ಬೆಂಗಳೂರು: ಮಾ.17ರಂದು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ 49ನೇ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ‘ಅಪ್ಪು ಉತ್ಸವ’ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಪ್ಪು ಸಮಾಧಿಗೆ ಲಕ್ಷಾಂತರ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ದರ್ಶನಕ್ಕೆ ಬಿಟಿಎಂ ನಿವಾಸಿ 80ರ ವೃದ್ಧ ಕೂಡ ಬಂದಿದ್ದು, ಜತೆಗೆ ಬಳ್ಳಾರಿಯಿಂದ 19ದಿನಗಳ ನವಜಾತ ಶಿಶು ಜತೆ ತಾಯಿ ಬಂದಿದ್ದಾರೆ.
ಚಿಕ್ಕ ಮಕ್ಕಳು ಗುಲಾಬಿ ಹಿಡಿದು ಅಪ್ಪು ಸಮಾಧಿಗೆ ಆಗಮಿಸುತ್ತಿದ್ದಾರೆ. ಅಪ್ಪು ಮಾಲೆ ಧರಿಸಿ ಹೊಸಪೇಟೆಯಿಂದ ಅಭಿಮಾನಿಗಳು ಬಂದಿದ್ದಾರೆ. ಜತೆಗೆ ಬಿಟಿಎಂ ನಿವಾಸಿ 80 ವರ್ಷದ ಭೈರಪ್ಪ ನಾಯ್ಕ ದರ್ಶನಕ್ಕೆ ಬಂದಿದ್ದು, ನಿರರ್ಗಳವಾಗಿ ಬಬ್ರುವಾಹನ ಚಿತ್ರದ ಡೈಲಾಗ್ ಹೊಡೆದು ಪುನೀತ್ ರಾಜ್ ಕುಮಾರ್ ಅವರ ಸ್ಮರಣೆ ಮಾಡಿದರು.
ಬಳ್ಳಾರಿಯಿಂದ 19 ದಿನಗಳ ನವಜಾತ ಶಿಶುವನ್ನು ಅಪ್ಪು ದರ್ಶನಕ್ಕೆಂದು ತಾಯಿ ಹೊತ್ತು ತಂದಿದ್ದಾರೆ. ಶಿಶುವಿಗೆ ಅಪ್ಪು ಎಂದು ನಾಮಕರಣವನ್ನೂ ಮಾಡಿದ್ದಾರೆ. ಸಮಾಧಿ ಎದುರೇ ಮಗುವಿಗೆ ಅಪ್ಪು ಎಂದು ಹೆಸರಿಡಲಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ನಾಮಕರಣ ಮಾಡಿಸುವ ಆಸೆ ತಾಯಿ ಮಾದೇವಿ ಹೊಂದಿದ್ದರು.
ಇದನ್ನೂ ಓದಿ: Puneeth Rajkumar: ಚೇರ್‌ನಲ್ಲಿ ಕುಳಿತ ಅಪ್ಪು ಪ್ರತಿಮೆಗೆ ಪುನೀತ್ ಫ್ಯಾನ್ಸ್ ಫುಲ್ ಫಿದಾ!
ಅಜ್ಜನ ಡೈಲಾಗ್ ಫ್ಯಾನ್ಸ್ ಫಿದಾ
ಕರ್ನಾಟಕದಲ್ಲಿ ಅಪ್ಪು ಸಂಭ್ರಮ
ಹುಟ್ಟುಹಬ್ಬದ ಅಂಗವಾಗಿ ಒಂದು ದಿನ ಮೊದಲೇ ರಾತ್ರಿ ಪುನೀತ್ ರಾಜ್‌ಕುಮಾರ್ ನಟನೆಯ ‘ಯುವರತ್ನ’ ಚಿತ್ರವನ್ನು ಪ್ರದರ್ಶನ ಆಯೋಜಿಸಲಾಗಿತ್ತು. ಪುನೀತ್ ಅವರ ಜನ್ಮದಿನ ಪ್ರಯುಕ್ತ ಅಭಿಮಾನಿಗಳು ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಅಭಿಮಾನಿಗಳಿಗೆ ಅನ್ನದಾನ, ಶಾಲೆಗಳಿಗೆ ಪುಸ್ತಕ, ಸ್ಕೂಲ್ ಬ್ಯಾಗ್ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡಿದ್ದಾರೆ. ಪುನೀತ್ ಜನ್ಮದಿನದಂದೇ ಬಿಡುಗಡೆ ಆಗುತ್ತಿರುವ ‘ಕಬ್ಜ’ ಚಿತ್ರವನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಲಾಗಿದೆ.