Site icon Vistara News

Pushpa 2: ಪುಷ್ಪ ನಿರ್ಮಾಣ ಸಂಸ್ಥೆ, ನಿರ್ದೇಶಕರ ಮನೆ ಮೇಲೆ ಇ.ಡಿ ದಾಳಿ

IT Raids Sukumar, Mythri Movie Makers

ಬೆಂಗಳೂರು: ತೆಲುಗಿನ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ಹೈದ್ರಾಬಾದ್ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) (Enforcement Directorate) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಏಪ್ರಿಲ್‌ 19ರಂದು ಬೆಳಗಿನ ಜಾವದಿಂದಲೇ ಇ.ಡಿ ಅಧಿಕಾರಿಗಳು, ಕಚೇರಿ ಮಾತ್ರವಲ್ಲದೇ ನಿರ್ದೇಶಕರ ಮನೆಯಲ್ಲಿ ಶೋಧ ಕಾರ್ಯ ಮುಂದುವರೆಸಿರುವುದಾಗಿ ಅಲ್ಲಿದ ಮಾಧ್ಯಮಗಳು ವರದಿ ಮಾಡಿವೆ. ನಿರ್ದೇಶಕ ಸುಕುಮಾರನ್ ‘ಪುಷ್ಪ 2’ (Pushpa 2) ಸಿನಿಮಾವನ್ನು ಶುರು ಮಾಡಿದ ಬೆನ್ನಲ್ಲೇ ದಾಳಿಗೆ ಗುರಿಯಾಗಿದ್ದಾರೆ.

ಹವಾಲಾ ಮಾರ್ಗದಲ್ಲಿ ಹಣದ ಸಂಗ್ರಹಣೆ ಮೂಲಕ ಪ್ರಮೋಟರ್‌ಗಳು ಮನಿ ಲಾಂಡರಿಂಗ್‌ಗೆ ಮುಂದಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಈ ಶೋಧ ಕಾರ್ಯ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ . ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ನವೀನ್ ಯೆರ್ನೇನಿ ಹಾಗೂ ಯಲಮಂಚಿಲಿ ರವಿಶಂಕರ್ ಈ ಸಂಸ್ಥೆಯ ನಿರ್ಮಾಪಕರು.

ʻವಾಲ್ತೇರು ವೀರಯ್ಯʼ, ʻವೀರಸಿಂಹ ರೆಡ್ಡಿʼ ಅಂತಹ ಬಹುಕೋಟಿ ವೆಚ್ಚದ ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿದ್ದು ವಿದೇಶಗಳಲ್ಲಿ ದೊಡ್ಡಬಜೆಟ್ ನ ಚಿತ್ರಗಳನ್ನು ವಿತರಿಸುತ್ತಿದೆ. ಇದರಿಂದಾಗಿ ದಾಳಿಗೆ ಒಳಗಾಗಿದೆ ಎಂದು ವರದಿಯಾಗಿದೆ.

ಈ ಪ್ರಮೋಟರ್‌ಗಳು ವಿದೇಶದಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿರುವ ಎನ್‌ಆರ್‌ಐಗಳೆಂದು ಹೇಳಲಾಗುತ್ತಿದೆ. ಜಿಎಸ್‌ಟಿ ನಿಯಮಾವಳಿಗಳನ್ನು ಉಲ್ಲಂಘಿಸಿದಕ್ಕಾಗಿ ಹಾಗೂ ಆದಾಯ ತೆರಿಗೆ ಪಾವತಿಯಲ್ಲಿ ಸುಳ್ಳು ಮಾಹಿತಿ ನೀಡಿರುವ ಆರೋಪ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕರ ನಿವಾಸಗಳು ಹಾಗೂ ಕಚೇರಿಗಳಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಪುಷ್ಪ ಚಿತ್ರದ ಸುಕುಮಾರನ್ ಮನೆಯಲ್ಲೂ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Pushpa 2: ಅಲ್ಲು ಅರ್ಜುನ್‌ ಮಹಿಳೆಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇಕೆ? ಕಾರಣ ಇದು!

ಚಿತ್ರೀಕರಣದ ಹಂತದಲ್ಲಿರುವ ಪುಷ್ಪ 2

ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಈಗ ಎರಡನೇ ಭಾಗವಾದ ಪುಷ್ಪ: ದಿ ರೂಲ್ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಏಪ್ರಿಲ್ 7ರಂದು, ಪುಷ್ಪ 2 ಚಿತ್ರತಂಡ ಅಲ್ಲು ಅರ್ಜುನ್ ಮಹಿಳೆ ವೇಷದ ಪೋಸ್ಟರ್ ಶೇರ್‌ ಮಾಡಿದ್ದಾರೆ. ಫಸ್ಟ್‌ ಲುಕ್‌ನಲ್ಲಿ ಅಲ್ಲು ಅರ್ಜುನ್‌ ಅವರು ಸೀರೆ ಧರಿಸಿದ್ದಾರೆ, ಮೈತುಂಬ ಆಭರಣ ತೊಟ್ಟಿದ್ದಾರೆ. ಹಾಗೆಯೇ, ನಿಂಬೆ ಹಣ್ಣಿನ ಹಾರವನ್ನೂ ಹಾಕಿಕೊಂಡಿದ್ದಾರೆ.

ಅಲ್ಲು ಅರ್ಜುನ್ ಮತ್ತು ಇಡೀ ಚಿತ್ರತಂಡ ಪುಷ್ಪ: ದಿ ರೂಲ್ ಚಿತ್ರದ ಚಿತ್ರೀಕರಣದಲ್ಲಿದೆ. ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Exit mobile version