Site icon Vistara News

Pushpa 2 Teaser: ನಿರೀಕ್ಷೆಗೂ ಮೀರಿದೆ ಪುಷ್ಪ 2 ಟೀಸರ್‌; ಇಲ್ಲಿವೆ ಪುಷ್ಪರಾಜ್‌ನ ಖಡಕ್‌ ಲುಕ್‌ಗಳು!

Pushpa 2 teaser Allu Arjun jatara look as Pushpa Raj

ಸುಕುಮಾರ್ ನಿರ್ದೇಶನ (Pushpa 2 Teaser), ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ 2: ದಿ ರೂಲ್‌ನ ಟೀಸರ್‌ ಔಟ್‌ ಆಗಿದೆ. 2021ರ ಬ್ಲಾಕ್‌ಬಸ್ಟರ್ ʻಪುಷ್ಪ: ದಿ ರೈಸ್‌ʼ ಸಿನಿಮಾದ ಮುಂದುವರಿದ ಭಾಗ ಇದು.

ಜಾತ್ರೆಯ ಸಂದರ್ಭದಲ್ಲಿ ಪುಷ್ಪ ದರ್ಶನ ಕೊಡುತ್ತಾನೆ. ಕಿವಿಯಲ್ಲಿ ಜುಮ್ಕಿ, ಕಾಲಲ್ಲಿ ಗೆಜ್ಜೆ, ಹಣೆಯಲ್ಲಿ ಕುಂಕುಮ, ಸೀರೆಯುಟ್ಟು ಜಾತ್ರೆಯಲ್ಲಿ ಶತ್ರುಗಳನ್ನು ಸೆದೆಬಡಿಯುವ ಅವತಾರದಲ್ಲಿ ಕಂಡಿದ್ದಾರೆ ಪುಷ್ಪರಾಜ್‌. 

ಅಲ್ಲು ಅರ್ಜುನ್‌ ಬರ್ತ್‌ಡೇಗೆ ಟೀಸರ್‌ ಔಟ್‌ ಆಗಿರುವುದು ಫ್ಯಾನ್ಸ್‌ಗೆ ಖುಷಿ ತಂದಿದೆ. ಈಗಾಗಲೇ ಅಲ್ಲು ಫ್ಯಾನ್ಸ್‌ ಮೆಚ್ಚಿನ ನಟ ಮನೆಗೆ ಮಧ್ಯರಾತ್ರಿಯೇ ತೆರಳಿ ವಿಶ್‌ ಮಾಡಿದ್ದಾರೆ. ಪತ್ನಿ ಅಲ್ಲು ಸ್ನೇಹಾ ರೆಡ್ಡಿ ಅವರು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಇದನ್ನೂ ಓದಿ: Pushpa 2 Teaser: ಕಾಲ್ಗೆಜ್ಜೆ ಧರಿಸಿ ಸೀರೆಯುಟ್ಟು ಖಡಕ್‌ ಆಗಿ ದರ್ಶನ ಕೊಟ್ಟ ಪುಷ್ಪರಾಜ್‌; ತಪ್ಪದೇ ಟೀಸರ್‌ ನೋಡಿ!

ಬ್ಲಾಕ್‌ಬಸ್ಟರ್ ಚಿತ್ರದ ಮುಂದುವರಿದ ಭಾಗ ಅಗಸ್ಟ್ 15ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನು ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌, ಪ್ರಕಾಶ್‌ ರೈ, ರಾವ್‌ ರಮೇಶ್‌, ಡಾಲಿ ಧನಂಜಯ್‌, ಜಗಪತಿ ಬಾಬು, ಅನಸೂಯಾ ಭಾರದ್ವಾಜ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ.

Exit mobile version