Site icon Vistara News

Radhika Kumaraswamy : ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾ ಅನೌನ್ಸ್‌!

Radhika Kumarswamy Ajagrata Film Announced

ಎಂ. ಶಶಿಧರ್ ನಿರ್ದೇಶನದ ‘ಅಜಾಗ್ರತ’ ಸಿನಿಮಾ ಮುಹೂರ್ತ ನೆರವೇರಿದೆ. ಈ ಸಿನಿಮಾ ಏಳು ಭಾಷೆಗಳಲ್ಲಿ ತಯಾರಾಗಿದೆ. ರಾಧಿಕಾ ಕುಮಾರಸ್ವಾಮಿ (Radhika Kumarswamy) ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಬಾಲಿವುಡ್​ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ಸಹೋದರ ಇದನ್ನು ನಿರ್ಮಿಸುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿಯ ಶಮಿಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಿಸಲಾದ ʼಭೈರಾದೇವಿʼ ಚಿತ್ರ ಬಿಡುಗಡೆಗೆ ಕಾಯುತ್ತಿದೆ. ಇದಕ್ಕೂ ಮುಂಚೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಕೊಂಕಣಿ ಮತ್ತು ಮರಾಠಿ ಸೇರಿದಂತೆ ಏಳು ಭಾಷೆಗಳಲ್ಲಿ ʼಅಜಾಗ್ರತʼವನ್ನು ಏಕಕಾಲದಲ್ಲಿ ಚಿತ್ರೀಕರಿಸಲಾಗುತ್ತದೆ ಮತ್ತು ಬಿಡುಗಡೆ ಮಾಡಲಾಗುತ್ತದೆ.

ಜಯಪ್ರಕಾಶ್, ಸ್ಪರ್ಶ ರೇಖಾ, ದೇವರಾಜ್, ಸುಚೇಂದ್ರ ಪ್ರಸಾದ್, ಮತ್ತು ವಿನಯಾ ಪ್ರಸಾದ್ ಕೂಡ ನಟಿಸಲಿದ್ದಾರೆ. ಶ್ರೀಹರಿ ಸಂಗೀತ ನೀಡಿದ್ದು, ಸಂದೀಪ್ ವಲ್ಲೂರಿ ಛಾಯಾಗ್ರಾಹಣ ನೀಡಲಿದ್ದಾರೆ.

Exit mobile version