Site icon Vistara News

ವರಮಹಾಲಕ್ಷ್ಮಿ ಹಬ್ಬಕ್ಕೆ Raghavendra Storesಗೆ ಬನ್ನಿ: ʼನವರಸʼ ಸವಿಯಲು ಸಿದ್ಧರಾಗಿ

Raghavendra Stores

ಬೆಂಗಳೂರು: ಕನ್ನಡ ಚಿತ್ರರಂಗದ ನವರಾಸ ನಾಯಕ ಜಗ್ಗೇಶ್‌ ಅವರ ʼರಾಘವೇಂದ್ರ ಸ್ಟೋರ್ಸ್‌ʼ ಫಿಲ್ಮ್‌ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ. ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದಲ್ಲಿ ಹೊಂಬಾಳೆ ಪ್ರೊಡಕ್ಷನ್‌ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾ ಒಳ್ಳೆ ಸುದ್ದಿಯನ್ನು ನೀಡಿದೆ.

ಕೆಜಿಎಫ್‌ ಸಿನಿಮಾಗೆ ಬಂಡವಾಳ ಹೂಡಿದ್ದ ಹೊಂಬಾಳೆ ಫಿಲ್ಮಸ್‌ ಈ ಹಿಂದೆ ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನದ ರಾಜಕುಮಾರ ಹಾಗೂ ಯುವರತನ್ನ ಸಿನಿಮಾಗಳ ನಿರ್ಮಾಣ ಮಾಡಿತ್ತು. ಇದೀಗ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಪಕ್ಕಾ ಕಾಮಿಡಿ ಸಿನಿಮಾ ಆಗಿದೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಜಗ್ಗೇಶ್‌ ಅವರು ತೂಕವನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ. ಸಿನಿಮಾದಲ್ಲಿ 40 ವರ್ಷ ದಾಟಿದರೂ ಮದುವೆಯಾಗದ ಭಟ್ಟರ ಪಾತ್ರದಲ್ಲಿ ಜಗ್ಗೇಶ್‌ ನಟಿಸಲಿದ್ದು, ಕಚಗುಳಿ ಇಡಲು ಸಿದ್ಧವಾಗಿದ್ದರೆ.

ಇದನ್ನೂ ಓದಿ | ನವರಸನಾಯಕನಿಗೆ ಒಲಿದ ರಾಜ್ಯಸಭೆ: ನಿರ್ಮಲಾ ಸೀತಾರಾಮನ್‌ ಜತೆಗೆ ಜಗ್ಗೇಶ್‌ಗೆ ಬಿಜೆಪಿ ಟಿಕೆಟ್‌

ಯಾವಾಗಲೂ ಬಿಗ್‌ ಬಜೆಟ್‌ ಮೂವಿ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್‌ ಈ ಸಿನಿಮಾ ನಿರ್ಮಿಸಿದೆ. ಇದು ಸಂಸ್ಥೆಯ 12ನೇ ಸಿನಿಮಾ. ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಆಗಸ್ಟ್‌ 5 ರಂದು ರಿಲೀಸ್‌ ಆಗುತ್ತಿದೆ. ವರಮಹಾಲಕ್ಷ್ಮೀ ಹಬ್ಬದ ದಿನವೇ ರಿಲೀಸ್‌ ಗೊಳ್ಳುತ್ತಿರುವುದು ವಿಶೇಷ. 1982 ರಲ್ಲಿ ಇಬ್ಬನಿ ಕರಗಿತು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಜಗ್ಗೇಶ್‌ 2019 ರಲ್ಲಿ ʼಕಾಳಿದಾಸ ಕನ್ನಡ ಮೇಷ್ಟ್ರು ʼ ಸಿನಿಮಾದ ನಂತರ ಇದೇ ಸಿನಿಮಾ ತೆರೆಗೆ ಬರುತ್ತಿದೆ. ಲಾಕ್‌ಡೌನ್‌ ನಂತರ ಶೂಟಿಂಗ್‌ನಲ್ಲಿ ಬ್ಯಸಿಯಾದ ಜಗ್ಗೇಶ್‌ ಇದೀಗ ಮತ್ತೆ ಸಿನಿಪ್ರಿಯರನ್ನು ರಂಜಿಸಲು ಬರುತ್ತಿದ್ದಾರೆ.ಈ ಸಿನಿಮಾ ನಂತರ ತೋತಾಪುರಿ ಮತ್ತು ರಂಗನಾಯಕ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

ಜಗ್ಗೇಶ್ಗೆ ಧನ್ಯವಾದ ತಿಳಿಸಿದ ನಿರ್ದೇಶಕ ಸಂತೋಷ್​:

ಇನ್ನು, ಚಿತ್ರದ ನಿರ್ದೇಶಕರಾದ ಸಂತೋಷ​ ಆನಂದ್​ರಾಮ್ ಅವರು ಚಿತ್ರದ ಬಿಡುಗಡೆ ದಿನಾಂಕವನ್ನು ಟ್ವಿಟರ್​ ನಲ್ಲಿ ಹಂಚಿಕೊಂಡು ಜಗ್ಗೇಶ್​ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, ‘ಅಣ್ಣ ನಿಮ್ಮಂತ ಅಪ್ರತಿಮ ಕಲಾವಿದರ ಜೊತೆ ಸಿನಿಮಾ ಮಾಡುವುದು ನಮ್ಮಂತ ನಿರ್ದೇಶಕರಿಗೆ ಬರಹಗಾರರಿಗೆ ಒಂದು ಅನುಭವ ಹಾಗೂ ಕಲಿಕೆ. ನಿಮ್ಮ 40 ವರ್ಷದ ಅನುಭವ,ಕನ್ನಡ ಭಾಷೆ ಮೇಲಿರುವ ಅಭಿಮಾನ ಹಾಗು ಪಾಂಡಿತ್ಯ ಅದ್ಭುತ. ಈ ಸಿನಿಮಾದಲ್ಲಿ ನೀವು ನಗಿಸಿದ್ದೀರ, ಅಳಿಸಿದ್ದಿರ, ಜೀವಿಸಿದ್ದೀರ. love you ಅಣ್ಣ, ಧನ್ಯವಾದ ಗುರು ರಾಯರಿಗೆ‘ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Director ಉಪೇಂದ್ರ Returns: ಪಾನ್‌ ಇಂಡಿಯಾ ಸಿನಿಮಾಕ್ಕೆ ಜೂ.3ರಂದು ಮುಹೂರ್ತ

Exit mobile version