Site icon Vistara News

Raghav Chadha: ರಾಘವ್ ಚಡ್ಡಾಗೆ ಜನುಮದಿನದ ಸಂಭ್ರಮ; ಕ್ಯೂಟ್‌ ಫೋಟೊ ಶೇರ್‌ ಮಾಡಿದ ಪರಿಣಿತಿ

Raghav Chadha birthday

ಬೆಂಗಳೂರು: ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ (Raghav Chadha) ಅವರಿಗೆ ಇಂದು (ನ.10) ಜನುಮದಿನದ ಸಂಭ್ರಮ. ವಿಶೇಷ ದಿನದಂದು, ಅವರ ಪತ್ನಿ, ನಟಿ ಪರಿಣಿತಿ ಚೋಪ್ರಾ ಅವರು ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. “ ದೇವರು ನನಗೆ ನೀಡಿದ ಅತ್ಯುತ್ತಮ ಕೊಡುಗೆ ನೀವು, ನನ್ನ ರಾಗೈ! (ರಾಘವ್ ಚಡ್ಡಾ ಅವರನ್ನು ಪ್ರೀತಿಯಿಂದ ಪರಿಣಿತಿ ಕರೆಯುವ ಪದ)ನಿಮ್ಮ ಮೌಲ್ಯಗಳು, ಪ್ರಾಮಾಣಿಕತೆ ಮತ್ತು ನಂಬಿಕೆ ನನ್ನನ್ನು ಉತ್ತಮ ಮನುಷ್ಯನಾಗಲು ಬಯಸುತ್ತದೆ. ಕುಟುಂಬಕ್ಕೆ ನಿಮ್ಮ ಬದ್ಧತೆ ನನ್ನನ್ನು ಪ್ರತಿದಿನ ಆಶೀರ್ವದಿಸುವಂತೆ ಮಾಡುತ್ತದೆʼʼಎಂದು ಕ್ಯೂಟ್‌ ಫೋಟೊಗಳ ಜತೆ ಬರೆದುಕೊಂಡಿದ್ದಾರೆ.

ಇತ್ತೀಚೆಗೆ, ಪರಿಣಿತಿ ತನ್ನ ಮೊದಲ ಕರ್ವಾ ಚೌತ್ ನವೆಂಬರ್ 1 ರಂದು ಆಚರಿಸಿದರು. ನಟಿ ಕೆಂಪು ಸಲ್ವಾರ್ ಕಮೀಜ್‌ನಲ್ಲಿ ಸುಂದರವಾಗಿ ಕಂಡಿದ್ದಾರೆ. ರಾಘವ್ ಹಳದಿ ಕುರ್ತಾ ಪೈಜಾಮವನ್ನು ಧರಿಸಿದ್ದರು. ಪರಿಣಿತಿ ಚೋಪ್ರಾ (Parineeti Chopra) ಮತ್ತು ರಾಘವ್ ಚಡ್ಡಾ ಇಂದು ಸೆ.24ರಂದು ಉದಯಪುರದಲ್ಲಿ ವಿವಾಹವಾದರು.

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ವರ್ಷ ಮೇ 13 ರಂದು ನವದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಮದುವೆಯ ನಂತರ, ಹರಿಯಾಣದ ಗುರುಗ್ರಾಮದಲ್ಲಿ ಆರತಕ್ಷತೆ ನಡೆಯಲಿದೆ. ಈ ಜೋಡಿ ಕಳೆದ ವರ್ಷದಿಂದಲೂ ಪ್ರೀತಿಯಲ್ಲಿದೆ. ಪರಿಣಿತಿ ಅವರು ʼಚಮ್ಕೀಲಾʼ ಸಿನಿಮಾಕ್ಕಾಗಿ ಪಂಜಾಬ್‌ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಆ ವೇಳೆ ರಾಘವ್‌ ಅವರು ಅಲ್ಲಿಗೆ ತೆರಳಿ ನಟಿಯೊಂದಿಗೆ ಮಾತನಾಡಿದ್ದರು. ಆಗಲೇ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: Raghav Chadha: ಆಪ್ ಸದಸ್ಯ ರಾಘವ್ ಛಡ್ಡಾ ರಾಜ್ಯಸಭೆಯಿಂದ ಸಸ್ಪೆಂಡ್! ಕಾರಣ ಏನು?

ಆಗಸ್ಟ್ 11ರಂದು ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ವಿಶೇಷ ಹಕ್ಕು ಉಲ್ಲಂಘನೆಯ ಆರೋಪದ ಮೇಲೆ ಚಡ್ಡಾ ಅವರನ್ನು ಅಮಾನತುಗೊಳಿಸಲಾಗಿತ್ತು. 34 ವರ್ಷದ ಎಎಪಿ ಸಂಸದ ಚಡ್ಡಾ, ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆ- 2023 ಅನ್ನು ಪರಿಗಣಿಸುವ ಆಯ್ಕೆ ಸಮಿತಿಯಲ್ಲಿ ತಮ್ಮ ಹೆಸರನ್ನು ಸೇರಿಸುವ ಮೊದಲು ಐದು ರಾಜ್ಯಸಭಾ ಸಂಸದರ ಒಪ್ಪಿಗೆಯನ್ನು ಪಡೆದಿಲ್ಲ ಎಂದು ಸಂಸದರು ಆರೋಪಿಸಿದ್ದರು.

Exit mobile version