ಬೆಂಗಳೂರು: ಜುಲೈ 21ರಂದು ರಾಜ್ಯಾದ್ಯಂತ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ (hostel hudugaru bekagiddare) ತೆರೆ ಕಂಡಿದೆ. ಇದಕ್ಕೂ ಮೊದಲು ನಟಿ ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ಕಮರ್ಶಿಯಲ್ ಕೋರ್ಟ್ ವಜಾ ಮಾಡಿತ್ತು. ಹೀಗಾಗಿ ಸಿನಿಮಾ ರಿಲೀಸ್ ಆಗಿದೆ. ತೀರ್ಪು ಬರುತ್ತಿದ್ದಂತೆ ರಿಷಬ್ ಶೆಟ್ಟಿ (Rishab Shetty) ಹಾಗೂ ರಾಜ್ ಬಿ ಶೆಟ್ಟಿ (Raj B Shetty) ಪೋಸ್ಟ್ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದೆ. ‘ನ್ಯಾಯ ಅಂದ್ರೆ ನ್ಯಾಯ ಜೈ ಆಂಜನೇಯ’ ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಅವರು, ‘ಬನ್ನಿ ಬನ್ನಿ ಎಲ್ಲೆಲ್ಲಿ ಬೆಂಕಿ ಬೀಳುತ್ತೆ ನೋಡೋಣ’ ಎಂದಿದ್ದಾರೆ. ಇದಾದ ಬಳಿಕ ಸ್ವಾತಿ ಮುತ್ತಿನ ಮಳೆ ಹನಿಯೆ ಸಿನಿಮಾ ಬಿಡುಗಡೆ ಆಗಿಲ್ಲ. ರಾಜ್ ಬಿ ಶೆಟ್ಟಿ- ನಿರ್ಮಾಪಕಿ ರಮ್ಯಾ ನಡುವೆ ವೈಮನಸ್ಸು ಇದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ
ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೇ ಬಳಸಲಾಗಿದೆ ಎಂದು ಈಗ ರಮ್ಯಾ ಅವರು ತಕರಾರು ತೆಗೆದಿದ್ದರು. ತನ್ನ ಒಪ್ಪಿಗೆ ಇಲ್ಲದೇ ಯಾವ ದೃಶ್ಯ ಬಳಸಬಾರದು ಎಂದು ತಡೆಯಾಜ್ಞೆ ನೀಡಿದ್ದರು. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಹಾಗೂ ಎಲ್ಲ ಕಡೆಗಳಿಂದ ತಮ್ಮ ದೃಶ್ಯ, ಫೋಟೊ, ಸುದ್ದಿ ಮತ್ತಿತ್ತರ ಕಂಟೆಂಟ್ಗಳನ್ನು ತೆಗೆದುಹಾಕಬೇಕು ಎಂದು ರಮ್ಯಾ ಡಿಮ್ಯಾಂಡ್ ಮಾಡಿದ್ದರು. 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೂಡ ಅವರು ನೋಟಿಸ್ನಲ್ಲಿ ಒತ್ತಾಯಿಸಿದ್ದರು. ಈ ಸಂಬಂಧ ಕಮರ್ಶಿಯಲ್ ಕೋರ್ಟ್ ಮೆಟ್ಟಿಲೇರಿದ್ದರು ರಮ್ಯಾ. ಆದರೀಗ ಹಾಸ್ಟೆಲ್ ಹುಡುಗರ ಪರ ನ್ಯಾಯಾಲಯ ಆದೇಶ ಹೊರಡಿಸಿದೆ. ಹಾಸ್ಟೆಲ್ ಹುಡುಗರ ಪರ ಲಾಯರ್ ವೇಲನ್ ವಾದ ಮಂಡಿಸಿದ್ದರು. ಜುಲೈ 21ರಂದು ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಮಾಡಲು ಅವಕಾಶ ನೀಡಿದೆ. ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾ ಗೊಳಿಸಿದೆ ಕೋರ್ಟ್.
ಇದನ್ನೂ ಓದಿ: Actress Ramya: ಹಾಸ್ಟೆಲ್ ಹುಡುಗರಿಗೆ ʻಜಯʼ ರಮ್ಯಾಗೆ ಹಿನ್ನಡೆ!
ಇದಾದ ಬಳಿಕ ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಜತೆಗೆ ರಿಷಬ್ ತಮ್ಮ ಹಳೆಯ ಕ್ರಶ್ ರಮ್ಯಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಹಾಸ್ಟೆಲ್ ಹುಡುಗರು ಸಿನಿಮಾದ ಮೇಲಿನ ತಡೆ ತೆರವುಗೊಳಿಸುತ್ತಿದ್ದಂತೇ ಟ್ವೀಟ್ ಮಾಡಿರುವ ರಿಷಬ್ ‘ನ್ಯಾಯ ಅಂದರೆ ನ್ಯಾಯ.. ಜೈ ಆಂಜನೇಯ!! ನಾಳೆ ಹಾಸ್ಟೆಲ್ ಹುಡುಗರು ರಿಲೀಸ್ ಆಗ್ತಿದೆ. ಥಿಯೇಟರ್ ನಲ್ಲಿ ಸಿಗೋಣ’ ಎಂದಿದ್ದಾರೆ.
ರಾಜ್ ಬಿ ಶೆಟ್ಟಿ ಪೋಸ್ಟ್
ರಿಷಬ್ ಶೆಟ್ಟಿ ಪೋಸ್ಟ್
ವಿಶೇಷವೆಂದರೆ ರಾಜ್ ಬಿ ಶೆಟ್ಟಿ ಅವರು ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೆ ಸಿನಿಮಾ ಇನ್ನೂ ಬಿಡುಗಡೆಯಾಗಬೇಕಿದೆ. ಹೀಗಿರುವಾಗ ಈ ರೀತಿ ಪೋಸ್ಟ್ ಕಂಡು ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Actress Ramya: ರಮ್ಯಾ ಮೇಲೆ ಗೌರವವಿದೆ, ಪಬ್ಲಿಸಿಟಿ ಗಿಮಿಕ್ ಅಲ್ಲ ಎಂದ ನಿರ್ದೇಶಕ!
ಸಂಭಾವನೆ ಬೇಡ ಎಂದಿದ್ದ ರಮ್ಯಾ?
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಸಂಭಾವನೆ ಬೇಡ ಎಂದಿದ್ದ ರಮ್ಯಾ. ಕೊನೆ ಕ್ಷಣದಲ್ಲಿ ಮನ ಬದಲಿಸಿದ್ಯಾಕೆ ಎಂಬುದು ಗೊತ್ತಿಲ್ಲ. ರಮ್ಯಾ ಬೇಡಿಕೆಗೆ ಒಪ್ಪಿ ಶೇಕಡ 5% ಸಂಭಾವನೆ ಕೊಡಲು ನಿರ್ಮಾಪಕರು ಮುಂದಾಗಿದ್ದರು. ಸ್ಯಾಟಲೈಟ್, ಹಾಗೂ ಡಿಜಿಟಲ್ ಹಕ್ಕುಗಳಿಂದ ಬರುವ ಹಣದಲ್ಲಿ ಶೇಕಡಾ 5ರಷ್ಟು ಸಂಭಾವನೆ ನೀಡೋದಾಗಿ ಹೇಳಿದ್ದರು. ಒಪ್ಪಂದಕ್ಕೆ ಕೊನೆಕ್ಷಣದಲ್ಲಿ ಉಲ್ಟಾ ಹೊಡೆದು ಶೇಕಡಾ 20ರಷ್ಟು ಸಂಭಾವನೆ ಬೇಕೆಂದು ರಮ್ಯಾ ಪಟ್ಟು ಹಿಡಿದಿದ್ದರು . ರಮ್ಯಾ ಹಾಸ್ಟೆಲ್ ಹುಡುಗರು ಶೆಟ್ಟಿ&ಬಳಗ ಹಾಗೂ kRG ಸ್ಟುಡಿಯೋಸ್ ಇದೆಲ್ಲದರ ನಡುವೆ ನಂಟು ಇದೆಯಾ..? ಈ ಎಲ್ಲ ಪ್ರಶ್ನೆಗಳಿಗೆ ರಮ್ಯಾ ಅವರ ಉತ್ತರಿಸಬೇಕಿದೆ.