Site icon Vistara News

Raj B Shetty: ಕುರಿ ತರಲು ಹೋಗಿ ಹೋತ ತಂದ್ರು; ಟಗರಿನ ಕಥೆ ಬಿಚ್ಚಿಟ್ಟ ರಾಜ್‌ !

Raj revealed the story of sheep In Toby Film

ಬೆಂಗಳೂರು: ರಾಜ್‌ ಬಿ ಶೆಟ್ಟಿ (Raj B Shetty) ಅವರ ʻಟೋಬಿʼ ಸಿನಿಮಾದ ಟಗರಿನ ಲುಕ್‌ ಬಗ್ಗೆ ನೋಡುಗರಿಗೆ ಕುತೂಹಲ ಜಾಸ್ತಿ ಆಗಿದೆ. ಇದೀಗ ವಿಸ್ತಾರ ನ್ಯೂಸ್‌ ಸಂದರ್ಶನದಲ್ಲಿ ಟಗರು ತಂದಾಗ ಆದ ತಮಾಷೆಗಳ ಬಗ್ಗೆ ಮಾತನಾಡಿದ್ದಾರೆ ರಾಜ್‌ ಬಿ ಶೆಟ್ಟಿ. ʻಮೊದಲು ಕುರಿ ತರಬೇಕು ಎಂತಾಗಿತ್ತು. ಆದರೆ ತಂಡ ತಂದಿದ್ದು ಹೋತವನ್ನುʼ; ಎಂದು ಎಳೆ ಎಳೆಯಾಗಿ ಸನ್ನಿವೇಶವನ್ನು ಹಂಚಿಕೊಂಡರು.

ರಾಜ್‌ ಬಿ ಶೆಟ್ಟಿ ಮಾತನಾಡಿ ʻʻಚಿತ್ರದುರ್ಗದಿಂದ ಈ ಕುರಿಯನ್ನು ಕರೆ ತರಲಾಯ್ತು. ನಮ್ಮ ತಂಡದಲ್ಲಿ ಮೊದಲು ಕುರಿ ತರಬೇಕು ಎಂತಾಗಿತ್ತು. ಆಮೇಲೆ ಹೋತ ತಂದರು(ಗಂಡು ಆಡು). ಅದರ ಕೊಂಬು ಹಿಂದುಗಡೆ ಇತ್ತು. ಫೋಟೊ ನೋಡಿದಾಗ ನಮಗೆ ಅದು ಹೋತವೆಂದು ಅನ್ನಿಸರಲಿಲ್ಲ. ಆ ಕಾರಣ ನನ್ನ ಸ್ನೇಹಿತನ ಮನೆಯಲ್ಲಿ ಬಿಟ್ಟೆವು. ಆದರೆ ಅದನ್ನು ಸಾಕಿದವರು ಪ್ರಾಣಿ ತರ ಸಾಕಲೇ ಇಲ್ಲ. ಅದು ನಾಯಿ ತರ ಇತ್ತು. ಎಲ್ಲಿ ಹೋದರು ಹಿಂದೆಲೇ ಬರುತ್ತಿತ್ತು. ಆದರೆ ಅದನ್ನು ಶೂಟಿಂಗ್‌ಗೆ ಬಳಸಿಕೊಳ್ಳಲು ಆಗಲಿಲಲ್ಲ. ಮತ್ತೆ ಚಿತ್ರದುರ್ಗದಿಂದ ಟಗರು ತರಿಸಲಾಯ್ತು. ಆಮೇಲೆ ಹೋತವನ್ನು ಬ್ರೀಡ್‌ಗೆ ಎಂದು ತೆಗೆದುಕೊಂಡು ಹೋದರು. ಆದರೆ ಅಲ್ಲಿ ಹೋದಾಗ ಗೊತ್ತಾಯ್ತು. ಅದು ಹೆಣ್ಣಿನ ಹಿಂದೆ ಹೋಗೋದೆ ಇಲ್ಲ ಅಂತ. ಥೇಟ್‌ ನಾಯಿ ತರ ಮನುಷ್ಯರ ಹಿಂದೆಯೇ ಇರುತ್ತಿತ್ತುʼʼಎಂದು ರಾಜ್‌ ತಮಾಷೆಯ ಸಂಗತಿಯನ್ನು ಹಂಚಿಕೊಂಡರು.

ಫಸ್ಟ್‌ ಲುಕ್‌ ನೋಡಿದಾಗ ಟಗರು ಹೈಲೈಟ್‌ ಆಗಿರುವುದು ಗೊತ್ತೇ ಇದೆ. ಈ ಬಗ್ಗೆ ರಾಜ್‌ ಮಾತನಾಡಿ ʻʻಇಲ್ಲಿ ಟಗರು ಕೇಲವ ರೂಪಕ ಹೊರತು ಬೇರೆ ಏಲ್ಲೂ ಬಳಸಿಲ್ಲ. ಟಗರುವಿನಲ್ಲಿ ಒಂದು ದಡ್ಡತನವಿದೆ. ಹೋರಾಡುವಂತಹ ಕಿಚ್ಚು ಇದೆ. ಅದು ರೂಪಕವಾಗುತ್ತದೆ. ಅದಕ್ಕೆ ಟಗರು ಸಿನಿಮಾದಲ್ಲಿ ಬಳಸಲಾಯ್ತುʼʼ ಎಂದರು.

ಇದನ್ನೂ ಓದಿ: Raj B Shetty: ಕಾರವಾರದ ವ್ಯಕ್ತಿಯ ವಿಚಿತ್ರ ಬದುಕಿನ ಕಥೆ ಈ ʻಟೋಬಿʼ; ಕಥೆಯ ಗುಟ್ಟು ಈಗ ರಿವೀಲ್‌!

ಕನ್ನಡ ಸಿನಿಮಾ ರಂಗದಲ್ಲಿ ಹೊಸ ರೀತಿಯ ಕಥೆಗಳನ್ನೇ ಹೊತ್ತು ತರುವ ನಟನಾಗಿ ಮಿಂಚುತ್ತಿದ್ದಾರೆ ರಾಜ್‌ ಬಿ ಶೆಟ್ಟಿ . ಗರುಡ ಗಮನ ವೃಷಭ ವಾಹನದಂತಹ ವಿಶೇಷ ಕಥಾ ಹಂದರವುಳ್ಳ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ರಾಜ್‌ ಇದೀಗ ʻಟೋಬಿʼ ಮೂಲಕ ಹೊಸ ಕಥೆಯೊಂದಿಗೆ ತೆರೆ ಮೇಲೆ ಬರುವುದಕ್ಕೆ ಸಿದ್ಧವಾಗಿದ್ದಾರೆ.

Raj B Shetty

ಅಂದ ಹಾಗೆ ಈ ಟೋಬಿ ಸಿನಿಮಾವನ್ನು ರಾಜ್‌ ಬಿ ಶೆಟ್ಟಿ ಅವರೇ ಚಿತ್ರದ ನಿರ್ದೇಶನ ಮಾಡುವುದರ ಜತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಕೂಡ. ಗರುಡ ಗಮನ ವೃಷಭ ವಾಹನ ಸಿನಿಮಾ ನಿರ್ಮಾಣ ಮಾಡಿದ್ದ ಲೈಟರ್‌ ಬುದ್ಧ ಫಿಲ್ಮ್ಸ್‌ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದೆ. ಅದರೊಂದಿಗೆ ಅಗಸ್ತ್ಯ ಫಿಲ್ಮ್ಸ್‌ ಕೂಡ ಸಾಥ್‌ ಕೊಟ್ಟಿದೆ. ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರ ಜತೆಯಲ್ಲಿ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್‌ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ ಕೊಟ್ಟಿದ್ದಾರೆ. ಈ ಸಿನಿಮಾ ಇದೇ ಆಗಸ್ಟ್‌ 25ರಂದು ತೆರೆ ಕಾಣಲಿದೆ.

Exit mobile version