Site icon Vistara News

PVR INOX : ಬಾಗಿಲು ಮುಚ್ಚಲಿವೆ ಪಿವಿಆರ್‌ ಐನಾಕ್ಸ್‌ಗಳು! ಏನಿದಕ್ಕೆ ಕಾರಣ?

#image_title

ನವದೆಹಲಿ: ದೇಶದ ಅತ್ಯಂತ ಪ್ರಸಿದ್ಧ ಸಂಸ್ಥೆಯಾದ ಪಿವಿಆರ್‌ ಐನಾಕ್ಸ್‌ (PVR INOX) ಸಂಸ್ಥೆಯು ದೇಶಾದ್ಯಂತ ಒಟ್ಟು 50 ಮಲ್ಟಿಫ್ಲೆಕ್ಸ್‌ಗಳನ್ನು ಮುಚ್ಚುವುದಕ್ಕೆ ನಿರ್ಧರಿಸಿದೆ. ಇನ್ನು ಆರು ತಿಂಗಳುಗಳಲ್ಲಿ 50 ಮಲ್ಟಿಫ್ಲೆಕ್ಸ್‌ಗಳನ್ನು ಮುಚ್ಚಲಾಗುವುದು ಎಂದು ಸಂಸ್ಥೆ ಪ್ರಕಟಣೆ ಹೊರಡಿಸಿದೆ.

ಈಗ ಮುಚ್ಚುವುದಕ್ಕೆ ನಿರ್ಧರಿಸಲಾಗಿರುವ ಮಲ್ಟಿಫ್ಲೆಕ್ಸ್‌ಗಳಲ್ಲಿ ಯಾವುದೇ ಲಾಭ ಬರುತ್ತಿಲ್ಲ, ಬದಲಾಗಿ ಸಂಸ್ಥೆಗೆ ಭಾರಿ ನಷ್ಟವಾಗಿ ಹೊರೆಯಾಗುತ್ತಿದೆ. ಹಾಗಾಗಿ ಅವುಗಳನ್ನು ಮುಚ್ಚುವುದಕ್ಕೆ ನಿರ್ಧರಿಸಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ: ವಜ್ರಮುನಿ ಸಿನಿಮಾದಲ್ಲಷ್ಟೇ ಖಳ, ನಿಜ ಬದುಕಲ್ಲಿ ಅಪ್ಪಟ ವಜ್ರ!
ಸಂಸ್ಥೆಯು 2023ನೇ ಆರ್ಥಿಕ ವರ್ಷದಲ್ಲಿ ಒಟ್ಟು 168 ಹೊಸ ಮಲ್ಟಿಫ್ಲೆಕ್ಸ್‌ಗಳನ್ನು ಆರಂಭಿಸಿದೆ. ಅದರಲ್ಲಿ 79 ಸ್ಕ್ರೀನ್‌ಗಳು ಐನಾಕ್ಸ್‌ ಆಗಿದ್ದರೆ, ಇನ್ನುಳಿದ 97 ಸ್ಕ್ರೀನ್‌ಗಳು ಪಿವಿಆರ್‌ ಆಗಿವೆ. ಹಲವಾರು ಸ್ಕ್ರೀನ್‌ಗಳಲ್ಲಿ ಹಿಂದಿ ಸಿನಿಮಾಗಳಿದ್ದು, ಅವುಗಳ ಲಾಭದಲ್ಲಿ ಕಳೆದ ನಾಲ್ಕು ತ್ರೈಮಾಸಿಕಗಳಿಂದ ಏರಿಳಿತ ಕಾಣುತ್ತಿದೆ ಎಂದೂ ಸಂಸ್ಥೆ ಮಾಹಿತಿ ಕೊಟ್ಟಿದೆ.

ಹಾಗೆಯೇ ಇದೇ ಆರ್ಥಿಕ ವರ್ಷದಲ್ಲಿ ಹೊಸದಾಗಿ 150ರಿಂದ 175 ಮಲ್ಟಿಫ್ಲೆಕ್ಸ್‌ ಸ್ಕ್ರೀನ್‌ ಆರಂಭಿಸುವ ಗುರಿಯನ್ನು ಪಿವಿಆರ್‌ ಐನಾಕ್ಸ್‌ ಸಂಸ್ಥೆ ಹಾಕಿಕೊಂಡಿದೆ. ಅದರಲ್ಲಿ ಈಗಾಗಲೇ 9 ಸ್ಕ್ರೀನ್‌ಗಳನ್ನು ಆರಂಭಿಸಲಾಗಿದೆ. 15 ಸ್ಕ್ರೀನ್‌ಗಳು ಪರವಾನಗಿಗಾಗಿ ಕಾಯುತ್ತಿವೆ. 152 ಸ್ಕ್ರೀನ್‌ಗಳಲ್ಲಿ ವಿವಿಧ ಹಂತದ ಕಾಮಗಾರಿಗಳು ನಡೆಯುತ್ತಿವೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: Radhika Kumaraswamy : ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾ ಅನೌನ್ಸ್‌!
ಸಂಸ್ಥೆಯು 2023ರ ಕೊನೆಯ ತ್ರೈಮಾಸಿಕದಲ್ಲಿ 333.35 ಕೋಟಿ ರೂ. ನಷ್ಟ ದಾಖಲಿಸಿದೆ. ಹಾಗೆಯೇ ಕಳೆದ ವರ್ಷದ ಮೂರನೇ ತ್ರೈಮಾಸಿಕದಲ್ಲಿ 105.49 ಕೋಟಿ ರೂ. ನಷ್ಟ ದಾಖಲಿಸಿತ್ತು. ಸಂಸ್ಥೆ ಒಟ್ಟಾರೆಯಾಗಿ 1670 ಸ್ಕ್ರೀನ್‌ಗಳನ್ನು ನಿರ್ವಹಿಸುತ್ತಿದೆ.

Exit mobile version