Site icon Vistara News

Pushpa 2 Update: ಪುಷ್ಪ 2 ಸಿನಿಮಾದಿಂದ ಬಂತು ಬಿಗ್‌ ಅಪ್‌ಡೇಟ್‌; ಅಲ್ಲು ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌!

allu arjun

ಬೆಂಗಳೂರು: ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಪುಷ್ಪ ಸಿನಿಮಾದ 2ನೇ ಹಂತದ ಶೂಟಿಂಗ್ ಹೈದರಾಬಾದ್‌ನಲ್ಲಿ ಶುರುವಾಗಿದೆ. ಪುಷ್ಪರಾಜ್ ಆಗಿ ಚಿತ್ರೀಕರಣದಲ್ಲಿ ಅಲ್ಲು ಅರ್ಜುನ್ ಭಾಗಿಯಾಗಿದ್ದಾರೆ. ಚಿತ್ರತಂಡ ಪ್ರಸ್ತುತ ಹೈದರಾಬಾದ್‌ನ ರಾಮೋಜಿ ರಾವ್ ಸ್ಟುಡಿಯೊದಲ್ಲಿ (Pushpa 2 Update) ಚಿತ್ರೀಕರಣದಲ್ಲಿದ್ದಾರೆ ಎಂದು ವರದಿಯಾಗಿದೆ.

ಪುಷ್ಪಾ ಬಿಡುಗಡೆಯಾದ ನಂತರ, ಅಲ್ಲು ಅರ್ಜುನ್ ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ಚಿತ್ರದಲ್ಲಿ ಪುಷ್ಪಾ ರಾಜ್ ಅವರ ಪಾತ್ರಕ್ಕಾಗಿ ನಟ ಅಪಾರ ಮೆಚ್ಚುಗೆಯನ್ನು ಪಡೆದರು. ‘ಪುಷ್ಪ 2’ ಟ್ರೈಲರ್ ನೋಡಿದ ಹಲವರು ಸಿನಿಮಾದ ಚಿತ್ರೀಕರಣ ಮುಗಿದಿದೆ ಎಂದೇ ಭಾವಿಸಿದ್ದರು. ಆದರೆ ಸಿನಿಮಾದ ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ, ಇದೀಗಷ್ಟೆ ಎರಡನೇ ಹಂತದ ಚಿತ್ರೀಕರಣ ಪ್ರಾರಂಭಗೊಂಡಿದೆ.

ಕೆಲವು ಮೂಲಗಳ ಪ್ರಕಾರ ಸಿನಿಮಾದ ಟಾಕಿ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡುಗಳು ಹಾಗೂ ಕೆಲವು ಪ್ಯಾಚ್ ವರ್ಕ್ ಚಿತ್ರೀಕರಣವಷ್ಟೆ ಬಾಕಿ ಇದೆ ಎನ್ನಲಾಗುತ್ತಿದೆ. ಜತೆಗೆ ಕೆಲ ಫೈಟ್ ಚಿತ್ರೀಕರಣವೂ ಆಗಬೇಕಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ರಾಮೋಜಿ ರಾವ್ ಫಿಲ್ಮ್ಂ ಸಿಟಿಯಲ್ಲಿ ಸೆಟ್‌ಗಳನ್ನು ಹಾಕಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ. ಎರಡನೇ ಹಂತದ ಚಿತ್ರೀಕರಣದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಅವರುಗಳ ಜತೆಗೆ ಡಾಲಿ ಧನಂಜಯ್ ಸಹ ಭಾಗಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಮೋಜಿ ರಾವ್ ಫಿಲ್ಮ್ಂ ಸಿಟಿಯಲ್ಲಿ ಚಿತ್ರೀಕರಣ ಮುಗಿದ ಬಳಿಕ ಹೊರಾಂಗಣದಲ್ಲಿ ಕೆಲವು ದೃಶ್ಯಗಳ ಚಿತ್ರೀಕರಣವನ್ನು ಚಿತ್ರತಂಡ ಮಾಡಲಿದೆ. ಆ ನಂತರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಾರಂಭವಾಗಲಿದೆ. ಪುಷ್ಪ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: Allu Arjun:’ಪುಷ್ಪ 2′ ಡೈಲಾಗ್‌ ಲೀಕ್‌ ಮಾಡಿದ ಅಲ್ಲು ಅರ್ಜುನ್‌ ; ಶಿಳ್ಳೆ ಹೊಡೆದು ಸಂಭ್ರಮಿಸಿದ ಫ್ಯಾನ್ಸ್‌!

ಕೆಲವು ದಿನಗಳ ಹಿಂದೆ ಫಹಾದ್ ಫಾಸಿಲ್ (Fahadh Faasil) ತಮ್ಮ ಭಾಗದ ಶೂಟಿಂಗ್‌ ಪೂರ್ಣಗೊಂಡಿರುವುದಾಗಿ ಹೇಳಿಕೊಂಡಿದ್ದರು. ʻಭನ್ವರ್ ಸಿಂಗ್ ಶೇಖಾವತ್ʼ ಪಾತ್ರದ ಚಿತ್ರೀಕರಣ ಪೂರ್ಣಗೊಳಿಸಿದೆ ಎಂದು ನಟ ಇನ್‌ಸ್ಟಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಚಿತ್ರದ ನಿರ್ಮಾಣ ಸಂಸ್ಥೆಯಾದ ಮೃತ್ರಿ ಮೂವಿ ಮೇಕರ್ಸ್‌ ಚಿತ್ರದ ಕುರಿತು ಈ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿತ್ತು.

ಇದನ್ನೂ ಓದಿ: Actress Sreeleela: ರಶ್ಮಿಕಾ ಆಯ್ತು, ಇದೀಗ ಸಮಂತಾ ಜಾಗವನ್ನೂ ಕಬಳಿಸಿದ್ರಾ ಶ್ರೀಲೀಲಾ? ಪುಷ್ಪ 2 ಬಿಗ್‌ ಅಪ್‌ಡೇಟ್‌!

ಈ ಮೊದಲು ಸಿನಿಮಾ ಫಸ್ಟ್‌ ಲುಕ್‌ ಪೋಸ್ಟರ್‌ನಿಂದಾಗಿ ಸಖತ್‌ ಸುದ್ದಿಯಲ್ಲಿತ್ತು. ಫಸ್ಟ್‌ ಲುಕ್‌ನಲ್ಲಿ ಅಲ್ಲು ಅರ್ಜುನ್‌ ಅವರು ಸೀರೆ ಧರಿಸಿ, ಮೈತುಂಬ ಆಭರಣ ತೊಟ್ಟಿದ್ದರು. ಹಾಗೆಯೇ, ನಿಂಬೆ ಹಣ್ಣಿನ ಹಾರವನ್ನೂ ಹಾಕಿಕೊಂಡಿದ್ದರು. ಅಲ್ಲು ಅರ್ಜುನ್‌ ಅವರೇ ಪೋಸ್ಟರ್‌ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಪುಷ್ಪ 2: ದಿ ರೂಲ್‌ ಆರಂಭವಾಗಿದೆ ಎಂದು ಬರೆದುಕೊಂಡಿದ್ದರು.

ಪುಷ್ಪ-2 ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

Exit mobile version