Site icon Vistara News

Raj Kundra: ಶಿಲ್ಪಾ ಶೆಟ್ಟಿ-ರಾಜ್‌ ವೈವಾಹಿಕ ಜೀವನದಲ್ಲಿ ಬಿರುಕು; ಟ್ವೀಟ್‌ ವೈರಲ್‌!

Raj Kundra Shilpa Shetty

ಬೆಂಗಳೂರು: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ (Raj Kundra) ಅವರು ಸುಮಾರು ಎರಡು ವರ್ಷಗಳ ನಂತರ ಸಾರ್ವಜನಿಕವಾಗಿ ಮುಖವಾಡ ತೆಗೆದು ಮುಖ ತೋರಿಸಿ, ತನ್ಮ  ‘UT 69’ (UT 69 Movie) ಸಿನಿಮಾ ಟ್ರೈಲರ್‌ ವಿಚಾರವಾಗಿ ಸಖತ್‌ ಸುದ್ದಿಯಲ್ಲಿದ್ದರು. ಇದಕ್ಕಿದ್ದಂತೆ ಇದೀಗ ಫ್ಯಾನ್ಸ್‌ಗೆ ಅಚ್ಚರಿಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಟ್ವೀಟರ್‌ನಲ್ಲಿ ʻʻನಾವು ಬೇರ್ಪಟ್ಟಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮಗೆ ಸಮಯವನ್ನು ನೀಡಿʼʼಎಂದು ಏಕಾಏಕಿ ಟ್ವೀಟ್‌ ಮಾಡಿದ್ದಾರೆ. ಇದೀಗ ಈ ಸುದ್ದಿ ಸಖತ್‌ ವೈರಲ್‌ ಆಗುತ್ತಿದ್ದು, ಶಿಲ್ಪಾ ಶೆಟ್ಟಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ಪ್ರಶ್ನೆಯನ್ನು ಸೋಷಿಯಲ್‌ ಮೀಡಿಯಾ ಮುಖಾಂತರ ಕೇಳುತ್ತಿದ್ದಾರೆ ಫ್ಯಾನ್ಸ್‌. ಇನ್ನೂ ಕೆಲವರು ಇದು ಪ್ರಚಾರದ ಗಿಮಿಕ್ ಎಂದು ಕಮೆಂಟ್‌ ಮಾಡಿದ್ದಾರೆ.

ರಾಜ್ ಟ್ವಿಟರ್‌ನಲ್ಲಿ ಮಾಡಿದ ಪೋಸ್ಟ್‌ಅನ್ನು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರ ಅಪ್‌ಡೇಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು “ಪ್ರತ್ಯೇಕ ಎಂದರೆ? ವಿಚ್ಛೇದನ?” “ಇದು ನಿಜಕ್ಕೂ ಆಘಾತಕಾರಿ ಸುದ್ದಿ” ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಇದನ್ನು “ಪ್ರಚಾರದ ಗಿಮಿಕ್‌” ಎಂದು ಕರೆದರೆ, “ಇದು ಸಿನಿಮಾ ಗಿಮಿಕ್‌” ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻಮಾಸ್ಕ್‌ ಸಪರೇಟ್‌ ಆಗಿರಬೇಕುʼʼಎಂದು ಕಮೆಂಟ್‌ ಮಾಡಿದ್ದಾರೆ. ಆದರೆ ಶಿಲ್ಪಾ ಶೆಟ್ಟಿ ಅವರು ಈ ಬಗ್ಗೆ ಯಾವುದೇ ಪೋಸ್ಟ್‌ ಹಂಚಿಕೊಂಡಿಲ್ಲ.

ಇದನ್ನೂ ಓದಿ: Raj Kundra: ಮುಖವಾಡ ತೆಗೆದ ಶಿಲ್ಪಾ ಶೆಟ್ಟಿ ಪತಿ; ‘UT 69’ ಸಿನಿಮಾ ಟ್ರೈಲರ್‌ ಔಟ್‌!

ಅಶ್ಲೀಲ ವಿಡಿಯೊ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ ಕುಂದ್ರಾ, ಜೈಲಿನಲ್ಲಿ ತಾವು ಎದುರಿಸಿದ ಸಮಸ್ಯೆಗಳನ್ನೇ ಆಧರಿಸಿ ‘ಯುಟಿ 69’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದಾರೆ.ಸಿನಿಮಾದ ಟ್ರೈಲರ್‌ ಅ. 18ರಂದು ಬಿಡುಗಡೆ ಆಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖವಾಡ ತೆರೆದು ಮಾಧ್ಯಮಗಳಿಗೆ ಮುಖ ತೋರಿಸಿದ್ದಾರೆ ರಾಜ್ ಕುಂದ್ರಾ. ರಾಜ್ ಕುಂದ್ರಾ ತಮ್ಮದೇ ಜೀವನದಲ್ಲಿ ನಡೆದ ಘಟನೆಯನ್ನೇ ಆಧರಿಸಿದ ಸಿನಿಮಾ ಇದು.ಸಮಾರಂಭದಲ್ಲಿ ಮಾತನಾಡಿದ ರಾಜ್, “ಚಿತ್ರ ನನ್ನ 63 ದಿನಗಳ ಜೈಲಿನಲ್ಲಿರುವ ಜರ್ನಿಯಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನಗೆ ತಿಳಿದಿದ್ದರಿಂದ ನಾನು ಸಿಂಹದಂತೆ ಹೊರಬಂದೆ. ಯುಟಿ-69 ತನ್ನ ಜೀವನದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದ ವಿಡಂಬನಾತ್ಮಕ ಹಾಸ್ಯವಾಗಿದೆʼʼ ಎಂದು ರಾಜ್ ಪ್ರಸ್ತಾಪಿಸಿದ್ದರು.

ರಾಜ್ ಕುಂದ್ರಾ ಯುಟಿ-69 ಮೂಲಕ ನಟನೆಗೆ ಪದಾರ್ಪಣೆ ಮಾಡುತ್ತಿದ್ದು ಮಾತ್ರವಲ್ಲದೆ ಶಾನವಾಜ್ ಅಲಿ ನಿರ್ದೇಶನದ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದಾರೆ. U-69 ನವೆಂಬರ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

Exit mobile version