Site icon Vistara News

Raj B Shetty : ಭಯಾನಕ ಮಾರಿಯನ್ನು ಹೊತ್ತು ತರುತ್ತಿದ್ದಾರೆ ರಾಜ್‌ ಬಿ ಶೆಟ್ಟಿ! ಟೋಬಿ ಬರುವ ದಿನವೂ ಫಿಕ್ಸ್‌

toby movie release date

#image_title

ಬೆಂಗಳೂರು: ರಾಜ್‌ ಬಿ ಶೆಟ್ಟಿ (Raj B Shetty) ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ಹೊಸ ರೀತಿಯ ಕಥೆಗಳನ್ನೇ ಹೊತ್ತು ತರುವ ನಟನಾಗಿ ಮಿಂಚುತ್ತಿದ್ದಾರೆ. ಗರುಡ ಗಮನ ವೃಷಭ ವಾಹನದಂತಹ ವಿಶೇಷ ಕಥಾ ಹಂದರವುಳ್ಳ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದ ರಾಜ್‌ ಇದೀಗ ಹೊಸದೊಂದು ಕಥೆಯೊಂದಿಗೆ ತೆರೆ ಮೇಲೆ ಬರುವುದಕ್ಕೆ ಸಿದ್ಧವಾಗಿದ್ದಾರೆ.

ಒಂದು ಮೊಟ್ಟೆ ಕಥೆಯನ್ನು ಹೇಳಿದ್ದ ರಾಜ್‌ ಈಗ ಮಾರಿಯ ಕಥೆ ಹೇಳಲು ಹೊರಟಿದ್ದಾರೆ. ಅವರು ನಾಯಕ ನಟನಾಗಿ ನಟಿಸುತ್ತಿರುವ ʼಟೋಬಿʼ ಚಿತ್ರದ ಮೋಷನ್‌ ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿದ್ದು, ಚಿತ್ರ ಬಿಡುಗಡೆ ದಿನಾಂಕವನ್ನೂ ಅನೌನ್ಸ್‌ ಮಾಡಲಾಗಿದೆ.

ಇದನ್ನೂ ಓದಿ: Video Viral: ಒಂದು ಟಿಸಿಗೆ ಬರೀ ನೂರೇ ರೂಪಾಯಿ, ಕಾಸು ಕೊಟ್ರಷ್ಟೇ ಇಲ್ಲಿ ಕಮಾಯಿ; ಈತ ದುರ್ಗದ ಲಂಚ ಪುರುಷ!
ಮೋಷನ್‌ ಪೋಸ್ಟರ್‌ ನೋಡುವುದಕ್ಕೇ ಭಯಾನಕವಾಗಿದೆ. ರೊಚ್ಚಿಗೆದ್ದ ಟಗರಿನ ಮೂಗಿಗೆ ದೊಡ್ಡದೊಂದು ಮೂಗುತಿ, ಟಗರಿನ ಮುಖದ ಮೇಲೆ ರಕ್ತದ ಕಲೆಗಳನ್ನು ತೋರಿಸಲಾಗಿದೆ. ಅದಲ್ಲದೆ ಸಿನಿಮಾಕ್ಕೆ ʼಮಾರಿ ಮಾರಿ, ಮಾರಿಗೆ ದಾರಿʼ ಎಂದು ಉಪ ಶೀರ್ಷಿಕೆಯನ್ನೂ ಕೊಡಲಾಗಿದೆ. ಮೋಷನ್‌ ಪೋಸ್ಟರ್‌ನಲ್ಲಿ ಇದೇ ಸಾಲುಗಳನ್ನು ಹಾಡಿನ ರೂಪದಲ್ಲಿ ಹಾಕಲಾಗಿದೆ.

ಅಂದ ಹಾಗೆ ಈ ಟೋಬಿ ಸಿನಿಮಾವನ್ನು ರಾಜ್‌ ಬಿ ಶೆಟ್ಟಿ ಅವರೇ ಚಿತ್ರದ ನಿರ್ದೇಶನ ಮಾಡುವುದರ ಜತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಕೂಡ. ಗರುಡ ಗಮನ ವೃಷಭ ವಾಹನ ಸಿನಿಮಾ ನಿರ್ಮಾಣ ಮಾಡಿದ್ದ ಲೈಟರ್‌ ಬುದ್ಧ ಫಿಲ್ಮ್ಸ್‌ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದೆ. ಅದರೊಂದಿಗೆ ಅಗಸ್ತ್ಯ ಫಿಲ್ಮ್ಸ್‌ ಕೂಡ ಸಾಥ್‌ ಕೊಟ್ಟಿದೆ. ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರ ಜತೆಯಲ್ಲಿ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್‌ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ ಕೊಟ್ಟಿದ್ದಾರೆ.

ಇದನ್ನೂ ಓದಿ: Aamir Khan : ದಕ್ಷಿಣ ಭಾರತ ಸಿನಿಮಾದಲ್ಲಿ ವಿಲನ್‌ ಆಗ್ತಾರಂತೆ ಬಾಲಿವುಡ್‌ನ ಮಿಸ್ಟರ್‌ ಪರ್ಫೆಕ್ಟ್‌ ಆಮೀರ್ ಖಾನ್‌!
ಮೋಷನ್‌ ಪೋಸ್ಟರ್‌ ಮೂಲಕ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ ಇದೇ ಆಗಸ್ಟ್‌ 25ರಂದು ತೆರೆ ಕಾಣಲಿದೆ. ಮೋಷನ್‌ ಪೋಸ್ಟರ್‌ ಜತೆಯಲ್ಲೇ ಸಿನಿ ತಂಡ ಸಿನಿಮಾ ಬಿಡುಗಡೆ ದಿನಾಂಕವನ್ನೂ ಹೇಳಿದೆ. ಇನ್ನು ರಾಜ್‌ ಬಿ ಶೆಟ್ಟಿ ಅವರು ಈ ಸಿನಿಮಾದ ಜತೆ ಜತೆಯಲ್ಲಿ ʼಸ್ವಾತಿ ಮುತ್ತಿನ ಮಳೆಹನಿಯೇʼ, ʼರಾಮನ ಅವತಾರʼ ಸೇರಿದಂತೆ ಅನೇಕ ಸಿನಿಮಾಗಳ ಕೆಲಸದಲ್ಲಿ ಬಿಜಿ ಇದ್ದಾರೆ.

Exit mobile version