Site icon Vistara News

Rachael Lillis: ಧ್ವನಿ ನಿಲ್ಲಿಸಿದ ʻಪೋಕೆಮಾನ್ʼ ತಾರೆ ರಾಚೆಲ್; ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡಿ ಸೋತ ನಟಿ

Rachael Lillis The voice of Pokémon Misty and Jessie passes away

ಬೆಂಗಳೂರು: ಪೋಕೆಮಾನ್ ಸರಣಿಯಲ್ಲಿನ ಮಿಸ್ಟಿ ಮತ್ತು ಜೆಸ್ಸಿ ಪಾತ್ರಗಳಿಗೆ ತನ್ನ ಧ್ವನಿಯ ಮೂಲಕ ಜೀವ ತುಂಬುತ್ತಿದ್ದ ಪ್ರಸಿದ್ಧ ನಟಿ ರಾಚೆಲ್ (Rachael Lillis) ನಿಧನರಾಗಿದ್ದಾರೆ.  46ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್‌ನಿಂದ ನಿಧನರಾದರು. ಪ್ರೀತಿಯ ಜಪಾನೀಸ್ ಅನಿಮೇಟೆಡ್ ಸರಣಿಯಲ್ಲಿ (Pokémon television series) ಮಿಸ್ಟಿ ಮತ್ತು ಜೆಸ್ಸಿ ( Misty and Jessie) ಮತ್ತು ಇನ್ನೂ ಅನೇಕ ಪ್ರಮುಖ ಪಾತ್ರಗಳಿಗೆ ಲಿಲ್ಲಿಸ್ ಧ್ವನಿ ನೀಡಿದ್ದಾರೆ. ಪೋಕೆಮಾನ್ ಪ್ರಮುಖ ಪಾತ್ರ ಆಶ್ ಕೆಚಮ್ ಆಗಿ ನಟಿಸಿದ್ದರು.

1990ರ ದಶಕದ ಉತ್ತರಾರ್ಧದಲ್ಲಿ ಪೋಕೆಮಾನ್ ಟಿವಿ ಸರಣಿ, ಚಲನಚಿತ್ರ ಮತ್ತು ವಿಡಿಯೋ ಗೇಮ್‌ಗಳಲ್ಲಿ  ಮಿಸ್ಟಿ ಮತ್ತು ಜೆಸ್ಸಿಯಾಗಿ  ಲಿಲ್ಲಿಸ್  ತಮ್ಮ ಧ್ವನಿ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಮಾತ್ರವಲ್ಲ ಈ ಎರಡು ಪಾತ್ರಗಳಿಗೆ ಆಕೆ ಜೀವ ತುಂಬುತ್ತಿದ್ದರಿಂದ ಅಪಾರ ಹೆಸರವಾಸಿಯಾಗಿದ್ದರು. ಲಿಲ್ಲಿಸ್ ನ್ಯೂಯಾರ್ಕ್‌ನ ನಯಾಗರಾ ಫಾಲ್ಸ್‌ನಲ್ಲಿ 1969 ನಲ್ಲಿ ಜನಿಸಿದರು. ಹಿನ್ನೆಲೆ ಧ್ವನಿ ಕಲಾವಿದೆಯಾಗುವ ಮೊದಲು ವಿಶ್ವವಿದ್ಯಾಲಯದಿಂದ ಒಪೆರಾದಲ್ಲಿ ತರಬೇತಿ ಪಡೆದರು.

1997 ಮತ್ತು 2015 ರ ನಡುವೆ ಪೋಕೆಮಾನ್ 423 ಸಂಚಿಕೆಗಳಲ್ಲಿ ಆಕೆಯ ಧ್ವನಿ ಕಾಣಿಸಿಕೊಂಡಿದೆ. 2019 ರ ಚಲನಚಿತ್ರ ಡಿಟೆಕ್ಟಿವ್ ಪಿಕಾಚು ಮತ್ತು ಸೂಪರ್ ಸ್ಮ್ಯಾಶ್ ಬ್ರದರ್ಸ್ ವಿಡಿಯೋ ಗೇಮ್ ಸರಣಿ ಸೇರಿದಂತೆ ಪೋಕೆಮಾನ್ ಪಾತ್ರದ ಜಿಗ್ಲಿಪಫ್‌ಗೆ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: Bengaluru Police: ಸಿಟಿ ಸಿವಿಲ್‌ ಕೋರ್ಟ್‌ನಿಂದ ಕೊಲೆ ಆರೋಪಿ ಎಸ್ಕೇಪ್‌! ಸಿನಿಮಾ ಸ್ಟೈಲ್‌ನಲ್ಲಿ ಚೇಸ್‌ ಮಾಡಿದ ಖಾಕಿ

ಪೊಕ್ಮೊನ್ ಕಂಪನಿ ಇಂಟರ್‌ನ್ಯಾಶನಲ್‌ನ “ರಾಚೆಲ್ ಲಿಲ್ಲಿಸ್ ಅವರ ನಿಧನದ ಬಗ್ಗೆ ನಮಗೆ ತುಂಬಾ ದುಃಖವಾಗಿದೆ.ಅವರ ವಿಶೇಷ ಪ್ರತಿಭೆಯಿಂದ ಜೀವ ತುಂಬಿದ ಪಾತ್ರಗಳೊಂದಿಗೆ ಬೆಳೆದ ಅನೇಕ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತದೆʼʼ ಎಂದು ಹೆಳಿಕೆ ನೀಡಿದೆ.

ಲಿಲ್ಲಿಸ್ ಇತರ ಅನಿಮೆ ಮತ್ತು ಅನಿಮೇಟೆಡ್ ಸರಣಿಗಳಿಗೆ ಕೊಡುಗೆ ನೀಡಿದರು.  ಯುವರ್ ಲೈ ಇನ್ ಏಪ್ರಿಲ್, ಹಂಟರ್ ಎಕ್ಸ್ ಹಂಟರ್, ಟೀನೇಜ್ ಮ್ಯುಟೆಂಟ್ ನಿಂಜಾ ಟರ್ಟಲ್ಸ್, ಮತ್ತು ಮೊಬೈಲ್ ಸೂಟ್ ಗುಂಡಮ್ ಯುನಿಕಾರ್ನ್, ಇತರ ಪಾತ್ರಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ. ಅನೇಕ ಪ್ರಶಸ್ತಿಗಳು ಕೂಡ ಗಳಿಸಿದ್ದಾರೆ.

Exit mobile version