Site icon Vistara News

Jailer Cinema : ಬದರೀನಾಥ್​​ ದೇಗುಲಕ್ಕೆ ಭೇಟಿ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್​

Rajani Jailer

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್ ಸಿನಿಮಾ ಗುರುವಾರ ಚಿತ್ರಮಂದಿರಗಳಲ್ಲಿ ಭರ್ಜರಿ ಆರಂಭವನ್ನು ಕಂಡಿದೆ. ಹಲವು ತಾರೆಯರನ್ನು ಹೊಂದಿರುವ ಈ ಸಿನಿಮಾದ ಆಗಮನವನ್ನು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಏತನ್ಮಧ್ಯೆ, ಸಿನಿಮಾ ಬಿಡುಗಡೆ ಬಳಿಕ ನಟ ರಜನಿಕಾಂತ್​ ಉತ್ತರಾಖಂಡದ ಬದರೀನಾಥ್ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಇದರ ವಿಡಿಯೊವೊಂದು ಹರಿದಾಡುತ್ತಿದ್ದು ರಜನಿಕಾಂತ್ ಅವರು ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಿರುವುದು ಹಾಗೂ ದೇವಾಲಯದ ಒಳಗೆ ನಡೆಯುತ್ತಿರುವುದು ಕಂಡುಬಂದಿದೆ.

ಪಿಟಿಐ ತನ್ನ ಎಕ್ಸ್ ಹ್ಯಾಂಡಲ್​ನಲ್ಲಿ ಹಂಚಿಕೊಂಡಿರುವ ಸಣ್ಣ ವೀಡಿಯೊದಲ್ಲಿ, ರಜನಿಕಾಂತ್ ಶನಿವಾರ ಉತ್ತರಾಖಂಡದ ಬದರೀನಾಥ್ ದೇವಾಲಯಕ್ಕೆ ಆಗಮಿಸುತ್ತಿರುವುದು ಕಂಡುಬಂದಿದೆ. ಅಭಿಮಾನಿಗಳ ಗುಂಪಿನೊಂದಿಗೆ ನಟ ಕ್ಯಾಮೆರಾದತ್ತ ಕೈ ಬೀಸುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ. ರಜನಿಕಾಂತ್ ತಿಳಿ ನೀಲಿ ಸ್ವೆಟರ್ ಮತ್ತು ಗ್ಲೌಸ್ ಧರಿಸಿದ್ದರು. ಅವರು ದೇವಾಲಯವನ್ನು ಪ್ರವೇಶಿಸಲು ಮೆಟ್ಟಿಲುಗಳನ್ನು ಏರುತ್ತಿದ್ದಂತೆ, ಅನೇಕ ಅಭಿಮಾನಿಗಳು ಅವರನ್ನು ಮುಟ್ಟಲು ತಮ್ಮ ಕೈಗಳನ್ನು ಚಾಚಿರು. ಅವರು ಪ್ರವೇಶ ದ್ವಾರದ ಬಳಿ ಅಭಿಮಾನಿಗಳನ್ನು ಭೇಟಿಯಾಗಿ ನಗುತ್ತಿರುವುದು ಕಂಡುಬಂದಿದೆ. ರಜನೀಕಾಂತ್ ಅವರು ದೇವಾಲಯದ ಒಳಗೆ ಪ್ರವೇಶಿಸುತ್ತಿದ್ದಂತೆ ಹಲವಾರು ಭದ್ರತಾ ಅಧಿಕಾರಿಗಳು ಅವರನ್ನು ಸುತ್ತುವರಿದರು.

ಇದನ್ನೂ ಓದಿ :Gadar 2 Movie: ಜೈಲರ್‌ ಅಬ್ಬರದ ಮಧ್ಯೆಯೂ ಖದರ್‌ ತೋರಿಸಿದ ಗದರ್‌ 2, ಮೊದಲ ದಿನ ಭಾರಿ ಕಲೆಕ್ಷನ್

ಜೈಲರ್ ಸಿನಿಮಾ ಬಿಡುಗಡೆ

ಗುರುವಾರ ಜೈಲರ್ ಸಿನಿಮಾ ಬಿಡುಗಡೆಯಾಗಿತ್ತು. ತಮಿಳುನಾಡಿನಲ್ಲಿ ಇದರ ಸಂಭ್ರಮಕ್ಕೆ ಆಗಸ್ಟ್ 10 ರಂದು ಶಾಲೆಗಳು ಮತ್ತು ಕೆಲವು ಕಚೇರಿಗಳಿಗೆ ರಜೆ ಘೋಷಿಸಲಾಗಿತ್ತು. ಚಿತ್ರ ವಿತರಕ ಮತ್ತು ತಮಿಳುನಾಡಿನ ಚಿತ್ರಮಂದಿರ ಮಾಲೀಕರ ಸಂಘದ ಮುಖ್ಯಸ್ಥರಾಗಿರುವ ತಿರುಪುರ್ ಸುಬ್ರಮಣಿಯಂ ಮಾತನಾಡಿ, “ಇದು ರಜನಿಕಾಂತ್ ಚಿತ್ರ. ಸಹಜವಾಗಿ, ಇದನ್ನು ಸಂಭ್ರಮದೊಂದಿಗೆ ಸ್ವಾಗತಿಸಲಾಗುವುದು. ತಮಿಳುನಾಡಿನಾದ್ಯಂತ 900 ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದ್ದು ಎಲ್ಲೆಡೆಯೂ ಹಬ್ಬದ ವಾತಾವರಣವಿದೆ ಎಂದು ಹೇಳಿದ್ದರು.

ಜೈಲರ್ ಬಗ್ಗೆ

ಜೈಲರ್ ಚಿತ್ರವನ್ನು ನೆಲ್ಸನ್ ನಿರ್ದೇಶಿಸಿದ್ದಾರೆ . ‘ಟೈಗರ್’ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ರಜನಿಕಾಂತ್ ನಟಿಸಿದ್ದಾರೆ. ಅವರು ಜೈಲಿನಲ್ಲಿರುವ ತಮ್ಮ ನಾಯಕನನ್ನು ಬಿಡುಗಡೆ ಮಾಡಲು ಪ್ರಯತ್ನಿಸುವ ಗೂಂಡಾಗಳ ಗುಂಪನ್ನು ತಡೆಯಲು ಯೋಜಿಸುವುದೇ ಇದರ ಕಥಾ ಹಂದರ . ಇದು ಎರಡು ವರ್ಷಗಳ ವಿರಾಮದ ನಂತರ ರಜನಿಕಾಂತ್ ಅವರ ಸಿನಿಮಾವಾಗಿದೆ. ಈ ಚಿತ್ರದಲ್ಲಿ ರಮ್ಯಾ ಕೃಷ್ಣನ್, ತಮನ್ನಾ ಭಾಟಿಯಾ, ವಿನಾಯಕನ್, ಯೋಗಿ ಬಾಬು, ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ನಟಿಸಿದ್ದಾರೆ.

Exit mobile version