Site icon Vistara News

Puneeth Rajkumar | ಗೌಡನಾಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಅಪ್ಪು ಮೊದಲ ಪುತ್ಥಳಿ ಅನಾವರಣ!

Puneeth Rajkumar

ಬೆಂಗಳೂರು: ಪದ್ಮನಾಭ ನಗರದ ಗೌಡನಾಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಪುನೀತ್‌ ರಾಜಕುಮಾರ್‌ ಅವರ ಮೊದಲ (Puneeth Rajkumar) ಪುತ್ಥಳಿಯು ಭಾನುವಾರ (ನವೆಂಬರ್‌ 6) ಅನಾವರಣಗೊಂಡಿದೆ. ಪುತ್ಥಳಿ ಅನಾವರಣ ಹಿನ್ನೆಲೆಯಲ್ಲಿ ಅಭಿಮಾನಿಗಳಿಗಾಗಿ ಅಪ್ಪು ಅಭಿನಯದ ಜಾಕಿ ಸಿನಿಮಾವನ್ನು ಶ್ರೀನಿವಾಸ ಚಿತ್ರಮಂದಿರ ಪ್ರಿ ಶೋ ಹಮ್ಮಿಕೊಂಡಿತ್ತು. ಬೆಳಗ್ಗೆಯಿಂದಲೇ ಜಾಕಿ ಸಿನಿಮಾ ಪ್ರದರ್ಶನಗೊಂಡಿದ್ದು, ಚಿತ್ರ ಮಂದಿರದ ಬಳಿ ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು.

10 ಗಂಟೆಗೆ ಶ್ರೀನಿವಾಸ ಚಿತ್ರಮಂದಿರದ ಆವರಣದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣಗೊಳಿಸಿದೆ. ಅಲ್ಲದೆ, ನಾರಾಯಣ ನೇತ್ರಾಲಯದ ಸಹಯೋಗದೊಂದಿಗೆ ನೇತ್ರದಾನ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಹೆಸರನ್ನು ನೋಂದಾಯಿಸಿದ್ದಾರೆ.

ಇದನ್ನೂ ಓದಿ | ‌Appu Namana | ಸರ್ಕಾರಿ ಶಾಲಾ ಮಕ್ಕಳು ತಯಾರಿಸಿದ ಪುನೀತ್ ಸ್ಯಾಟಲೈಟ್ ಗಗನಕ್ಕೆ ಹಾರಲು ಸಜ್ಜು

Exit mobile version