Site icon Vistara News

Raana Kannada Movie | ಮೋಡಿ ಮಾಡಲು ಬರುತ್ತಿದ್ದಾನೆ ರಾಣಾ; ಇದಕ್ಕೆ ನಂದ ಕಿಶೋರ್‌ ನಿರ್ದೇಶನ

Raana Kannada Movie

ಬೆಂಗಳೂರು: ನಂದ ಕಿಶೋರ್‌ ನಿರ್ದೇಶನ “ರಾಣಾ”ಗೆ (Raana Kannada Movie) ತೆರೆಗೆ ಬರಲು ಸಿದ್ಧವಾಗಿದ್ದಾನೆ. ಅವರ ಈ ಹಿಂದಿನ ಪೊಗರು ಸಾಕಷ್ಟು ಸದ್ದು ಮಾಡಿತ್ತು. ಧ್ರುವ ಸರ್ಜಾರನ್ನು ವಿಭಿನ್ನವಾಗಿ ತೆರೆಯ ಮೇಲೆ ತರುವ ಮೂಲಕ ಟ್ರೆಂಡ್‌ ಹುಟ್ಟುಹಾಕಿದ್ದರು. ಈಗ ರಾಣಾ ಯಾವ ರೀತಿ ಮೋಡಿ ಮಾಡಲಿದೆ? ಹೊಸ ಟ್ರೆಂಡ್‌ ಹುಟ್ಟುಹಾಕಲಿದೆಯೇ? ಎಂಬಿತ್ಯಾದಿ ಅಂಶಗಳು ಸಿನಿಪ್ರಿಯರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ.

ಪ್ರೀತಿ-ಪ್ರೇಮ ಮತ್ತು ಆ್ಯಕ್ಷನ್ ಥ್ರಿಲ್ಲರ್ ಇರುವ ಕಥೆಯನ್ನು ರಾಣಾ ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಯುವ ನಾಯಕ ನಟ ಶ್ರೇಯಸ್ ಮಂಜು, ನಟಿ ರಿಷ್ಮಾ ನಾಣಯ್ಯ ಅಭಿನಯಿಸಿದ್ದಾರೆ.

ರಾಣಾ ಸಿನಿಮಾದ “ಮಳ್ಳಿ ಮಳ್ಳಿ” ಹಾಡು ಈಚೆಗೆ ಗಮನ ಸೆಳೆದಿತ್ತು. ಈ ಹಾಡಿನಲ್ಲಿ ಸಂಯುಕ್ತಾ ಹೆಗಡೆ ಕಾಣಿಸಿಕೊಂಡಿದ್ದರು. ಅಲ್ಲದೆ, ಯೂಟ್ಯೂಬ್‌ನಲ್ಲಿ ಮಿಲಿಯನ್‌ ವ್ಯೂವ್ಸ್‌ ಪಡೆದುಕೊಂಡಿತ್ತು.

ರಾಣಾ ಚಿತ್ರಕ್ಕೆ ಚಂದನ್‌ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ಗಲ್ಲಿ ಬಾಯ್‌ ಹಾಡಿಗೆ ಸ್ವತಃ ಚಂದನ್‌ ಶೆಟ್ಟಿ ಸಾಹಿತ್ಯ ಬರೆದಿರುವುದು ವಿಶೇಷ. ಅರುಣ್‌ ಸಾಗರ್‌ ಪುತ್ರಿ ಅದಿತಿ ಸಾಗರ್‌ ಹಾಗೂ ಅನಿರುದ್ಧ ಶಾಸ್ತ್ರಿ ಈ ಹಾಡನ್ನು ಹಾಡಿದ್ದಾರೆ. ರಾಣಾ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್‌ ಮಂಡಳಿಯಿಂದ ಅನುಮತಿ ಸಿಗಬೇಕಿದೆ. ಇದೇ ವರ್ಷ ನವೆಂಬರ್‌ 11 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ | Diganth | ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಮತ್ತೆ ಒಂದಾದ ಪಂಚರಂಗಿ ಜೋಡಿ

Exit mobile version