Site icon Vistara News

Radhika Pandit : ರಾಕಿಂಗ್‌ ಜೋಡಿಗಳಂತೆ ನಿಶ್ಚಿತಾರ್ಥ ಮಾಡಿಕೊಂಡ ಅಭಿಮಾನಿ; ರಾಧಿಕಾ ಪಂಡಿತ್‌ ರೆಸ್ಪಾನ್ಸ್‌ ಹೇಗಿತ್ತು?

Engaged fans like rocking couples

ಬೆಂಗಳೂರು: ಸ್ಯಾಂಡಲ್‌ವುಡ್‌ ಜೋಡಿ ರಾಧಿಕಾ ಪಂಡಿತ್ (Radhika Pandit:) ಹಾಗೂ ಯಶ್ ಮದುವೆ ಬಹಳ ಅದ್ಧೂರಿಯಾಗಿ ನೆರವೇರಿತ್ತು. ನಿಶ್ಚಿತಾರ್ಥದಲ್ಲಿ ಕಡು ನೀಲಿ ಬಣ್ಣದ ಲೆಹೆಂಗಾದಲ್ಲಿ ರಾಧಿಕಾ ಪಂಡಿತ್ ಮಿಂಚಿದ್ದರು. ವಿಭಿನ್ನ ಡಿಸೈನ್‌ನ ಶೇರ್ವಾನಿ ತೊಟ್ಟು ರಾಕಿ ಭಾಯ್ ಮಿಂಚಿದ್ದರು. ಚಂದನವನನದ ʼಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿʼಯ ಅಭಿಮಾನಿಯೊಬ್ಬರು ರಾಧಿಕಾ ಪಂಡಿತ್‌ ಅವರಂತೆಯೇ ಕಾಸ್ಟ್ಯೂಮ್ ಧರಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗುತ್ತಿದೆ. ಅಷ್ಟೇ ಅಲ್ಲದೇ ರಾಧಿಕಾ ಪಂಡಿತ್‌ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ನಿಶ್ಚಿತಾರ್ಥದಲ್ಲಿ ಕಡು ನೀಲಿ ಬಣ್ಣದ ಲೆಹೆಂಗಾದಲ್ಲಿ ರಾಧಿಕಾ ಪಂಡಿತ್ ಮಿಂಚಿದ್ದರು. ರಾಕಿ ಭಾಯ್ ಯಶ್‌ ಕೂಡ ವಿಶೇಷವಾಗಿ ಗಮನ ಸೆಳೆದಿದ್ದರು. ಈಗ ರಾಧಿಕಾ ಪಂಡಿತ್ ಅವರ ವಿಶೇಷ ಅಭಿಮಾನಿಯೊಬ್ಬರು ಅವರಂತೆಯೇ ನಿಶ್ಚಿತಾರ್ಥ ಮಾಡಿಕೊಂಡು ಖುಷಿ ಪಟ್ಟಿದ್ದಾರೆ. ಅವರ ಹೆಸರು ಶೋಭಿತಾ. ಸ್ಯಾಂಡಲ್‌ವುಡ್‌ನ ರಾಕಿಂಗ್ ಜೋಡಿ ಗೋವಾದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2016ರಲ್ಲಿ ನಡೆದ ಸಮಾರಂಭದಲ್ಲಿ ರಾಧಿಕಾ ಹಾಗೂ ಯಶ್ ಎಂಗೇಜ್ ಆಗಿದ್ದರು. ಅಭಿಮಾನಿ ಶೋಭಿತಾ ಈ ಕುರಿತ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆ ವಿಡಿಯೊ ನೋಡಿ ರಾಧಿಕಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ರಾಧಿಕಾ ಪಂಡಿತ್‌ ಅವರ ಅಪ್ಪಟ ಅಭಿಮಾನಿ. ಹೀಗಾಗಿ ಅವರಂತೆಯೇ ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ನಿಶ್ಚಿತಾರ್ಥದಲ್ಲಿ ರಾಧಿಕಾ ಧರಿಸಿದಂತೆಯೇ ಲೆಹೆಂಗಾ ಡಿಸೈನ್ ಮಾಡಿಸಿಕೊಂಡೆ ಎಂದು ಶೋಭಿತಾ ಹೇಳಿದ್ದಾರೆ. ಅಲ್ಲದೆ ಅವರು ಬ್ಯಾಕ್‌ಗ್ರೌಂಡ್ ಕೂಡ ಸೇಮ್ ಟು ಸೇಮ್ ರೀ-ಕ್ರಿಯೇಟ್ ಮಾಡಿದ್ದಾರೆ. ರಾಧಿಕಾ ಪಂಡಿತ್ ಅಭಿಮಾನಿ ಶೋಭಿತಾ ಮೈಸೂರಿನಲ್ಲಿ ಕಿರಣ್ ಬಾಬು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Radhika Pandit: ಜನುಮದಿನದ ಸಂಭ್ರಮಾಚರಣೆಯ ಫೋಟೊ ಶೇರ್‌ ಮಾಡಿದ ರಾಧಿಕಾ ಪಂಡಿತ್‌

ರಾಧಿಕಾ ಅವರ ಹೇರ್​ ಸ್ಟೈಲ್, ಮೇಕಪ್​, ಮೂಗುತಿ ಎಲ್ಲವನ್ನು ಇದೀಗ ಶೋಭಿತಾ ಕಾಪಿ ಮಾಡಿದ್ದಾರೆ. ರಾಧಿಕಾ ಪಂಡಿತ್ ರೀತಿಯಲ್ಲೇ ರೆಡಿಯಾಗಿ ಮನ ಮೆಚ್ಚಿದ ಹುಡುಗನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಡಿಯೊವನ್ನು ರಾಧಿಕಾ ಪಂಡಿತ್ ಅವರಿಗೆ ಟ್ಯಾಗ್ ಕೂಡ ಮಾಡಿದ್ದರು. ಈ ಬಗ್ಗೆ ರಾಧಿಕಾ ಪಂಡಿತ್ ಪ್ರತಿಕ್ರಿಯಿಸಿ “ಇದೊಂದು ಬ್ಯೂಟಿಫುಲ್ ರೀ-ಕ್ರಿಯೇಷನ್ ಡಿಯರ್ ​ಶೋಭಿತಾ.. ನೀವು ಸುಂದರವಾಗಿ ​ಕಾಣುತ್ತಿದ್ದೀರ. ಕಾರಣವೇನಂದರೆ, ನೀವು ಸಹಜ ಸುಂದರಿ” ಎಂದು ಜೋಡಿಗೆ ಶುಭ ಕೋರಿದ್ದಾರೆ.

ʻಮೊಗ್ಗಿನ ಮನಸುʼ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಟಿ ರಾಧಿಕಾ ಪಂಡಿತ್ ಎಂಟ್ರಿ ಕೊಟ್ಟಿದ್ದರು. ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2012ರಲ್ಲಿ ಬಿಡುಗಡೆಯಾದ ಯೋಗರಾಜ್ ಭಟ್ ನಿರ್ದೇಶನ ʼಡ್ರಾಮಾʼ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಜತೆ ರಾಧಿಕಾ ಪಂಡಿತ್ ನಟಿಸಿದ್ದರು. ಬಳಿಕ ಬಂದ ʼಮಿಸ್ಟರ್ ಆ್ಯ೦ಡ್ ಮಿಸೆಸ್ ರಾಮಾಚಾರಿʼ ಸಿನಿಮಾ ಯಶ್ ಹಾಗೂ ರಾಧಿಕಾಗೆ ಸೂಪರ್ ಸಕ್ಸಸ್​ ತಂದುಕೊಟ್ಟಿತ್ತು.

Exit mobile version