Site icon Vistara News

Radhika Pandit: ನಟನೆಗೆ ಕಮ್‌ಬ್ಯಾಕ್‌ ಆಗ್ತಾರಾ ರಾಧಿಕಾ ಪಂಡಿತ್‌? ಪೋಸ್ಟ್‌ ಹಂಚಿಕೊಂಡ ಸಿಂಡ್ರೆಲಾ!

Radhika Pandit

ಬೆಂಗಳೂರು: ರಾಧಿಕಾ ಪಂಡಿತ್ (Radhika Pandit) ಅವರು ಸದ್ಯ ಮಕ್ಕಳ ಆರೈಕೆಯಲ್ಲಿ ಇದ್ದಾರೆ. ಇದೀಗ 5 ವರ್ಷದ ಹಿಂದಿನ ಪೋಸ್ಟ್ ಹಂಚಿಕೊಂಡು, ತಮ್ಮ ಬಣ್ಣದ ಲೋಕದ ಬಗ್ಗೆ ಮೆಲುಕು ಹಾಕಿದ್ದಾರೆ. ಈ ಮೂಲಕ ಯಶ್‌ ಅವರ ರಾಣಿ ರಾಧಿಕಾ ಪಂಡಿತ್‌ ಮತ್ತೆ ಸಿನಿ ಲೋಕಕ್ಕೆ ಎಂಟ್ರಿ ಕೊಡ್ತಾರಾ ಎಂದು ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ʻʻಜುಲೈ 18, 2008.. “ರಾಧಿಕಾ ಪಂಡಿತ್” ನಿಮಗೆಲ್ಲ ಪರಿಚಯವಾದ ದಿನ, ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ ರಾಧಿಕಾ ನಾಯಕಿಯಾಗಿ ಪರಿಚಯವಾದ ದಿನ. ಯಶ್‌ಗೆ ಜೋಡಿಯಾಗಿ ಸಾಥ್ ನೀಡಿದ್ದರು. ನಟಿಸಿದ ಮೊದಲ ಸಿನಿಮಾನೇ ಸೂಪರ್ ಡೂಪರ್ ಹಿಟ್ ಆಗಿತ್ತು. ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಬಂದು ಈಗ 15 ವರ್ಷಗಳಾಗಿದೆ.

ರಾಧಿಕಾ ಪೋಸ್ಟ್‌ನಲ್ಲಿ ʻʻನನ್ನನ್ನು ಪ್ರೀತಿಸುವ, ನನ್ನನ್ನು ಗೌರವಿಸುವ ನನ್ನ ಚಿತ್ರರಂಗದ ಎಲ್ಲರೂ ಈಗಲೂ ನನ್ನಲ್ಲಿದ್ದಾರೆ.
ಇದೆಲ್ಲವೂ ಸುಲಭವಾಗಿ ಬರುವುದಿಲ್ಲ, ಇದಕ್ಕೆ ಜನರಿಂದ ಸಾಕಷ್ಟು ಕೊಡುಗೆ ಬೇಕು. ಮೊದಲನೆಯದಾಗಿ ನನ್ನ ಕುಟುಂಬ.. ಈ ಪ್ರಯಾಣದುದ್ದಕ್ಕೂ ನನ್ನನ್ನು ಬೆಂಬಲಿಸಿದ, ಮಾರ್ಗದರ್ಶನ ನೀಡಿದ ಅವರು ನನ್ನನ್ನು ನೆಗೆಟಿವ್‌ನಿಂದ ಕಾಪಾಡುವಲ್ಲಿ ಎಂದಿಗೂ ವಿಫಲರಾಗಲಿಲ್ಲ. ನನ್ನ ಶೂಟಿಂಗ್‌ನ ಪ್ರತಿ ದಿನವೂ ನನ್ನ ಜತೆಗಿರುವ ನನ್ನ ತಾಯಿ.. ನನ್ನ ಸಹಾಯಕ ಶಂಕರ್ ಕೂಡ, ಅವರು 10 ವರ್ಷಗಳಿಂದ ನನಗೆ ಸಹಾಯ ಮಾಡುತ್ತಿದ್ದಾರೆ.
ನನ್ನ ಎಲ್ಲಾ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನ ಸಾಮರ್ಥ್ಯವನ್ನು ನಂಬಿ ನನಗೆ ಕೆಲಸ ಕೊಟ್ಟಿದ್ದಾರೆ.
ನನ್ನ ತಂತ್ರಜ್ಞರು ನನಗೆ ಕೆಲಸ ಮಾಡಲು ಸುಲಭವಾಗಿಸಿದ್ದಾರೆ. ಕನಸಿನೊಂದಿಗೆ ಈ ಉದ್ಯಮಕ್ಕೆ ಬಂದ ಎಲ್ಲಾ ಸುಂದರ ಹೊಸ ಹುಡುಗಿಯರಿಗೆ.. ನಾನು ಅವರಿಗೆ ಒಂದೇ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ.. ನಿಮ್ಮ ಕಲೆಯಲ್ಲಿ ಉತ್ತಮವಾಗಿದ್ದರೆ ಸಾಕಾಗುವುದಿಲ್ಲ ಆದರೆ ಉತ್ತಮ ಮಾನವರಾಗಿರುವುದು ಮುಖ್ಯ. “ನೀವು ನನ್ನ ಸ್ಫೂರ್ತಿ”ಎಂದು ಹೇಳಿಸಿಕೊಳ್ಳುವಂತರಾಗಬೇಕು. ನನ್ನ ಎಲ್ಲಾ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಧನ್ಯವಾದ. ಇದನ್ನು ವಿದಾಯ ಭಾಷಣ ಎಂದು ತೆಗೆದುಕೊಳ್ಳಬೇಡಿ, ‘ಪಿಕ್ಚರ್‌ ಇನ್ನೂ ಬಾಕಿ ಇದೆʼʼ ನಿಮ್ಮ ರಾಧಿಕಾ ಪಂಡಿತ್‌ʼʼಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Radhika Pandit : ರಾಕಿಂಗ್‌ ಜೋಡಿಗಳಂತೆ ನಿಶ್ಚಿತಾರ್ಥ ಮಾಡಿಕೊಂಡ ಅಭಿಮಾನಿ; ರಾಧಿಕಾ ಪಂಡಿತ್‌ ರೆಸ್ಪಾನ್ಸ್‌ ಹೇಗಿತ್ತು?

2019ರಲ್ಲಿ ರಿಲೀಸ್ ಆದ ‘ಆದಿಲಕ್ಷ್ಮಿ ಪುರಾಣ’ ರಾಧಿಕಾರ ಕೊನೆಯ ಸಿನಿಮಾ ಆಗಿದೆ. ಅದಾದ ಬಳಿಕ ಇನ್ಯಾವ ಸಿನಿಮಾದಲ್ಲಿಯೂ ರಾಧಿಕಾ ನಟಿಸಿಲ್ಲ.‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳಿಗಾಗಿ ತೆರೆ ಮರೆಯಲ್ಲಿ ರಾಧಿಕಾ ಕೆಲಸ ಮಾಡಿದ್ದರು.

Exit mobile version