Site icon Vistara News

Radhika Pandit: ʻಪ್ರೇಮಿಗಳ ಮಾಸಕ್ಕೆ ಹಲೋʼ ಎಂದು ಫೋಟೊಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್‌!

Radhika Pandit Shares New Photoshoot and shares Hello to the month of Love

ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಪಂಡಿತ್‌ (Radhika Pandit) ಸಿನಿಮಾದಿಂದ ದೂರ ಇದ್ದರೂ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡು “ಪ್ರೇಮಿಗಳ ಮಾಸಕ್ಕೆ ಹಲೋ ” ಎಂದು ಬರೆದುಕೊಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಸ್ಯಾಂಡಲ್‌ವುಡ್‌ನ ಸಿಂಡ್ರೆಲ್ಲ ರಾಧಿಕಾ ಪಂಡಿತ್ ಆಗಾಗ ಫ್ಯಾಮಿಲಿ ಫೋಟೊ ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ರಾಧಿಕಾ ಪಂಡಿತ್‌ ಹೊಸ ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Radhika Pandit: ದೀಪಾವಳಿಗೆ ರಾಧಿಕಾ ಪಂಡಿತ್‌ ವಿಶ್‌; ಫೋಟೊಗಳನ್ನು ಹಂಚಿಕೊಂಡ ನಟಿ!

ಫೆಬ್ರವರಿ ತಿಂಗಳು ಅಂದರೆ ಪ್ರೇಮಿಗಳು ತಿಂಗಳ ಆರಂಭದಿಂದಲೇ ಸೆಲೆಬ್ರೆಟ್ ಮಾಡುವುದಕ್ಕೆ ರೆಡಿಯಾಗಿ ಬಿಡುತ್ತಾರೆ. ಹೀಗಾಗಿ ರಾಧಿಕಾ ಪಂಡಿತ್ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡು “ಪ್ರೇಮಿಗಳ ಮಾಸಕ್ಕೆ ಹಲೋ ” ಎಂದು ಬರೆದುಕೊಂಡಿದ್ದಾರೆ.

ಇದೀಗ ರಾಧಿಕಾ ಪಂಡಿತ್‌ ಅವರ ಫೋಟೊಗಳಿಗೆ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬರು ʻʻಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ ನಿನಷ್ಟು ಮುದ್ದಾಗಿ ನಂಗ್ಯಾರೂ ಕಂಡಿಲ್ಲʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻರಾಧೆ ಓ ರಾಧೆ ನಿಮಗಾಗಿ ಕಾದೆʼʼಎಂದು ಕಮೆಂಟ್‌ ಮಾಡಿದ್ದಾರೆ. ʻನೀನೇ ನನ್ನ ಸಿಂಡ್ರೆಲ್ಲʼ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

2019ರಲ್ಲಿ ರಿಲೀಸ್ ಆದ ‘ಆದಿಲಕ್ಷ್ಮಿ ಪುರಾಣ’ ರಾಧಿಕಾರ ಕೊನೆಯ ಸಿನಿಮಾ ಆಗಿದೆ. ಅದಾದ ಬಳಿಕ ಇನ್ಯಾವ ಸಿನಿಮಾದಲ್ಲಿಯೂ ರಾಧಿಕಾ ನಟಿಸಿಲ್ಲ.‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳಿಗಾಗಿ ತೆರೆ ಮರೆಯಲ್ಲಿ ರಾಧಿಕಾ ಕೆಲಸ ಮಾಡಿದ್ದರು.

Exit mobile version