Site icon Vistara News

Rachita Ram: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ; ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ

ಉಳ್ಳಾಲ: ಸ್ಯಾಂಡಲ್‌ವುಡ್‌ ನಟಿ, ಡಿಂಪಲ್ ಬೆಡಗಿ ರಚಿತಾ ರಾಮ್ (Rachita Ram) ಮೇ 31ರಂದು ಮಂಗಳೂರು ಹೊರವಲಯದ ಕುತ್ತಾರು ದೆಕ್ಕಾಡಿನ ಕೊರಗಜ್ಜ ದೈವದ ಆದಿ ತಳಕ್ಕೆ ಭೇಟಿ ನೀಡಿದರು. ತಮ್ಮ ನಟನೆಯ ಹೊಸ ಚಿತ್ರಗಳಾದ ಮ್ಯಾಟ್ನಿ, ಬ್ಯಾಡ್ ಮ್ಯಾನರ್ಸ್‌ ಸಿನಿಮಾಗಳ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಚಿತಾ ರಾಮ್‌, ʻʻನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರಣೀಕದ ಬಗ್ಗೆ ಹೇಳಿದ್ದರು. ಹಾಗಾಗಿ ನನಗೂ ಇಲ್ಲಿಗೆ ಬರಬೇಕು ಅನ್ನಿಸಿತು. ಕೊರಗಜ್ಜನ‌ ಕ್ಷೇತ್ರವು ಪ್ರಾಕೃತಿಕ ಸೌಂದರ್ಯವನ್ನೊಳಗೊಂಡಿದ್ದು ತುಂಬಾ ಚೆನ್ನಾಗಿದೆ. ಮುಂದಿನ ಜೂನ್ ತಿಂಗಳಲ್ಲಿ ತೆರೆ ಕಾಣಲಿರುವ ಮ್ಯಾಟ್ನಿ ಮತ್ತು ಬ್ಯಾಡ್ ಮ್ಯಾನರ್ಸ್ ಚಿತ್ರಗಳು ಯಶಸ್ಸು ಕಾಣಲಿ ಎಂದು ಕೊರಗಜ್ಜನಲ್ಲಿ ಪ್ರಾರ್ಥಿಸಿದ್ದೇನೆʼʼ ಎಂದು ಹೇಳಿದರು.

ಕೊರಗಜ್ಜನ ಆದಿ ಕ್ಷೇತ್ರದ ವತಿಯಿಂದ ರಚಿತಾ ರಾಮ್ ಅವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು.
ಎ.ಜೆ ಆಸ್ಪತ್ರೆ ಮುಖ್ಯಸ್ಥರಾದ ಡಾ. ಪ್ರಶಾಂತ್ ಶೆಟ್ಟಿ ಮಾರ್ಲ, ಆಶ್ರಿತಾ ಶೆಟ್ಟಿ, ಹೊಟೇಲ್ ಫುಡ್ ಲ್ಯಾಂಡ್ಸ್ ಮಾಲೀಕ ಆಶೀಶ್ ಶೆಟ್ಟಿ, ಮಾಗಣ್ತಡಿ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಯರಾಮ್ ಭಂಡಾರಿ, ಟ್ರಸ್ಟಿಗಳಾದ ಮಹಾಬಲ್ ಹೆಗ್ಡೆ, ಪ್ರೀತಮ್ ಶೆಟ್ಟಿ, ಮಾಗಣ್ತಡಿ ಕುಟುಂಬದ ಜಗನ್ನಾಥ್ ಶೆಟ್ಟಿ, ಸ್ವಾತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: BBMP Election: ಬಿಬಿಎಂಪಿ ಎಲೆಕ್ಷನ್‌ಗೆ ಸಿದ್ಧತೆ ಆರಂಭಿಸಿದ ಕಾಂಗ್ರೆಸ್‌; ಪೂರ್ವತಯಾರಿ ಸಮಿತಿ ರಚನೆ

ರನ್ನ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌, ಚಕ್ರವ್ಯೂಹ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌, ಜಾನಿ ಜಾನಿ ಯಸ್‌ ಪಪ್ಪಾ ಚಿತ್ರದಲ್ಲಿ ದುನಿಯಾ ವಿಜಯ್‌, ಸೀತಾರಾಮ ಕಳ್ಯಾಣ ಚಿತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ, ಐ ಲವ್‌ ಯೂ ಚಿತ್ರದಲ್ಲಿ ಉಪೇಂದ್ರ, ರಥಾವರ ಚಿತ್ರದಲ್ಲಿ ಶ್ರೀಮುರಳಿ ಸೇರಿ ರಚಿತಾ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

Exit mobile version