ಬೆಂಗಳೂರು : ರಾಜಕುಮಾರ್ ಸಂತೋಷಿ (Rajkumar Santoshi ) ನಿರ್ದೇಶನದ ʻಗಾಂಧಿ ಗೋಡ್ಸೆ – ಏಕ್ ಯುದ್ಧ್ʼ ಸಿನಿಮಾದ ಟ್ರೈಲರ್ ಜನವರಿ 11 ಬಿಡುಗಡೆಗೊಂಡಿದೆ. ಟ್ರೈಲರ್ ನೋಡುವಾಗ 1947-1948 ರ ಅವಧಿಯಲ್ಲಿ ನಡೆದ ಗಾಂಧಿ ಮತ್ತು ಗೋಡ್ಸೆ ನಡುವಿನ ಸಿದ್ಧಾಂತಗಳ ಯುದ್ಧದ ಸನ್ನಿವೇಶಗಳನ್ನು ಕಟ್ಟಿಕೊಟ್ಟಂತಿದೆ. ಇದು ಕಾಲ್ಪನಿಕ ಚಿತ್ರವಾಗಿದ್ದು, ನಾಥೂರಾಂ ಗೋಡ್ಸೆಯೊಂದಿಗೆ ಗಾಂಧಿ ಮುಖಾಮುಖಿಯಾಗುತ್ತಾರೆ. ʻಗಾಂಧಿ ಗೋಡ್ಸೆ – ಏಕ್ ಯುದ್ಧ್ʼ ಟೀಸರ್ ನಂತರ ಪ್ರೇಕ್ಷಕರು ಟ್ರೈಲರ್ ನೋಡಿ ಸೋಷಿಯಲ್ ಮೀಡಿಯಾ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಚಲನಚಿತ್ರ 2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. 9 ವರ್ಷಗಳ ನಂತರ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ರಾಜಕುಮಾರ್ ಸಂತೋಷಿ . ಈ ಚಿತ್ರವು ಗಣರಾಜ್ಯೋತ್ಸವದ ದಿನ, ಜನವರಿ 26, 2023 ರಂದು ಥಿಯೇಟರ್‌ಗಳಿಗೆ ಬರಲಿದೆ.
ಇದನ್ನೂ ಓದಿ | Rajkumar Santoshi | ರಾಜಕುಮಾರ್ ಸಂತೋಷಿ ನಿರ್ದೇಶನದ ʻಗಾಂಧಿ ಗೋಡ್ಸೆ – ಏಕ್ ಯುದ್ಧ್ʼ ಟೀಸರ್ ಔಟ್!
ಐತಿಹಾಸಿಕ ಪಾತ್ರಗಳನ್ನು ದೀಪಕ್ ಅಂತಾನಿ, ಚಿನ್ಮಯ್ ಮಾಂಡ್ಲೇಕರ್, ಆರಿಫ್ ಜಕಾರಿಯಾ ಮತ್ತು ಪವನ್ ಚೋಪ್ರಾ ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ತನಿಶಾ ಸಂತೋಷಿ ಮತ್ತು ಅನುಜ್ ಸೈನಿ ಎಂಬ ಚೊಚ್ಚಲ ಕಲಾವಿದರೂ ಇದ್ದಾರೆ.
ಸಿನಿಮಾದಲ್ಲಿ ಗಾಂಧಿ ಅವರ ಪಾತ್ರವನ್ನು ದೀಪಕ್ ಅಂತನಿ ನಿರ್ವಹಿಸಿದರೆ, ಚಿನ್ಮಯ್ ಮಾಂಡ್ಲೇಕರ್ ನಾಥುರಾಮ್ ಗೋಡ್ಸೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಸಂಗೀತವನ್ನು ಎಆರ್ ರೆಹಮಾನ್ ಸಂಯೋಜಿಸಿದ್ದಾರೆ. ಇದನ್ನು ಮನಿಲಾ ಸಂತೋಷಿ ನಿರ್ಮಿಸಿದ್ದಾರೆ. ಶಾರುಖ್ ಅಭಿನಯದ ʻಪಠಾಣ್ʼ ಸಿನಿಮಾ ರಿಲೀಸ್ ಆದ ಒಂದು ದಿನ ಬಳಿಕ ಬಿಡುಗಡೆಯಾಗಲಿದೆ.
ಇದನ್ನೂ ಓದಿ | Singer Mangli |‘ಪಾದರಾಯ’ ಪ್ಯಾನ್ ಇಂಡಿಯಾ ಸಿನಿಮಾಗೆ ಗಾಯಕಿ ಮಂಗ್ಲಿ ನಾಯಕಿ!