Site icon Vistara News

Puneeth Rajkumar: ದಾರದಲ್ಲಿ ಮೂಡಿದ ಅಪ್ಪು: ಅಭಿಮಾನಿಯ ಸ್ಪೆಷಲ್‌ ಗಿಫ್ಟ್‌!

Puneeth Rajkumar thread art gift by fan

ಬೆಂಗಳೂರು: ಇಂದು (ಮಾ.17) ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಹುಟ್ಟುಹಬ್ಬ. ಈ ದಿನ ಅಭಿಮಾನಿಗಳು ʻಸ್ಫೂರ್ತಿ ದಿನʼʼಎಂದು ಆಚರಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೊ ಪುನೀತ್ ಸ್ಮಾರಕಕ್ಕೆ ಲಕ್ಷಾಂತರ ಅಭಿಮಾನಿಗಳು ಇಂದು ಆಗಮಿಸಲಿದ್ದಾರೆ. ಲಕ್ಷಾಂತರ ಮಂದಿ ಸ್ಮಾರಕಕ್ಕೆ ಭೇಟಿ ನೀಡಲಿದ್ದು, ಅವರಿಗೆಲ್ಲ ಊಟದ ವ್ಯವಸ್ಥೆಯನ್ನು ದೊಡ್ಮನೆ ಕುಟುಂಬ ಮಾಡಿದೆ. ಅಭಿಮಾನಿಗಳಿಗಾಗಿ ಚಿಕನ್ ಬಿರಿಯಾನಿ ಇನ್ನಿತರೆ ತಿಂಡಿಗಳ ವ್ಯವಸ್ಥೆ ಮಾಡಿಸಲಾಗಿದೆ. ಇದೀಗ ಪುನೀತ್‌ ಅವರ ಅಭಿಮಾನಿಯಾದ ವೆಂಕಟ ಸುಬ್ಬು ಅವರು ದಾರದಿಂದ ಅಪ್ಪು ಚಿತ್ರ ಬಿಡಿಸಿದ್ದಾರೆ. ಇದೀಗ ವಿಸ್ತಾರದ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದೀಗ ವೆಂಕಟ ಸುಬ್ಬು ಮಾತನಾಡಿ ʻʻನಾನು ವಿಜಯನಗರಲ್ಲಿ ಇರುವುದು. ಈ ಫೋಟೊ ಮಾಡಲು 8-9ದಿನ ಬೇಕಾಯ್ತು. ಇದಕ್ಕೆ ಥ್ರೆಡ್‌ ಆರ್ಟ್‌ ಎಂದು ಕರೆಯುತ್ತಾರೆ. ಬರಿ ದಾರಗಳಿಂದ ಒಬ್ಬರ ಫೇಸ್‌ ಕ್ರಿಯೇಟ್‌ ಮಾಡುವುದು. ಅಶ್ವಿನಿ ಅವರಿಗೆ ಗಿಫ್ಟ್‌ ಕೊಡಲೆಂದು ತಂದೆ. ಇದರಲ್ಲಿ ಎರಡೂವರೆಯಿಂದ ಮೂರು ಸಾವಿರ ಲೈನ್ಸ್‌ ಇದೆ. ಕಣ್ಣು ಮುಚ್ಚಿದರೂ ಅಪ್ಪು ನೆನಪಾಗುತ್ತೆ. ಬದುಕಿದ್ದಾಗ ಅಪ್ಪು ಅವರನ್ನು ಮೀಟ್‌ ಮಾಡುವ ಅವಕಾಶ ಸಿಕ್ಕಿಲ್ಲʼʼಎಂದರು.

ಇದನ್ನೂ ಓದಿ: Puneeth Rajkumar: ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ಪುನೀತ್‌ ರಾಜ್‌ಕುಮಾರ್‌ ಅಭಿನಯದ “ಜಾಕಿ” ಸಿನಿಮಾ!

ಏನೆಲ್ಲ ಇರಲಿವೆ?

ಪುನೀತ್ ಸ್ಮಾರಕ ಹೂವುಗಳಿಂದ ಅಲಂಕಾರಗೊಂಡಿದೆ. ಇಂದು 1 ಲಕ್ಷ ಜನಕ್ಕೆ ಯುವರಾಜ್ ಕುಮಾರ್ ಅನ್ನದಾನ ವ್ಯವಸ್ಥೆ ಮಾಡಿದ್ದಾರೆ. ಅಭಿಮಾನಿಗಳಿಗೆ ಸಮಾಧಿ ಬಳಿ ಚಿಕನ್ ಬಿರಿಯಾನಿ ಹಂಚಿಕೆ ಕೂಡ ಆಗಲಿದೆ. ಅಭಿಮಾನಿಗಳಿಂದ ಅನ್ನದಾನ, ರಕ್ತದಾನ, ನೇತ್ರದಾನ ಶಿಬಿರ ಕೂಡ ನೆರವೇರಲಿದೆ. ಮಧ್ಯರಾತ್ರಿಯಿಂದಲೇ ಬರ್ತ್‌ಡೇ ಸೆಲೆಬ್ರೇಷನ್ ಶುರು ಆಗಿದೆ. ಬೆಂಗಳೂರಿನಲ್ಲಿ ಮಾತ್ರವೇ ಅಲ್ಲದೆ ಇಡೀ ರಾಜ್ಯದೆಲ್ಲೆಡೆ ಇಂದು ಅಪ್ಪು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.

ರಾಜ್ಯದ ಹಲವು ನಗರಗಳಲ್ಲಿ ಅಭಿಮಾನಿಗಳು ಇಂದು ಅಪ್ಪು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಪುನೀತ್ ಅವರ ಹುಟ್ಟುಹಬ್ಬಕ್ಕೆ “ಗೌರಿ” ತಂಡದಿಂದ ವಿಶೇಷ ಗೀತೆಯೊಂದು ಬರಲಿದೆ. ಈ ವಿಶೇಷ ಗೀತೆಗೆ ಸಮರ್ಜಿತ್ ಲಂಕೇಶ್ ಜತೆ ದಕ್ಷಿಣ ಭಾರತದ ಖ್ಯಾತ ನಟಿ ತಾನ್ಯಾ ಹೋಪ್ ಹೆಜ್ಜೆ ಹಾಕಲಿದ್ದಾರೆ. ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.

Exit mobile version