Site icon Vistara News

Pushpa 2 Movie : ಪುಷ್ಪ 2 ಸಿನಿಮಾದಲ್ಲಿ ಸಲ್ಮಾನ್‌, ಶಾರುಖ್‌ ಖಾನ್‌ ನಟನೆ?

#image_title

ಹೈದರಾಬಾದ್‌: ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ: ದಿ ರೈಸ್‌ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಹಿಟ್‌ ಆಗಿದೆ. ಸಿನಿಮಾ ಸಾಕಷ್ಟು ಹಣ ಗಳಿಕೆ ಮಾಡಿಕೊಂಡಿದೆ. ಅದೇ ಸಂಭ್ರಮದಲ್ಲಿ ಸಿನಿಮಾ ತಂಡ ಪುಷ್ಪ: ದಿ ರೂಲ್‌ (ಪುಷ್ಪ 2) (Pushpa 2 Movie) ಸಿನಿಮಾದ ಚಿತ್ರೀಕರಣ ಆರಂಭಿಸಿಕೊಂಡಿದೆ. ಈ ಸಿನಿಮಾ ಕೂಡ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣುವ ನಿರೀಕ್ಷೆಯಿದ್ದು, ಇದರಲ್ಲಿ ದೊಡ್ಡ ದೊಡ್ಡ ನಟ ನಟಿಯರ ದಂಡೇ ಇರಲಿದೆ ಎನ್ನಲಾಗಿದೆ. ಇದೀಗ ಈ ಸಿನಿಮಾದಲ್ಲಿ ಬಾಲಿವುಡ್‌ ದಿಗ್ಗಜರಾದ ಶಾರುಖ್‌ ಖಾನ್‌ ಅಥವಾ ಸಲ್ಮಾನ್‌ ಖಾನ್‌ ನಟಿಸಲಿದ್ದಾರೆ ಎನ್ನುವ ವಿಚಾರವೂ ಹೊರಬಿದ್ದಿದೆ.

ಇದನ್ನೂ ಓದಿ: Actor Allu Arjun : ಪುಷ್ಪಾ 2 ಸಿನಿಮಾಗೆ ಅಲ್ಲು ಅರ್ಜುನ್‌ ಕೇಳಿದ್ದು 100 ಕೋಟಿ ರೂ.ಗೆ ಹೆಚ್ಚು!
ಹೌದು. ಪುಷ್ಪ 2 ಸಿನಿಮಾದಲ್ಲಿ ಶಾರುಖ್‌ ಅಥವಾ ಸಲ್ಮಾನ್‌ ನಟಿಸಲಿದ್ದಾರಂತೆ. ಈ ವಿಚಾರವನ್ನು Siasat.com ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಅಲ್ಲು ಅರ್ಜುನ್‌ ಅವರ ಬಹು ನಿರೀಕ್ಷಿತ ಈ ಸಿನಿಮಾದಲ್ಲಿ ಬಾಲಿವುಡ್‌ನ ಪ್ರಸಿದ್ಧ ಖಾನ್‌ಗಳಲ್ಲಿ ಒಬ್ಬರು ನಟಿಸಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಗೆಯೇ ಈ ಸಿನಿಮಾದಲ್ಲಿ ನಟಿಸುವುದಕ್ಕೆಂದು ನಟ ಅಜಯ್‌ ದೇವಗನ್‌ ಅವರನ್ನೂ ಸಿನಿತಂಡ ಕೇಳಿದೆ ಎಂದು ವರದಿಯಿದೆ. ಆದರೆ ಸಿನಿಮಾದಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದನ್ನು ಮಾತ್ರ ನಾವು ಕಾದು ನೋಡಬೇಕಿದೆ.

ಪುಷ್ಪ 2 ಸಿನಿಮಾದಲ್ಲಿ ನಟಿಸುವುದಕ್ಕೆ ನಟ ಅಲ್ಲು ಅರ್ಜುನ್‌ ಅವರು ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಕೇಳಿದ್ದರು. ಆದರೆ ಸಿನಿತಂಡ ಅವರ ಮನವೊಲಿಸಿ, 125 ಕೋಟಿ ರೂ. ಕೊಡುವುದಕ್ಕೆ ಒಪ್ಪಿಕೊಂಡಿದೆ ಎಂದು ಈ ಹಿಂದೆ ವರದಿಯಾಗಿತ್ತು. ಮೊದಲನೇ ಭಾಗ ಯಶಸ್ಸು ಕಂಡಿರುವುದಕ್ಕಿಂತ ದೊಡ್ಡ ಮಟ್ಟದಲ್ಲಿ ಈ ಭಾಗ ಯಶಸ್ಸು ಕಾಣಲಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಎಲ್ಲ ಸಿನಿಮಾಗಳ ದಾಖಲೆಗಳನ್ನು ಮುರಿದು ಹಾಕಿ ಮುನ್ನುಗ್ಗಲಿದೆ ಎಂದು ಅಲ್ಲು ಅವರು ನಂಬಿದ್ದಾರೆ ಎಂದೂ ವರದಿಯಲ್ಲಿ ಹೇಳಲಾಗಿತ್ತು.

ಇದನ್ನೂ ಓದಿ: Allu Arjun: ಅಲ್ಲು ಅರ್ಜುನ್ ಜನುಮದಿನದಂದೇ ಪುಷ್ಪ 2 ಸಿನಿಮಾದ ಟೀಸರ್‌ ರಿಲೀಸ್‌?
ಪ್ರಸಿದ್ಧ ನಿರ್ದೇಶಕ ಸುಕುಮಾರ್‌ ಅವರ ನಿರ್ದೇಶನವಿರುವ ಈ ಸಿನಿಮಾದಲ್ಲಿ ಅಲ್ಲು, ರಶ್ಮಿಕಾ ಜೋಡಿ ಜತೆ ಮಲಯಾಳಂನ ಫಹಾದ್‌ ಫಾಸಿಲ್‌ ಕೂಡ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಸಿನಿಮಾ ವಿಶಾಖಪಟ್ಟಂ ಸೇರಿ ಹಲವು ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದ್ದು, ಆ ವಿಚಾರ ಸುದ್ದಿಯಾಗಿತ್ತು.

Exit mobile version