Site icon Vistara News

Raj Kundra: ಡಿವೋರ್ಸ್‌ ಅಲ್ಲ; ಆದರೂ ಬೇಸರದಲ್ಲಿಯೇ ಬೀಳ್ಕೊಟ್ಟ ರಾಜ್ ಕುಂದ್ರಾ!

Raj Kundra Masks

ಬೆಂಗಳೂರು: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ (Raj Kundra) ಅವರು ಸುಮಾರು ಎರಡು ವರ್ಷಗಳ ನಂತರ ಸಾರ್ವಜನಿಕವಾಗಿ ಮುಖವಾಡ ತೆಗೆದು ಮುಖ ತೋರಿಸಿ, ತನ್ನ  ‘UT 69’ (UT 69 Movie) ಸಿನಿಮಾ ಟ್ರೈಲರ್‌ ವಿಚಾರವಾಗಿ ಸಖತ್‌ ಸುದ್ದಿಯಲ್ಲಿದ್ದರು. ಇದ್ದಕ್ಕಿದ್ದಂತೆ ʻʻನಾವು ಬೇರ್ಪಟ್ಟಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮಗೆ ಸಮಯವನ್ನು ನೀಡಿʼʼಎಂದು ಟ್ವೀಟ್‌ ಮಾಡಿದ್ದರು. ಆದರೆ ಇದು ಡಿವೋರ್ಸ್‌ ವಿಚಾರ ಅಲ್ಲ ಎಂಬುದು ಇದೀಗ ಸ್ಪಷ್ಟವಾಗಿದೆ. ʻʻನಾನು ಹಾಕಿಕೊಳ್ಳುತ್ತಿದ್ದ ಮಾಸ್ಕ್‌ಗಳು, ಈಗ ಪ್ರತ್ಯೇಕಗೊಳ್ಳುವ ಸಮಯ ಬಂದಿದೆʼʼಎಂದು ಇನ್‌ಸ್ಟಾ ಮೂಲಕ ಕ್ಲ್ಯಾರಿಟಿ ಕೊಟ್ಟಿದ್ದಾರೆ.

ಟ್ವಿಟರ್‌ನಲ್ಲಿ ʻʻನಾವು ಬೇರ್ಪಟ್ಟಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮಗೆ ಸಮಯವನ್ನು ನೀಡಿʼʼಎಂದು ಏಕಾಏಕಿ ಟ್ವೀಟ್‌ ಮಾಡಿದ್ದರು. ಶಿಲ್ಪಾ ಶೆಟ್ಟಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ಪ್ರಶ್ನೆಯನ್ನು ಸೋಷಿಯಲ್‌ ಮೀಡಿಯಾ ಮುಖಾಂತರ ಫ್ಯಾನ್ಸ್‌ ಕೇಳಲಾರಂಬಿಸಿದ್ದರು. ಕೆಲವರು ಇದು ಪ್ರಚಾರದ ಗಿಮಿಕ್ ಎಂದು ಕಮೆಂಟ್‌ ಕೂಡ ಮಾಡಿದ್ದರು. ಆದರೀಗ ಸತ್ಯ ಬೇರೆಯೇ ಇದೆ. ʻʻಮಾಸ್ಕ್‌ಗಳು ಈಗ ಪ್ರತ್ಯೇಕಗೊಳ್ಳುವ ಸಮಯ! ಕಳೆದ ಎರಡು ವರ್ಷಗಳಿಂದ ನನ್ನನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳುʼʼಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ ರಾಜ್‌.

ಅಂತೂ ಮಾಸ್ಕ್‌ಗೆ ಬಿಳ್ಕೊಟ್ಟಿದ್ದಾರೆ ರಾಜ್‌ ಕುಂದ್ರಾ. ತಮ್ಮ ಮಾಸ್ಕ್‌ ಕಲೆಕ್ಷನ್‌ ವಿಡಿಯೊ ಕೂಡ ರಾಜ್‌ ಹಂಚಿಕೊಂಡಿದ್ದಾರೆ. ಇದೀಗ ನೆಟ್ಟಿಗರು ʻʻಕಲೆಕ್ಷನ್‌ ಸೂಪರ್‌ʼʼಎಂದು ಕಮೆಂಟ್‌ ಮಾಡಿದ್ದಾರೆ. ಅಶ್ಲೀಲ ವಿಡಿಯೊ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ ಕುಂದ್ರಾ, ಜೈಲಿನಲ್ಲಿ ತಾವು ಎದುರಿಸಿದ ಸಮಸ್ಯೆಗಳನ್ನೇ ಆಧರಿಸಿ ‘ಯುಟಿ 69’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ.ಸಿನಿಮಾದ ಟ್ರೈಲರ್‌ ಅ. 18ರಂದು ಬಿಡುಗಡೆ ಆಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖವಾಡ ತೆರೆದು ಮಾಧ್ಯಮಗಳಿಗೆ ಮುಖ ತೋರಿಸಿದ್ದಾರೆ ರಾಜ್ ಕುಂದ್ರಾ. ರಾಜ್ ಕುಂದ್ರಾ ತಮ್ಮದೇ ಜೀವನದಲ್ಲಿ ನಡೆದ ಘಟನೆಯನ್ನೇ ಆಧರಿಸಿದ ಸಿನಿಮಾ ಇದು. ಸಮಾರಂಭದಲ್ಲಿ ಮಾತನಾಡಿದ ರಾಜ್, “ಚಿತ್ರ ನನ್ನ 63 ದಿನಗಳ ಜೈಲಿನಲ್ಲಿರುವ ಜರ್ನಿಯಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನಗೆ ತಿಳಿದಿದ್ದರಿಂದ ನಾನು ಸಿಂಹದಂತೆ ಹೊರಬಂದೆ. ಯುಟಿ-69 ತನ್ನ ಜೀವನದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದ ವಿಡಂಬನಾತ್ಮಕ ಹಾಸ್ಯವಾಗಿದೆʼʼ ಎಂದು ರಾಜ್ ಪ್ರಸ್ತಾಪಿಸಿದ್ದರು.

ಇದನ್ನೂ ಓದಿ: Raj Kundra: ಶಿಲ್ಪಾ ಶೆಟ್ಟಿ-ರಾಜ್‌ ವೈವಾಹಿಕ ಜೀವನದಲ್ಲಿ ಬಿರುಕು; ಟ್ವೀಟ್‌ ವೈರಲ್‌!

ರಾಜ್ ಕುಂದ್ರಾ ಯುಟಿ-69 ಮೂಲಕ ನಟನೆಗೆ ಪದಾರ್ಪಣೆ ಮಾಡುತ್ತಿದ್ದು ಮಾತ್ರವಲ್ಲದೆ ಶಾನವಾಜ್ ಅಲಿ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದಾರೆ. U-69 ನವೆಂಬರ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

Exit mobile version