Site icon Vistara News

ಚಿರು ಸರ್ಜಾ ಕೊನೆ ಚಿತ್ರ ರಾಜಮಾರ್ತಾಂಡ ಬಿಡುಗಡೆ ಯಾವಾಗ? 23ರಂದು ಗೊತ್ತಾಗುತ್ತೆ!

ರಾಜಮಾರ್ತಾಂಡ

ಬೆಂಗಳೂರು: ಸ್ಯಾಂಡಲ್ ವುಡ್ ನಟ ದಿ. ಚಿರಂಜೀವಿ ಸರ್ಜಾ ನಟನೆಯ ಕೊನೆಯ ಸಿನಿಮಾ ರಾಜಮಾರ್ತಾಂಡ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಆ ಕ್ಷಣ ಸಮೀಪಿಸುತ್ತಿದೆ. ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎಂದು ತಿಳಿಸಲು ಜೂನ್‌ ೨೩ರಂದು ಬೆಳಗ್ಗೆ ೧೧.೦೦ ಗಂಟೆಗೆ ಘೋಷಿಸಲಾಗುತ್ತದೆ ಎಂದು ಚಿತ್ರ ತಂಡ ಪೋಸ್ಟ್‌ ಹಾಕಿದೆ.

ಚಿರಂಜೀವಿ ಸರ್ಜಾ ಅವರು ನಿಧನರಾದಾಗ ಚಿತ್ರದ ಡಬ್ಬಿಂಗ್‌ ಆಗಿರಲಿಲ್ಲ. ಇದೀಗ ಅವರ ಸಹೋದರ ಧ್ರುವ ಸರ್ಜಾ ಧ್ವನಿ ನೀಡಿ ಜೀವ ತುಂಬಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕವನ್ನು ಕೂಡಾ ಧ್ರುವ ಸರ್ಜಾ ಅವರೇ ಪ್ರಕಟಿಸಲಿದ್ದಾರೆ.

ರಾಮನಾರಾಯಣ್ ನಿರ್ದೇಶಿಸಿ ಶಿವಕುಮಾರ್ ನಿರ್ಮಾಣದ ಚಿತ್ರ ಇದಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು ಚಿರಂಜೀವಿ ಸರ್ಜಾ, ದೀಪ್ತಿ ಸತಿ, ತ್ರಿವೇಣಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಇದನ್ನೂ ಓದಿ| ಯುವ ಸಾಮ್ರಾಟ್ ಚಿರು ಅಗಲಿಕೆಗೆ ಎರಡು ವರ್ಷ: ಪತಿಯನ್ನು ಭಾವುಕವಾಗಿ ಮೇಘನಾ ನೆನಪಿಸಿಕೊಳ್ಳೋದು ಹೀಗೆ

Exit mobile version