Site icon Vistara News

Pushpa 2: ಪುಷ್ಪ 2 ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ಅಲ್ಲು ಅರ್ಜುನ್‌!

Pushpa 2

ಬೆಂಗಳೂರು: ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ (Pushpa 2) ಸಿಹಿ ಸುದ್ದಿ ನೀಡಿದ್ದಾರೆ. ಪುಷ್ಪ 2: ದಿ ರೂಲ್ ಚಿತ್ರ 2024ರ ಆಗಸ್ಟ್ 15ರಂದು ಥಿಯೇಟರ್‌ಗೆ ಬರಲು ಸಿದ್ಧವಾಗಿದೆ. ರಿಲೀಸ್​ ಡೇಟ್​ (Pushpa 2 Release Date) ಬಗ್ಗೆ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗಿದೆ. ಹೊಸ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್​’ ಸಿಹಿ ಸುದ್ದಿ ನೀಡಿದೆ.

ಅಲ್ಲು ಅರ್ಜುನ್​ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಿನಿಮಾಗೆ ಸುಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಫಹಾದ್ ಫಾಸಿಲ್ ಅವರು ಎಸ್ಪಿ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಫಹಾದ್ ಫಾಸಿಲ್ (Fahadh Faasil) ತಮ್ಮ ಭಾಗದ ಶೂಟಿಂಗ್‌ ಪೂರ್ಣಗೊಂಡಿರುವುದಾಗಿ ಹೇಳಿಕೊಂಡಿದ್ದರು. ʻಭನ್ವರ್ ಸಿಂಗ್ ಶೇಖಾವತ್ʼ ಪಾತ್ರದ ಚಿತ್ರೀಕರಣ ಪೂರ್ಣಗೊಳಿಸಿದೆ ಎಂದು ನಟ ಇನ್‌ಸ್ಟಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಚಿತ್ರದ ನಿರ್ಮಾಣ ಸಂಸ್ಥೆಯಾದ ಮೃತ್ರಿ ಮೂವಿ ಮೇಕರ್ಸ್‌ ಚಿತ್ರದ ಕುರಿತು ಈ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿತ್ತು.

ಇದನ್ನೂ ಓದಿ: Pushpa 2: ʻಪುಷ್ಪ 2ʼ ಸಿನಿಮಾ ದೃಶ್ಯ ಲೀಕ್‌; ಟ್ರಕ್‌ಗಳನ್ನು ನೋಡಿ ದಂಗಾದ ಫ್ಯಾನ್ಸ್‌!

ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Exit mobile version