ರಾಗಿಣಿ ದ್ವಿವೇದಿ (Ragini Dwivedi) ಸದ್ಯ ‘ಮದನಿಕ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮದನಿಕ’ ಸಿನಿಮಾ ಚಿತ್ರೀಕರಣದ ವೇಳೆ ನಟಿ ರಾಗಿಣಿ ಕಾಲಿಗೆ ಪೆಟ್ಟಾಗಿ ಸಖತ್ ಸುದ್ದಿಯಲ್ಲಿದ್ದರು. ಇದರ ಬೆನ್ನಲ್ಲೇ ಇದೀಗ ಹೊಸ ಫೋಟೊಶೂಟ್ ಶೇರ್ ಮಾಡಿಕೊಂಡಿದ್ದಾರೆ.
ಸಖತ್ ಕ್ಯೂಟ್, ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಫ್ಯಾಷನ್ ಪರಿಣತ ಪ್ರಸಾದ್ ಬಿಡಪ ಅವರು ರಾಗಿಣಿ ಅವರ ಉಡುಗೆ ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ: Ragini Dwivedi: ರಾಜವರ್ಧನ್ ‘ಗಜರಾಮ’ ಸಿನಿಮಾದ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ ತುಪ್ಪದ ಬೆಡಗಿ ರಾಗಿಣಿ!
ಈಗಾಗಲೇ ರಾಗಿಣಿ ಮೋಹನ್ ಲಾಲ್ (Actor Mohan Lal) ಜತೆ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾಗೆ ಏಕ್ತಾ ಕಪೂರ್ ಅವರ ಸಹ ನಿರ್ಮಾಣವಿದೆ.
ರಾಗಿಣಿಯ ಈ ಹೊಸ ಅವತಾರಕ್ಕೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈಟ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ ʻತುಪ್ಪದʼ ಬೆಡಗಿ.
ರಾಗಿಣಿ ಅವರು ಸುದೀಪ್ ನಟನೆಯ ‘ಕೆಂಪೇ ಗೌಡ’ ಸಿನಿಮಾ ಮೂಲಕ ಫೇಮಸ್ ಆಗಿದ್ದರು.