ಮುಂಬೈ: ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯಲ್ಲಿ ಮುಂಬೈ ಪೊಲೀಸ್ ಕ್ರೈಂ ಬ್ರ್ಯಾಂಚ್ನಿಂದ ಬಂಧಿತರಾಗಿ, ನಂತರ ಜಾಮೀನು ಪಡೆದು ಬಿಡುಗಡೆಯಾಗಿರುವ ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ಕುಂದ್ರಾ ಸಿಬಿಐಗೆ ಪತ್ರ ಬರೆದು ‘ತಾನು ಮುಗ್ಧ, ನನ್ನ ವಿರುದ್ಧ ಮುಂಬೈ ಕ್ರೈಂ ವಿಭಾಗದ ಪೊಲೀಸರು ವೃಥಾ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ನಿಜಕ್ಕೂ ನಾನು ಅಶ್ಲೀಲ ವಿಡಿಯೋ ನಿರ್ಮಾಣದಲ್ಲಿ ಭಾಗಿಯಾಗಿಲ್ಲ. ನಾನು ನಿರಪರಾಧಿ. ಉದ್ಯಮಿಯೊಬ್ಬ ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದ ಈ ಪಿತೂರಿ ಮಾಡಿಸಿದ್ದಾನೆ. ಪೊಲೀಸರು ಆತನೊಂದಿಗೆ ಕೈಜೋಡಿಸಿದ್ದಾರೆ. ಹೀಗಾಗಿಯೇ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿದ್ದಾರೆ. ನೀವು ಪ್ರಕರಣದ ತನಿಖೆ ನಡೆಸಬೇಕು’ ಎಂದು ರಾಜ್ಕುಂದ್ರಾ ಸಿಬಿಐಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಮುಂಬೈ ಪೊಲೀಸರು ಸಾಕ್ಷಿ ಎಂದು ಹೇಳುತ್ತಿರುವ ಆ್ಯಪ್ನ ಮಾಲೀಕತ್ವ ನನ್ನ ಸಂಬಂಧಿಯೊಬ್ಬರಿಗೆ ಸೇರಿದ್ದು. ನನಗೂ-ಅದಕ್ಕೂ ಸಂಬಂಧವೇ ಇಲ್ಲ. ನೀಲಿ ಚಿತ್ರ ನಿರ್ಮಾಣ ಕೇಸ್ನಲ್ಲಿ ನಾನು ಭಾಗಿಯಾಗಿಲ್ಲ. ಅಷ್ಟಕ್ಕೂ ಮುಂಬೈ ಪೊಲೀಸರು ನನ್ನ ವಿರುದ್ಧ ಸಲ್ಲಿಸಿದ 4 ಸಾವಿರ ಪೇಜ್ಗಳ ಚಾರ್ಜ್ಶೀಟ್ನಲ್ಲಿ ಎಲ್ಲಿಯೂ ನನ್ನ ಹೆಸರು ಕೂಡ ಇಲ್ಲ. ಯಾರೋ ಒಬ್ಬನನ್ನು ನನ್ನ ವಿರುದ್ಧ ಸಾಕ್ಷಿ ಹೇಳಲು ಮನವೊಲಿಸಿದ್ದು ಬಿಟ್ಟರೆ, ಇನ್ಯಾವುದೇ ಪುರಾವೆಯೂ ಅವರ ಬಳಿ ಇಲ್ಲ ಎಂದು ರಾಜ್ಕುಂದ್ರಾ ಹೇಳಿದ್ದಾರೆ.
ಅಶ್ಲೀಲ ಚಿತ್ರ ನಿರ್ಮಾಣ ದಂಧೆ ಕೇಸ್ನಲ್ಲಿ ನಾನು ಅಪರಾಧಿ ಅಲ್ಲದೆ ಇದ್ದರೂ 63 ದಿನ ಜೈಲಿನಲ್ಲಿ ಕಳೆದಿದ್ದೇನೆ. ಈ ಒಂದು ವರ್ಷ ಮೌನವಾಗಿಯೇ ಕಳೆದೆ. ಕೋರ್ಟ್ನಿಂದಲೂ ನ್ಯಾಯ ಕೇಳಿದ್ದೇನೆ. ಅಲ್ಲಿ ನನಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ. ಆದರೆ ಹೀಗೆ ಸುಳ್ಳು ಕೇಸ್ನಲ್ಲಿ ನನ್ನನ್ನು ತನಿಖೆ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದೂ ಕುಂದ್ರಾ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ: Raj Kundra | ಬಾಯಿ ಮುಚ್ಚಿ ಅಂದ್ರು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ: ಟ್ರೋಲಿಗರಿಗೆ ತಿರುಗೇಟು!