Site icon Vistara News

Radhika Pandit: ʻನನ್ನ ಪುಟ್ಟ ರಾಜಕುಮಾರಿʼ ಅಂದ್ರು ರಾಧಿಕಾ; ಯಶ್‌ ಮಗಳಿಗೆ ಫ್ಯಾನ್ಸ್‌ ಕಡೆಯಿಂದ ರಿಕ್ವೆಸ್ಟ್‌ ಏನು?

Radhika Pandit with daughter
ನಟಿ ರಾಧಿಕಾ ಪಂಡಿತ್‌ (Radhika Pandit) ಆಗಾಗ ಕುಟುಂಬದ ಜತೆ ಸಮಯ ಕಳೆದ ಫೋಟೊಗಳನ್ನು ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮಗಳು ಐರಾಗೆ ಶೂ ಹಾಕುತ್ತಿರುವ ಫೋಟೊವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
ನಮ್ಮ ಪುಟ್ಟ ರಾಜಕುಮಾರಿ ಎಂದು ರಾಧಿಕಾ ಪಂಡಿತ್​ ಫೋಟೊಗೆ ಟೈಟಲ್ ಕೊಟ್ಟಿದ್ದಾರೆ. ಈ ಫೋಟೊಗೆ ಕಮೆಂಟ್‌ ಮೂಲಕ ನೆಟ್ಟಿಗರು ಮೆಚ್ಚುಗೆ ಹೊರಹಾಕಿದ್ದಾರೆ.
ʻಪುಟ್ಟ ರಾಜಕುಮಾರಿ ನಿಮ್ಮ ತಂದೆಯನ್ನು ಒಮ್ಮೆ ಕೇಳು. ಯಶ್‌ 19 ಸಿನಿಮಾ ಯಾವಾಗ?ʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Radhika Pandit: ಸಮುದ್ರ ತೀರದಲ್ಲಿ ಕುಟುಂಬದ ಜತೆ ಸಮಯ ಕಳೆದ ರಾಧಿಕಾ ಪಂಡಿತ್!

ಯಶ್‌ 19 ಸಿನಿಮಾ ಅಪ್‌ಡೇಟ್‌ಗಾಗಿ ಯಶ್‌ ಫ್ಯಾನ್ಸ್‌ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೇ ರಾಧಿಕಾ ಪಂಡಿತ್ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.
ಯಶ್‌ ಕೂಡ ಆಗಾಗ ಮಗಳ ಜತೆ ಸಮಯ ಕಳೆದಿರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ.
Exit mobile version