Site icon Vistara News

Raj Kundra | ಬಾಯಿ ಮುಚ್ಚಿ ಅಂದ್ರು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ: ಟ್ರೋಲಿಗರಿಗೆ ತಿರುಗೇಟು!

Raj Kundra

ಬೆಂಗಳೂರು : ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ (Raj Kundra) ಆ್ಯಪ್‌ಗಳಲ್ಲಿ ಪೋರ್ನ್‌ ಚಿತ್ರಗಳನ್ನು ಅಪ್‌ಲೋಡ್‌ ಮಾಡಿರುವ ಆರೋಪದ ಮೇಲೆ ಬಂಧನವಾಗಿದ್ದರು. ಒಂದು ವರ್ಷದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರಾಜ್‌ ಕುಂದ್ರಾ ತಮ್ಮ ಟ್ವಿಟರ್‌ನಲ್ಲಿ ಹೊಸ ವೇಷದೊಂದಿಗೆ ಗಮನ ಸೆಳೆದಿದ್ದಾರೆ. ʻʻಕಥೆ ಗೊತ್ತಿಲ್ಲದಿದ್ದರೆ ಬಾಯಿ ಮುಚ್ಚಿʼʼ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದು, ಸಾಕಷ್ಟು ಸುದ್ದಿಯಲ್ಲಿದ್ದಾರೆ.

ಜೈಲಿನಿಂದ ಬಿಡುಗಡೆ ಆದ ಬಳಿಕ ಸಾರ್ವಜನಿಕರಿಂದ ದೂರವೇ ಉಳಿದಿದ್ದ ರಾಜ್‌ ಕುಂದ್ರಾ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವುದರ ಮೂಲಕ ಸುದ್ದಿಯಲ್ಲಿದ್ದಾರೆ. ಒಂದು ವರ್ಷದ ಬಳಿಕ ರಾಜ್‌ ಕುಂದ್ರಾ ಮಾತನಾಡಿದ್ದಾರೆ. ʻʻಸತ್ಯ ಶೀಘ್ರದಲ್ಲೇ ಹೊರ ಬೀಳಲಿದೆ. ನನ್ನ ಆತ್ಮೀಯರಿಗೆ ಧನ್ಯವಾದಗಳು. ನಿಮಗೆ ಪೂರ್ತಿ ಕಥೆ ಗೊತ್ತಿಲ್ಲದಿದ್ದರೆ ಬಾಯಿ ಮುಚ್ಚಿ. ಇದು ನ್ಯಾಯವನ್ನು ಪಡೆಯುವ ಸಮಯʼʼ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಚಿತ್ರದಲ್ಲಿ ʻʻನನಗೆ ಹೊಸ ದ್ವೇಷಿಗಳ ಅವಶ್ಯಕತೆ ಇದೆ. ಕಾರಣ ಹಳೆಯವವರು ನನ್ನನ್ನು ಮೆಚ್ಚಿಕೊಳ್ಳಲು ಪ್ರಾರಂಭಿಸಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ರೀತಿಯ ಟ್ವೀಟ್‌ಗೆ ಥರಹೇವಾರಿ ಪ್ರತಿಕ್ರಿಯೆಗಳು ಬರುತ್ತಿವೆ.

ಇದನ್ನೂ ಓದಿ | Shilpa Shetty | ಶೂಟಿಂಗ್‌ ವೇಳೆ ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ

ಕಳೆದ ವರ್ಷ ಜುಲೈ 19ರಂದು ರಾಜ್ ಕುಂದ್ರಾ ಬಂಧನವಾಗಿದ್ದರು. ಸೆ.21, 2021ರಂದು ಜಾಮೀನಿನ ಮೇಲೆ ಬಿಡುಗಡೆ ಆದರು. ರಾಜ್‌ ಕುಂದ್ರಾ ಬಂಧನದ ಬಳಿಕ ನಟಿ ಶೆರ್ಲಿನ್‌ ಚೋಪ್ರಾ ಹಾಗೂ ಪೂನಂ ಪಾಂಡೆ ರಾಜ್ ಕುಂದ್ರಾ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಕೆಲವು ನಟಿಯರು ಅತ್ಯಾಚಾರ ಯತ್ನದ ಆರೋಪಗಳನ್ನೂ ಮಾಡಿದರು. ಆದರೆ ನಟಿ ಗೆಹನಾ ವಸಿಷ್ಠ ಮಾತ್ರ ರಾಜ್ ಕುಂದ್ರಾ ಪರವಾಗಿ ಹೇಳಿಕೆಗಳನ್ನು ನೀಡಿದರು. ರಾಜ್ ಕುಂದ್ರಾ ಹೊರಗೆ ಬಂದ ಬಳಿಕ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ಪೂನಂ ಪಾಂಡೆ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಿದ್ದಾರೆ.

ಇದನ್ನೂ ಓದಿ | 47ನೇ Birth day ಖುಷಿಗೆ Vanity Van ಖರೀದಿಸಿದ ಶಿಲ್ಪಾ ಶೆಟ್ಟಿ, ಏನೇನಿದೆ ಒಳಗೆ?

Exit mobile version