Site icon Vistara News

Raj B Shetty: ರಾಜ್‌ ಬಿ ಶೆಟ್ಟಿ ʻಟೋಬಿʼ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್‌!

𝐓𝐨𝐛𝐲 Poster

ಬೆಂಗಳೂರು: ಗರುಡ ಗಮನ ವೃಷಭ ವಾಹನದಂತಹ ವಿಶೇಷ ಕಥಾ ಹಂದರವುಳ್ಳ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ರಾಜ್‌ ಬಿ ಶೆಟ್ಟಿ (Raj B Shetty) ಇದೀಗ ʻಟೋಬಿʼ ಮೂಲಕ ಹೊಸ ಕಥೆಯೊಂದಿಗೆ ತೆರೆ ಮೇಲೆ ಬರುವುದಕ್ಕೆ ಸಿದ್ಧವಾಗಿದ್ದಾರೆ. ಇದೀಗ ಟೋಬಿ ಚಿತ್ರದ ಟ್ರೈಲರ್‌ ಬಿಡುಗಡೆ ದಿನಾಂಕ ರಿವೀಲ್‌ ಆಗಿದೆ. ಆಗಸ್ಟ್‌ 4ರಂದು ಸಂಜೆ 4.05 ಕ್ಕೆ ಟೋಬಿ ಟ್ರೈಲರ್ ಲಾಂಚ್ ಆಗಲಿದೆ. ಇದೊಂದು ಮಾಸ್ ಸಿನಿಮಾವಾಗಿದ್ದು ರಾಜ್ ಬಿ ಶೆಟ್ಟಿ ಮೂಗು ಚುಚ್ಚಿಸಿಕೊಂಡು ತಮ್ಮ ಪಾತ್ರಕ್ಕಾಗಿ ವಿಶೇಷ ಲುಕ್ ಮಾಡಿಸಿಕೊಂಡಿದ್ದರು.

ಒಂದು ಮೊಟ್ಟೆ ಕಥೆಯನ್ನು ಹೇಳಿದ್ದ ರಾಜ್‌ ಈಗ ಮಾರಿಯ ಕಥೆ ಹೇಳಲು ಹೊರಟಿದ್ದಾರೆ. ಅವರು ನಾಯಕ ನಟನಾಗಿ ನಟಿಸುತ್ತಿರುವ ʼಟೋಬಿʼ ಚಿತ್ರದ ಫಸ್ಟ್‌ ಲುಕ್‌ ಈ ಹಿಂದೆ ಬಿಡುಗಡೆ ಆಗಿತ್ತು. ಅಷ್ಟೇ ಅಲ್ಲದೇ ಚಿತ್ರ ಬಿಡುಗಡೆ ದಿನಾಂಕವನ್ನೂ ಅನೌನ್ಸ್‌ ಮಾಡಲಾಗಿತ್ತು. ಇದೀಗ ರಾಜ್‌ ಬಿ ಶೆಟ್ಟಿ ಟ್ರೈಲರ್‌ ಬಿಡುಗಡೆ ದಿನಾಂಕ ತಿಳಿಸಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಇದನ್ನೂ ಓದಿ: Raj B Shetty: ಮೂಗು ಚುಚ್ಚುವಾಗ ನೋವು ಬರದಂತೆ ಇಂಜೆಕ್ಷನ್‌ ನೀಡಲಾಗಿತ್ತು; ರಾಜ್ ಬಿ ಶೆಟ್ಟಿ ಮೂಗುತಿ ಕಥೆ!

‘ಟೋಬಿ’ ಸಿನಿಮಾವನ್ನು ರಾಜ್‌ ಅವರ ಜತೆ ಕೆಲಸ ಮಾಡುತ್ತಿದ್ದ ಬಾಸಿಲ್‌ ಎಂಬುವವರು ನಿರ್ದೇಶನ ಮಾಡಿದ್ದಾರೆ.. ಗರುಡ ಗಮನ ವೃಷಭ ವಾಹನ ಸಿನಿಮಾ ನಿರ್ಮಾಣ ಮಾಡಿದ್ದ ಲೈಟರ್‌ ಬುದ್ಧ ಫಿಲ್ಮ್ಸ್‌ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದೆ. ಅದರೊಂದಿಗೆ ಅಗಸ್ತ್ಯ ಫಿಲ್ಮ್ಸ್‌ ಕೂಡ ಸಾಥ್‌ ಕೊಟ್ಟಿದೆ. ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರ ಜತೆಯಲ್ಲಿ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್‌ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ ಕೊಟ್ಟಿದ್ದಾರೆ.

ಈ ಸಿನಿಮಾ ಇದೇ ಆಗಸ್ಟ್‌ 25ರಂದು ತೆರೆ ಕಾಣಲಿದೆ. ಇನ್ನು ರಾಜ್‌ ಬಿ ಶೆಟ್ಟಿ ಅವರು ಈ ಸಿನಿಮಾದ ಜತೆ ಜತೆಯಲ್ಲಿ ʼಸ್ವಾತಿ ಮುತ್ತಿನ ಮಳೆಹನಿಯೇʼ, ʼರಾಮನ ಅವತಾರʼ ಸೇರಿದಂತೆ ಅನೇಕ ಸಿನಿಮಾಗಳ ಕೆಲಸದಲ್ಲಿ ಬಿಜಿ ಇದ್ದಾರೆ.

Exit mobile version