Site icon Vistara News

Raj B Shetty: ಸೆನ್ಸಾರ್​ನಿಂದ ಯುಎ ಸರ್ಟಿಫಿಕೇಟ್ ಪಡೆದ ‘ಟೋಬಿ’!

Tobi U A Certificate

ಬೆಂಗಳೂರು: ರಾಜ್‌ ಬಿ ಶೆಟ್ಟಿ (Raj B Shetty) ಅಭಿನಯದ ‘ಟೋಬಿ’ ಚಿತ್ರದ ಟ್ರೈಲರ್‌ ಆಗಸ್ಟ್‌ 4ರಂದು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಗರುಡ ಗಮನ ವೃಷಭ ವಾಹನದಂತಹ ವಿಶೇಷ ಕಥಾ ಹಂದರವುಳ್ಳ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ರಾಜ್‌ ಬಿ ಶೆಟ್ಟಿ (Raj B Shetty) ಇದೀಗ ʻಟೋಬಿʼ ಮೂಲಕ ಹೊಸ ಕಥೆಯೊಂದಿಗೆ ತೆರೆ ಮೇಲೆ ಬರುವುದಕ್ಕೆ ಸಿದ್ಧವಾಗಿದ್ದಾರೆ. ಇದೀಗ ಮತ್ತೆ ರಾಜ್‌ ಅವರು ಹೊಸ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ. ಟೋಬಿ ಸಿನಿಮಾಗೆ ಯು ಎ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. ‘ಟೋಬಿ’ ನೋಡಿ ಸೆನ್ಸಾರ್‌ ಮಂಡಳಿ ಮೆಚ್ಚಿದೆ. ಇದೇ ಆಗಸ್ಟ್‌ 25ರಂದು ಟೋಬಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 180ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಟೋಬಿ ತೆರೆ ಕಾಣಲಿದೆ.

ಒಂದು ಮೊಟ್ಟೆ ಕಥೆಯನ್ನು ಹೇಳಿದ್ದ ರಾಜ್‌ ಈಗ ಮಾರಿಯ ಕಥೆ ಹೇಳಲು ಹೊರಟಿದ್ದಾರೆ. ಅವರು ನಾಯಕ ನಟನಾಗಿ ನಟಿಸುತ್ತಿರುವ ʼಟೋಬಿʼ ಚಿತ್ರದ ಫಸ್ಟ್‌ ಲುಕ್‌ ಈ ಹಿಂದೆ ಬಿಡುಗಡೆ ಆಗಿತ್ತು. ಅಷ್ಟೇ ಅಲ್ಲದೇ ಚಿತ್ರ ಬಿಡುಗಡೆ ದಿನಾಂಕವನ್ನೂ ಅನೌನ್ಸ್‌ ಮಾಡಲಾಗಿತ್ತು. ರಾಜ್ ಬಿ ಶೆಟ್ಟಿ ಮೂಗು ಚುಚ್ಚಿಸಿಕೊಂಡು ತಮ್ಮ ಪಾತ್ರಕ್ಕಾಗಿ ವಿಶೇಷ ಲುಕ್ ಮಾಡಿಸಿಕೊಂಡಿದ್ದರು.

ಇದನ್ನೂ ಓದಿ: Raj B Shetty: 2 ಬ್ರೇಕ್‌ ಅಪ್‌ ಆಗಿದೆ, ಈಗ ಒಂದು ರಿಲೇಶನ್​ಶಿಪ್ ಇದೆ ಎಂದ ರಾಜ್‌ ಬಿ ಶೆಟ್ಟಿ!

ʻಟೋಬಿ’ ಸಿನಿಮಾವನ್ನು ರಾಜ್‌ ಅವರ ಜತೆ ಕೆಲಸ ಮಾಡುತ್ತಿದ್ದ ಬಾಸಿಲ್‌ ಎಂಬುವವರು ನಿರ್ದೇಶನ ಮಾಡಿದ್ದಾರೆ.. ಗರುಡ ಗಮನ ವೃಷಭ ವಾಹನ ಸಿನಿಮಾ ನಿರ್ಮಾಣ ಮಾಡಿದ್ದ ಲೈಟರ್‌ ಬುದ್ಧ ಫಿಲ್ಮ್ಸ್‌ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದೆ. ಅದರೊಂದಿಗೆ ಅಗಸ್ತ್ಯ ಫಿಲ್ಮ್ಸ್‌ ಕೂಡ ಸಾಥ್‌ ಕೊಟ್ಟಿದೆ. ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರ ಜತೆಯಲ್ಲಿ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್‌ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ ಕೊಟ್ಟಿದ್ದಾರೆ.

ಇದನ್ನೂ ಓದಿ: Raj B Shetty: 3.73 ಲಕ್ಷ ಕತೆಗಳ ನಡುವೆ ಟೋಬಿ ಗೆದ್ದೇ ಬಿಟ್ಟಿತ್ತು‌ ಎಂದ ದಯಾನಂದ್‌; ತಮನ್ನಾ ಇಷ್ಟ ಪಟ್ಟಿದ್ಯಾಕೆ?

ಈ ಸಿನಿಮಾ ಇದೇ ಆಗಸ್ಟ್‌ 25ರಂದು ತೆರೆ ಕಾಣಲಿದೆ. ಇನ್ನು ರಾಜ್‌ ಬಿ ಶೆಟ್ಟಿ ಅವರು ಈ ಸಿನಿಮಾದ ಜತೆ ಜತೆಯಲ್ಲಿ ʼಸ್ವಾತಿ ಮುತ್ತಿನ ಮಳೆಹನಿಯೇʼ, ʼರಾಮನ ಅವತಾರʼ ಸೇರಿದಂತೆ ಅನೇಕ ಸಿನಿಮಾಗಳ ಕೆಲಸದಲ್ಲಿ ಬಿಜಿ ಇದ್ದಾರೆ.

Exit mobile version