Site icon Vistara News

Raj B Shetty: ಚೈತ್ರಾ ಆಚಾರ್-ರಾಜ್‌ ಅಭಿನಯಕ್ಕೆ ಜನ ಫಿದಾ! ʻಟೋಬಿʼ ನೋಡಿ ಫ್ಯಾನ್ಸ್‌ ಹೇಳಿದ್ದೇನು?

Raj B Shetty Toby

ಬೆಂಗಳೂರು: ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ (Raj B Shetty) ಅಭಿನಯದ ʼಟೋಬಿʼ ಸಿನಿಮಾ ಆಗಸ್ಟ್‌ 25ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿದೆ. ಟೋಬಿ ಸಿನಿಮಾ ರಾಜ್ಯದ 175 ಸಿಂಗಲ್ ಥಿಯೇಟರ್‌ನಲ್ಲಿ ರಿಲೀಸ್ ಆಗಿದೆ. ಕರ್ನಾಟಕ ಹೊರತುಪಡಿಸಿ ಹೈದರಾಬಾದ್, ಚೆನ್ನೈ, ಗೋವಾ, ಮುಂಬೈ ಮತ್ತು ದೆಹಲಿಯಲ್ಲಿ ಇಂದೇ ಟೋಬಿ ರಿಲೀಸ್ ಆಗಿದೆ. ಸೋಷಿಯಲ್‌ ಮೀಡಿಯಾಗಳಲ್ಲಿ ಟೋಬಿಯದ್ದೇ ಹವಾ. ಚೈತ್ರಾ ಆಚಾರ್‌ ಹಾಗೂ ರಾಜ್‌ ಬಿ ಶೆಟ್ಟಿ ಅವರ ನಟನೆಗೆ ಮೆಚ್ಚುಗೆಗಳು ವ್ಯಕ್ತವಾಗಿವೆ. ಇಲ್ಲಿದೆ ಟ್ವಿಟರ್‌ ವಿಮರ್ಶೆ!

ಒಬ್ಬರು ʻʻಸಿನಿಮಾದಲ್ಲಿ ಸಣ್ಣ ಪುಟ್ಟ ನ್ಯೂನತೆಗಳ ಹೊರತಾಗಿಯೂ, ಟೋಬಿ ಒಂದೊಳ್ಳೆ ಸಿನಿಮಾ. ಅದ್ಭುತ ಸಿನಿಮೀಯ ಅನುಭವʼʼಎಂದು ಬರೆದುಕೊಂಡಿದ್ದಾರೆ.

ʻʻಟೋಬಿ ಸಿನಿಮಾಗೆ ತಾಂತ್ರಿಕ ತಂಡ ಪ್ಲಸ್ ಪಾಯಿಂಟ್‌. ಛಾಯಾಗ್ರಹಣ ಮತ್ತು ಹಿನ್ನೆಲೆ ಧ್ವನಿ ಅತ್ಯುತ್ತಮವಾಗಿತ್ತುʼʼಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ʻʻಚೈತ್ರಾ ಆಚಾರ್‌ ಹಾಗೂ ರಾಜ್‌ಬಿ ಶೆಟ್ಟಿ ಅವರ ಪ್ರದರ್ಶನ ಅತ್ಯದ್ಭುತʼʼ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ʻʻಇದು ಗರುಡಗಮನ ವೃಷಭ ವಾಹನ ಸಿನಿಮಾದಂತಹ ಸಾಮಾನ್ಯ ಕಮರ್ಷಿಯಲ್ ಚಿತ್ರವಲ್ಲ. ಗರುಡಗಮನ ವೃಷಭ ವಾಹನ ದೃಶ್ಯಗಳನ್ನು ಟೋಬಿಯಲ್ಲಿ ನಿರೀಕ್ಷಿಸಬೇಡಿ. ಇದು ಒಂದು ರೀತಿಯ ಮಾಸ್ ಮಿಶ್ರಿತ ಸಿನಿಮಾ, ಚಿತ್ರವು ತಾಂತ್ರಿಕವಾಗಿ ಅದ್ಭುತವಾಗಿದೆ. ವಿಶೇಷವಾಗಿ ಛಾಯಾಗ್ರಹಣ ಮತ್ತು ಹಿನ್ನೆಲೆಧ್ವನಿ ತುಂಬ ಚೆನ್ನಾಗಿದೆ.
ಕಥೆ ಸರಳವಾಗಿದೆ ಆದರೆ ಬರವಣಿಗೆ ಚಪ್ಪಾಳೆಗೆ ಅರ್ಹವಾಗಿದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Raj B Shetty: ಚೈತ್ರಾ ಆಚಾರ್‌ ಕಿಸ್‌ ಮಾಡಿದ್ದರ ಬಗ್ಗೆ ʻರಾಜ್‌ ಬಿ ಶೆಟ್ಟಿʼ ಹೇಳಿದ್ದೇನು?

ಬಾಸಿಲ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್​, ರಾಜ್​ ದೀಪಕ್​ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮಿಧುನ್​ ಮುಕುಂದನ್​ ಸಂಗೀತ ನೀಡಿದ್ದಾರೆ.

ಗರುಡ ಗಮನ ವೃಷಭ ವಾಹನ ಸಿನಿಮಾ ನಿರ್ಮಾಣ ಮಾಡಿದ್ದ ಲೈಟರ್‌ ಬುದ್ಧ ಫಿಲ್ಮ್ಸ್‌ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದೆ. ಅದರೊಂದಿಗೆ ಅಗಸ್ತ್ಯ ಫಿಲ್ಮ್ಸ್‌ ಕೂಡ ಸಾಥ್‌ ಕೊಟ್ಟಿದೆ. ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರ ಜತೆಯಲ್ಲಿ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್‌ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ ಕೊಟ್ಟಿದ್ದಾರೆ.

Exit mobile version