ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಕುಟುಂಬದ ಜತೆ ಆಚರಿಸಿಕೊಂಡಿದ್ದಾರೆ. ಜನುಮದಿನದ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದೇ ರೀತಿ ಇನ್ಸ್ಟಾದಲ್ಲಿ ಅಭಿಮಾನಿಗಳಿಗಾಗಿ ಸೆಷನ್ ಮಾಡಿದ್ದು, ಅಭಿಮಾನಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ ಮಾರ್ಚ್ 7ರಂದು ಇದ್ದ ಕಾರಣ, ಒಂದು ದಿನ ಮುಂಚಿತವಾಗಿಯೇ ತಾವು ದೂರದ ಊರಿಗೆ ಹೋಗುತ್ತಿರುವ ಕಾರಣ ತಿಳಿಸಿದ್ದರು. ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಕೇಳಿರುವ ಪ್ರಶ್ನೆಗೆ ಉತ್ತರಿಸುವ ಮೂಲಕ ಶುಭಹಾರೈಸಿದವರಿಗೆ ಧನ್ಯವಾದ ತಿಳಿಸಿದ್ದರು. 39ನೇ ವರ್ಷದ ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ತಮ್ಮ ಕುಟುಂಬದ ಜತೆ ಆಚರಿಸಿದ್ದಾರೆ. ಈ ಕುರಿತ ಸುಂದರ ಫೋಟೊಗಳನ್ನು ನಟಿ ಶೇರ್ ಮಾಡಿದ್ದಾರೆ. ಪತಿ ಯಶ್ ಮತ್ತು ಮುದ್ದಾದ ಮಕ್ಕಳ ಜತೆ ರಾಧಿಕಾ ತಂದೆ-ತಾಯಿ ಕೂಡ ಖುಷಿಯಲ್ಲಿ ಭಾಗಿಯಾಗಿದ್ದಾರೆ. “ಹುಟ್ಟುಹಬ್ಬದ ಶುಭಾಶಯಗಳಿಗಾಗಿ ಪ್ರೀತಿಯ ಜನರಿಗೆ ಧನ್ಯವಾದಗಳು”ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Radhika Pandit: ಸಂಬಂಧಿ ಮದುವೆಯಲ್ಲಿ ಐರಾ, ಯಥರ್ವ್, ರಾಧಿಕಾ ಪಂಡಿತ್ ಮಿಂಚಿದ್ದು ಹೀಗೆ!
ರಾಧಿಕಾ ಪಂಡಿತ್ ಅವರು ಯಶ್ ಅವರಿಗಿಂತ 2 ವರ್ಷ ದೊಡ್ಡವರು. ಇವರಿಬ್ಬರೂ ಕಿರುತೆರೆಯಲ್ಲಿಯೂ ಒಟ್ಟಿಗೆ ನಟಿಸಿ ಒಟ್ಟಿಗೆ ಸಿನಿಮಾ ರಂಗದಲ್ಲಿಯೂ ಮಿಂಚಿದ್ದಾರೆ. ರಾಧಿಕಾ ಪಂಡಿತ್ ಸದ್ಯದಲ್ಲೇ ಸಿನಿರಂಗಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.