ಬೆಂಗಳೂರು: ನಟ ಚಿರಂಜೀವಿ (Actor Chiranjeevi) ಒಡೆತನದ ಚಿರಂಜೀವಿ ʻಬ್ಲಡ್ ಬ್ಯಾಂಕ್ ವಿರುದ್ಧʼ ರಾಜಶೇಖರ್ ಹಾಗೂ ಜೀವಿತಾ ದಂಪತಿ 2011ರಲ್ಲಿ ಗಂಭೀರ ಆರೋಪವನ್ನು ಮಾಡಿದ್ದರು. ಅಲ್ಲಿ ಶೇಕರಿಸಲಾದ ರಕ್ತವನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು .ಈ ಪ್ರಕರಣಕ್ಕೆ ಸಂಬಂಧಿಸಿ ಚಿರಂಜೀವಿ ಅವರ ಭಾವ ಅಲ್ಲು ಅರವಿಂದ್ ಅವರು ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದರ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಪ್ರಕಟ ಆಗಿದೆ. ಸುಳ್ಳು ಆರೋಪ ಮಾಡಿದ ರಾಜಶೇಖರ್ ಹಾಗೂ ಜೀವಿತಾಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಐದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ಬಗ್ಗೆ ಚಿರಂಜೀವಿ ಫ್ಯಾನ್ಸ್ ಕೆಂಡಾಮಂಡಲವಾಗಿದ್ದರು.
ಅಂದು ಹೂಡಿದ್ದ ಮೊಕದ್ದಮೆಗೆ ಜುಲೈ 18ರಂದು ನಾಂಪಲ್ಲಿ ನ್ಯಾಯಾಲಯ ತೀರ್ಪನ್ನು ನೀಡಿದೆ. ನಾಂಪಲ್ಲಿ ಕೋರ್ಟ್ನ ಮುಖ್ಯ ಮ್ಯಾಜಿಸ್ಟ್ರೇಟ್ ಅವರು ಜೀವಿತಾ ಹಾಗೂ ರಾಜಶೇಖರ್ಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಅರ್ಜಿದಾರರಿಗೆ 5 ಲಕ್ಷ ರೂಪಾಯಿ ನೀಡುವಂತೆ ಆದೇಶ ಹೊರಡಿಸಿದರು. ಸದ್ಯ ದಂಪತಿ ಜಾಮೀನು ಪಡೆದು ಹೊರಬಂದಿದ್ದಾರೆ. ಇವರಿಗೆ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ‘ನರೇಶ್ ಅವರಿಂದ ನಾನು ಹಣ ಕಳೆದುಕೊಂಡೆ, ಅವರಿಗೆ ನನಗೆ ಅವಕಾಶ ಕೂಡ ಇಲ್ಲದಂತಾಯಿತು’ ಎಂದು ರಾಜಶೇಖರ್ ವೇದಿಕೆ ಮೇಲೆ ದೂರಿದ್ದರು. ಇದನ್ನು ಚಿರಂಜೀವಿ ಅವರು ಖಂಡಿಸಿದ್ದರು. ‘ಈ ರೀತಿಯ ನಡವಳಿಕೆ ಸರಿ ಅಲ್ಲ. ರಾಜಶೇಖರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: Southern Actors: ದಕ್ಷಿಣ ಭಾರತದ ಖ್ಯಾತ ನಟರ ಅಸಲಿ ಹೆಸರೇನು?
ಈ ಹಿಂದೆ 2020ರಲ್ಲಿ ನಡೆದಿದ್ದ ತೆಲುಗು ಚಿತ್ರರಂಗದ ಕಲಾವಿದರ ಸಂಘ ‘ಮಾ’ ಕಾರ್ಯಕ್ರಮದಲ್ಲಿಯೂ ಸಹ ಈ ಇಬ್ಬರ ನಡುವೆ ವಾಕ್ಸಮರ ನಡೆದಿತ್ತು. ಈ ಸಂದರ್ಭದಲ್ಲಿ ನರೇಶ್ ಅಧ್ಯಕ್ಷರಾಗಿದ್ದರು. ಚಿರಂಜೀವಿ ಭಾಷಣ ಮಾಡುತ್ತಾ ‘ಮಾ’ ಕುರಿತು ಯಾರಾದರೂ ಒಳ್ಳೆಯದನ್ನು ಹೇಳಬೇಕೆಂದರೆ ಮೈಕ್‌ನಲ್ಲಿ ಹೇಳೋಣ, ಹಾಗೆಯೇ ಕೆಟ್ಟದ್ದೇನಾದರೂ ಇದ್ದರೆ ಅದನ್ನು ಕಿವಿಯಲ್ಲಿ ಹೇಳಿಕೊಳ್ಳೋಣ ಎಂದು ಹೇಳಿದ್ದರು. ಈ ಹೇಳಿಕೆ ಬರುತ್ತಿದ್ದಂತೆಯೇ ಎದ್ದ ರಾಜಶೇಖರ್ ಚಿರಂಜೀವಿ ಸೇರಿದಂತೆ ವೇದಿಕೆ ಮೇಲಿದ್ದ ಹಲವರ ಕಾಲನ್ನು ಮುಟ್ಟಿ ನಮಸ್ಕರಿಸಿ ಬಳಿಕ ‘ಮಾ’ನಿಂದ ನನಗೆ ಹೆಚ್ಚೇನೂ ಒಳ್ಳೆಯದಾಗಿಲ್ಲ. ಮಾ ಬಗ್ಗೆ ಹಲವರಿಗೆ ಅಸಮಾಧಾನವಿದೆ, ಆದರೆ ಯಾರೂ ಸಹ ಅದನ್ನು ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದಿದ್ದರು.
ರಾಜಶೇಖರ್ ಹಾಗೂ ಜೀವಿತಾ ದಂಪತಿ ತೆಲುಗು ಚಿತ್ರರಂಗದಲ್ಲಿ ಖ್ಯಾತ ಕಲಾವಿದರಾಗಿ ಹೆಸರು ಗಳಿಸಿದ್ದಾರೆ. 1989ರಲ್ಲಿ ತೆರೆ ಕಂಡ ಕಂಕಣ ಭಾಗ್ಯ ಕನ್ನಡ ಸಿನಿಮಾದಲ್ಲಿ ಜೀವಿತಾ, ರಾಮಕೃಷ್ಣ ಜತೆ ನಟಿಸಿದ್ದಾರೆ. ಜೀವಿತಾ ನಟಿಸಿದ್ದು ಒಂದೇ ಒಂದು ಕನ್ನಡ ಸಿನಿಮಾ.