ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಒಂದು ವರ್ಷ ಕಳೆದರೂ ಅಭಿಮಾನಿಗಳು ಇಂದಿಗೂ ಅವರ ಅಗಲಿಕೆ ನೋವಿನಲ್ಲಿ ಇದ್ದಾರೆ. ಅಪ್ಪು ನನ್ನ ತಮ್ಮ ಆದರೂ ಅವನು ಮಗು ಇದ್ದಂತೆ ಎಂದು ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅನೇಕ ಬಾರಿ ಹೇಳಿದ್ದಾರೆ. ಅಪ್ಪುವನ್ನು ಅತಿಯಾಗಿ ಪ್ರೀತಿಸುತ್ತಿದ್ದ ರಾಘಣ್ಣ, ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಜತೆಗೆ ಟೊಟೊ ಹಾಗೂ ನುಕ್ಕಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ.
ಪುನೀತ್ ಅವರ ಮಕ್ಕಳಾದ ಧೃತಿ ಹಾಗೂ ವಂದಿತಾ ಅವರನ್ನು ಅಣ್ಣಾವ್ರ ಕುಟುಂಬದ ಸದಸ್ಯರು ಮುದ್ದಾಗಿ ಟೊಟೊ, ನುಕ್ಕಿ ಎಂದು ಕರೆಯುತ್ತಿದ್ದರು. ರಾಘವೇಂದ್ರ ರಾಜ್‌ಕುಮಾರ್ ಹಚ್ಚೆಯ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಅಪ್ಪು ನೆನೆದು ಅಭಿಮಾನಿಗಳು ಭಾವುಕರಾಗಿದ್ದಾರೆ.
ಪುನೀತ್ ಅಗಲಿಕೆ ಬಳಿಕ ರಾಜ್ಯದಾದ್ಯಂತ ಬೀದಿ ಬೀದಿಯಲ್ಲಿ ಅವರ ಕಟೌಟ್ಗಳು ರಾರಾಜಿಸಿವೆ. ಅಭಿಮಾನಿಗಳು ದೇವಾಲಯವನ್ನೇ ಕಟ್ಟಿಬಿಟ್ಟಿದ್ದಾರೆ. ಅಂಥಹವರಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಸಹ ಒಬ್ಬರಾಗಿದ್ದಾರೆ.
ಇದನ್ನೂ ಓದಿ: Puneeth Rajkumar: ʼಅಪ್ಪು ಎರಡು ವರ್ಷದ ಮಗುʼ: ನಮಿಸಿದ ಪುನೀತ್ ಪುತ್ರಿ, ರಾಘವೇಂದ್ರ ರಾಜ್‌ಕುಮಾರ್
ಅಪ್ಪು ಮತ್ತು ಅಪ್ಪು ಮಕ್ಕಳ ಹೆಸರನ್ನ ಎದೆ ಮೇಲೆ ಹಾಕಿಸಿಕೊಂಡ ರಾಘಣ್ಣ 🙏@iRaghanna #RaghavendraRajkumar #DrPuneethRajkumar #YuvaRajkumar pic.twitter.com/IRkRgfd2nv
— Appu Yuva Fc (@AppuYuvaFc) May 29, 2023
ಅಪ್ಪು ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿರುವ ರಾಘವೇಂದ್ರ ರಾಜ್‌ಕುಮಾರ್, ಅಪ್ಪು ಅಗಲಿಕೆಯಿಂದ ಶೋಕಸಾಗರದಲ್ಲಿ ಮುಳುಗಿದ್ದ ಅವರ ಅಭಿಮಾನಿಗಳಿಗೆ, ಅವರ ಕುಟುಂಬದವರಿಗೆ ಆಪ್ತೇಷ್ಟರಿಗೆ ಸಾಂತ್ವಾನ ಹೇಳು ಕಾರ್ಯ ಮಾಡಿದರು.