Site icon Vistara News

Pushpa 2 Bus Accident : ‘ಪುಷ್ಪ 2’ ಕಲಾವಿದರ ಬಸ್​ ಅಪಘಾತ; ಯಾರಿಗೇನಾಯಿತು?

Pushpa 2 Bus Accident

ಬೆಂಗಳೂರು: ಸುಕುಮಾರ್ ನಿರ್ದೇಶನದ ಮತ್ತು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಪ್ಪ-2 ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪುಷ್ಪ 2 ಚಿತ್ರಕ್ಕೆ ಈಗಾಗಲೇ ಎರಡು ಶೆಡ್ಯೂಲ್ ಮುಗಿದಿದ್ದು, ಮೂರನೇ ಶೆಡ್ಯೂಲ್ ಕೂಡ ಮುಗಿದಿದೆಯಂತೆ. ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿ ವಾಪಸ್​ ತೆರಳುತ್ತಿದ್ದ ಕಲಾವಿದರ ಬಸ್​ ಅಪಘಾತಕ್ಕೆ (Pushpa 2 Bus Accident) ಒಳಗಾಗಿದೆ. ಸರ್ಕಾರಿ ಬಸ್​ಗೆ ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ವಾಹನ ನಜ್ಜುಗುಜ್ಜಾವಾಗಿವೆ. ಮೇ 31ರ ಬೆಳಗ್ಗೆ ತೆಲಂಗಾಣದ ನೆಲ್ಗೊಂಡ ಜಿಲ್ಲೆಯ ಹೈದರಾಬಾದ್​-ವಿಜಯವಾಡ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಇಬ್ಬರು ಕಲಾವಿದರು ಗಾಯಗೊಂಡಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ. ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆಯ ಬಸ್​ ಕೆಟ್ಟು ಹೋಗಿತ್ತು. ಆ ಬಸ್​ ಅನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ‘ಪುಷ್ಪ 2’ ಸಿನಿಮಾದ ಕಲಾವಿದರನ್ನು ಕರೆದು ತರುತ್ತಿದ್ದ ಬಸ್​ನ ಚಾಲಕನಿಗೆ ಕೆಟ್ಟು ನಿಂತಿದ್ದ ಬಸ್​ ಕಾಣಿಸಲಿಲ್ಲ. ಆದ್ದರಿಂದ ಡಿಕ್ಕಿ ಹೊಡೆದಿದೆ ಎಂದು ವರದಿ ಆಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ವಿಜಯವಾಡ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಘಟನೆಯ ಸಂಪೂರ್ಣ ವಿವರಗಳು ಇನ್ನಷ್ಟೇ ಬರಬೇಕಿದೆ.

ಪುಷ್ಪ ದಿ ರೂಲ್ (Pushpa 2) ಟಾಲಿವುಡ್‌ನಲ್ಲಿ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಅಲ್ಲು ಅರ್ಜುನ್ ಅವರ ಬ್ಲಾಕ್‌ಬಸ್ಟರ್ ಚಿತ್ರದ ಸೀಕ್ವೆಲ್‌ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾದಾಗಿನಿಂದ, ಅಭಿಮಾನಿಗಳು ಚಿತ್ರದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಮೊದಲು ಸಿನಿಮಾ 2023ರ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡುವುದಾಗಿ ವರದಿ ಆಗಿತ್ತು. ಆದರೀಗ ಸಿನಿಮಾ 2024ರಲ್ಲಿ ಬಿಡುಗಡೆಗೊಳ್ಳಲಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಇದನ್ನೂ ಓದಿ: Koppala News : ಹಾರ, ತುರಾಯಿ ಬದಲು ಸಚಿವ ಶಿವರಾಜ ತಂಗಡಗಿಗೆ ಉಪಯುಕ್ತ ಪುಸ್ತಕ

ಇದನ್ನೂ ಓದಿ: Pushpa 2: ಈ ವರ್ಷ ರಿಲೀಸ್‌ ಆಗುತ್ತಿಲ್ವಂತೆ ಪುಷ್ಪ 2? ಮತ್ತೆ ಬಿಡುಗಡೆ ಯಾವಾಗ?

ವರದಿ ಪ್ರಕಾರ ಪುಷ್ಪ 2 ಸಿನಿಮಾ 2024ರ ಮೇ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ನಿರ್ದೇಶಕ ಸುಕುಮಾರ್ ಪ್ರೇಕ್ಷಕರಿಗೆ ಅತ್ಯುತ್ತಮ ಸಿನಿಮೀಯ ಅನುಭವವನ್ನು ತರಲು ನಿರ್ಧರಿಸಿದ್ದರಿಂದ ಚಲನಚಿತ್ರವನ್ನು ಸ್ವಲ್ಪ ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿದೆ.ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Exit mobile version