುಗೊಳಿಸಿದ್ದು ವರದಿಯಾಗಿದೆ. ಏಪ್ರಿಲ್ 30ರಂದು ಆಯೋಜಿಸಲಾಗಿದ್ದ ರಸಮಂಜರಿ ಕಾರ್ಯಕ್ರಮ ರಾತ್ರಿ 10 ಗಂಟೆಯಾದರೂ ಮುಗಿಯದ ಕಾರಣ, ಪೊಲೀಸರು ಕಾರ್ಯಕ್ರಮ ನಿಲ್ಲಿಸುವಂತೆ ಸೂಚಿಸಿದ್ದಾರೆ. ಸುಪ್ರೀಂ ಕೋರ್ಟ್ ನಿಯಮದ ಪ್ರಕಾರ ರಾತ್ರಿ 10 ಗಂಟೆಯೊಳಗೆ ಪುಣೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಮುಗಿಸಬೇಕು. ಹಾಗೆಯೇ ರೆಹಮಾನ್ ಅವರಿಗೂ ಪೊಲೀಸರು ಹಾಡು ನಿಲ್ಲಿಸುವಂತೆ ಸೂಚಿಸಿದ್ದಾರೆ. ಪೊಲೀಸರ ಸೂಚನೆಯಂತೆ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಲಾಗಿದೆ.
ರೆಹಮಾನ್ ವೇದಿಕೆಯಲ್ಲಿ ʻಚಂಯ್ಯ ಚಂಯ್ಯʼ ಹಾಡು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಗೀತ ರಸಿಕರನ್ನು ಮನರಂಜಿಸಿತ್ತು. ಆದರೆ ಸಂಪೂರ್ಣ ಆನಂದಿಸುವ ಮೊದಲೇ ರೆಹಮಾನ್ ಕಾರ್ಯಕ್ರಮ ರದ್ದಾಗಿದೆ. ಪೊಲೀಸರು ಎಂಟ್ರಿ ಕೊಟ್ಟು ನಿಲ್ಲಿಸುವಂತೆ ಸೂಚಿಸುವ ವಿಡಿಯೊ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಗಳು ವ್ಯಕ್ತವಾಗಿದೆ.
ರೆಹಮಾನ್ ಕೂಡ ಪುಣೆಯ ಜನರಿಗೆ ಧನ್ಯವಾದ ಸೂಚಿಸಿದ್ದಾರೆ. “ನಾವು ಪ್ರೇಕ್ಷಕರ ಪ್ರೀತಿಯಿಂದ ಸಂತೋಷಗೊಂಡಿದ್ದೇವೆ. ಪುಣೆ, ಇಂತಹ ಸ್ಮರಣೀಯ ಸಂಜೆಗಾಗಿ ಮತ್ತೊಮ್ಮೆ ಧನ್ಯವಾದಗಳು. ನಮ್ಮ ರೋಲರ್ ಕೋಸ್ಟರ್ ರೈಡ್‌ನ ಸಣ್ಣ ತುಣುಕು ಇಲ್ಲಿದೆʼʼ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: AR Rahman: ರೆಹಮಾನ್ ತಮ್ಮ ಪತ್ನಿಗೆ ಹಿಂದಿಯಲ್ಲಿ ಮಾತನಾಡಬೇಡ ಅಂದಿದ್ಯಾಕೆ?
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವಿಕಟನ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ರೆಹಮಾನ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಪತ್ನಿ ಸಾಯಿರಾ ಬಾನು ಅವರನ್ನು ವೇದಿಕೆಗೆ ಆಹ್ವಾನಿಸಿ ಕೆಲವು ಮಾತುಗಳನ್ನು ಹೇಳಲು ಕರೆದರು. ರೆಹಮಾನ್ ಅವರು ಪತ್ನಿ ಸಾಯಿರಾ ಬಾನು ಅವರಿಗೆ ಧನ್ಯವಾದ ಹೇಳಿದಾಗ ಸಾಯಿರಾ ಭಾವುಕರಾದರು.
ಸಂಗೀತ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ ಪೊಲೀಸ್
ಟ್ರೋಫಿಯನ್ನು ತನಗೆ ನೀಡಿದ ರೆಹಮಾನ್ ಅವರನ್ನು ತಬ್ಬಿಕೊಂಡರು. ಮಾತನಾಡಲು ಮುಂದಾದಾಗ, ರೆಹಮಾನ್ ಅವರು ಪತ್ನಿಗೆ “ದಯವಿಟ್ಟು ತಮಿಳಿನಲ್ಲಿ ಮಾತನಾಡು, ಹಿಂದಿಯಲ್ಲಿ ಬೇಡ ” ಎಂದಿದ್ದಾರೆ. ಈ ವೇಳೆ ಸಾಯಿರಾ ನಗುತ್ತಲೇ “ಕ್ಷಮಿಸಿ, ನನಗೆ ತಮಿಳಿನಲ್ಲಿ ನಿರರ್ಗಳವಾಗಿ ಮಾತನಾಡಲು ಬರುವುದಿಲ್ಲ. ಆದ್ದರಿಂದ, ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ತುಂಬಾ ಸಂತೋಷ ಮತ್ತು ಉತ್ಸುಕಳಾಗಿದ್ದೇನೆ. ಏಕೆಂದರೆ ಅವರ ಧ್ವನಿ ನನ್ನ ನೆಚ್ಚಿನದು. ನಾನು ಅವರ ಧ್ವನಿಗೆ ಪ್ರೀತಿಯಲ್ಲಿ ಬಿದ್ದೆ. ಇದಿಷ್ಟು ನಾನು ಹೇಳಬಲ್ಲೆ” ಎಂದಿದ್ದರು.
ಇದನ್ನೂ ಓದಿ: AR Rahman: ರೆಹಮಾನ್ ತಮ್ಮ ಪತ್ನಿಗೆ ಹಿಂದಿಯಲ್ಲಿ ಮಾತನಾಡಬೇಡ ಅಂದಿದ್ಯಾಕೆ?
ಎಆರ್ ರೆಹಮಾನ್ ಅವರು ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್: ಭಾಗ 2 ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರ ಏಪ್ರಿಲ್ 28ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ವರ್ಷ ಶಿವಕಾರ್ತಿಕೇಯನ್ ಅವರ ʻಅಯಾಲನ್ʼ ಮತ್ತು ಉದಯನಿಧಿ ಸ್ಟಾಲಿನ್ ಅವರ ʻಮಾಮಣ್ಣನ್ ʼ ಸಿನಿಮಾಗಳಿಗೂ ಸಂಗೀತ ನೀಡಿದ್ದಾರೆ. ಮೈದಾನ್, ಪಿಪ್ಪಾ, ಆಡುಜೀವಿತಂ, ಲಾಲ್ ಸಲಾಮ್ ಮತ್ತು ಗಾಂಧಿ ಟಾಕ್ಸ್ ಅವರ ಮುಂಬರುವ ಕೆಲವು ಚಲನಚಿತ್ರಗಳು.