Site icon Vistara News

Puneeth Rajkumar Birthday: ʻಅಪ್ಪುʼ ಜನುಮದಿನಕ್ಕೆ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್ !

ಬೆಂಗಳೂರು: ಮಾರ್ಚ್​ 17ರಂದು ನಟ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಜನುಮದಿನ. ಈ ವಿಶೇಷ ದಿನವನ್ನು ಅವರ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಪುನೀತ್ ಅಭಿಮಾನಿಗಳು ಅಪ್ಪು ಸಮಾಧಿಗೆ ಬಂದು ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ. ಇದೀಗ ಅಪ್ಪು ಫ್ಯಾನ್ಸ್‌ಗೆ  ಅಶ್ವಿನಿ ಪುನೀತ್ ರಾಜಕುಮಾರ್ ಅವರು ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಮಾರ್ಚ್ 15ರಂದು ಪುನೀತ್ ನಟನೆಯ ʻಜಾಕಿʼ ಚಿತ್ರ ರೀ ರಿಲೀಸ್ ಆಗುತ್ತಿದೆ.

ದುನಿಯಾ ಸೂರಿ ಆ್ಯಕ್ಷನ್ ಕಟ್ ಹೇಳಿರುವ ಪುನೀತ್ ರಾಜಕುಮಾರ್ ನಟನೆಯ ʻಜಾಕಿʼ ಸಿನಿಮಾ 2010ರ ಅಕ್ಟೋಬರ್ 14ರಂದು ತೆರೆಕಂಡಿತ್ತು. ʻಜಾಕಿʼ ಸಿನಿಮಾವನ್ನು ಪಿ ಆರ್ ಕೆ ಪ್ರೊಡಕ್ಷನ್ ಪ್ರೆಸೆಂಟ್ ಮಾಡುತ್ತಿದ್ದು, ಕೆ ಆರ್ ಜಿ ಸ್ಟುಡಿಯೋಸ್ ರಿಲೀಸ್ ಮಾಡುತ್ತಿದೆ. ʻಜಾಕಿʼ ಚಿತ್ರ ಯಾವ ಚಿತ್ರಮಂದಿರದಲ್ಲಿ ಮರು ಬಿಡುಗಡೆ ಕಾಣುತ್ತಿದೆ ಎಂಬುದರ ಬಗ್ಗೆ ಇನ್ನು ರಿವೀಲ್ ಆಗಿಲ್ಲ. ಸದ್ಯ ಈ ಮಾಹಿತಿಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷವಾಗಿ ಈ ಚಿತ್ರ 4K ರೆಸೆಲ್ಯೂಷನ್‌ನಲ್ಲಿಯೇ ಬರುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜಾಕಿ ಸಿನಿಮಾ ಹಲವು ವಿಶೇಷತೆಗಳನ್ನ ಹೊಂದಿದೆ. ಸಿನಿಮಾಗೆ ನಾಯಕಿ ನಟಿ ಭಾವನಾ ಸಾಥ್ ಕೊಟ್ಟಿದ್ದರು. ಜಾಕಿ ಚಿತ್ರದ ಎಲ್ಲ ಹಾಡುಗಳು ಹೆಚ್ಚು ಗಮನ ಸೆಳೆದಿದ್ದವು. ಯೋಗರಾಜ್ ಭಟ್ರ ಸಾಹಿತ್ಯ,, ವಿ.ಹರಿಕೃಷ್ಣ ಅವರ ಸಂಗೀತ ಈ ಚಿತ್ರಕ್ಕೆ ಪ್ಲಸ್ ಕೂಡ ಆಗಿತ್ತು.

ಇದನ್ನೂ ಓದಿ: Puneeth Rajkumar Birthday: ‘ಗೌರಿ’ ಚಿತ್ರತಂಡದಿಂದ ಪುನೀತ್ ರಾಜಕುಮಾರ್‌ಗೆ ನೃತ್ಯ ನಮನ!

ಜಾಕಿ ಚಿತ್ರ ಹೊರ ದೇಶದಲ್ಲೂ ರಿಲೀಸ್ ಆಗಿತ್ತು. ಆಸ್ಟ್ರೆಲಿಯಾ ಮತ್ತು ಜರ್ಮಿನಿಯಲ್ಲಿ ಚಿತ್ರ ರಿಲೀಸ್ ಆಗಿತ್ತು. ಕನ್ನಡದ ಈ ಸಿನಿಮಾ ತೆಲುಗು ಭಾಷೆಗೂ ಡಬ್ ಆಗಿತ್ತು. ಸೌತ್ ಫಿಲ್ಮಂ ಅವಾರ್ಡ್‌ ನಲ್ಲಿ ಚಿತ್ರಕ್ಕೆ ಬೆಸ್ಟ್ ಫಿಲ್ಮಂ ಪ್ರಶಸ್ತಿ ಕೂಡ ಬಂದಿತ್ತು. ಈ ಚಿತ್ರ ಬರೋಬ್ಬರಿ 102 ದಿನ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಹಾಗೆ ಈ ಚಿತ್ರ ಬಂದು ಇದೀಗ 14 ವರ್ಷಗಳೆ ಕಳೆದಿವೆ.

ನೃತ್ಯ ನಮನ

ಮಾರ್ಚ್ 17, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ. ಪುನೀತ್ ಅವರ ಹುಟ್ಟುಹಬ್ಬಕ್ಕೆ “ಗೌರಿ” ತಂಡದಿಂದ ವಿಶೇಷ ಗೀತೆಯೊಂದು ಬರಲಿದೆ. ಈ ವಿಶೇಷ ಗೀತೆಗೆ ಸಮರ್ಜಿತ್ ಲಂಕೇಶ್ ಜತೆ ದಕ್ಷಿಣ ಭಾರತದ ಖ್ಯಾತ ನಟಿ ತಾನ್ಯ ಹೋಪ್ ಹೆಜ್ಜೆ ಹಾಕಲಿದ್ದಾರೆ. ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.

Exit mobile version