Site icon Vistara News

Rakesh Adiga Birthday: ʻಜೋಶ್‌ʼ ಹುಡುಗನಿಗೆ ಬರ್ತ್‌ಡೇ ಸಂಭ್ರಮ!

Rakesh Adiga Birthday
ನಟ, ಬಿಗ್ ಬಾಸ್ ಕನ್ನಡ, ಬಿಗ್‌ ಬಾಸ್‌ ಒಟಿಟಿ ರಾಕೇಶ್ ಅಡಿಗ ಅವರಿಗೆ ಜುಲೈ 7ರಂದು ಜನುಮದಿನದ (Rakesh Adiga Birthday) ಸಂಭ್ರಮ. 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ರಾಕೇಶ್ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಜನುಮದಿನದಂದು ನಿಮ್ಮ ಮದುವೆ ಯಾವಾಗ ಅಂತಿದ್ದಾರೆ ಅವರ ಫ್ಯಾನ್ಸ್.
ಜೋಶ್ ಸಿನಿಮಾದ ಮೂಲಕ ಪರಿಚಯದವಾದ ರಾಕೇಶ್ ಅಡಿಗ ಕರುನಾಡ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ನಂತರ `ಮನಸಾಲಜಿ’, ಮಂದಹಾಸ’ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು.
ಅಲೆಮಾರಿʼ, ʻಡವ್ʼ ಚಿತ್ರಗಳ ನಟ ನಟ ರಾಕೇಶ್ ಅಡಿಗ ಸಿನಿಮಾ ನಿರ್ದೇಶಕರೂ ಆಗಿದ್ದಾರೆ. ಈ ಹಿಂದೆ ಅವರ ನಿರ್ದೇಶನದ ಚೊಚ್ಚಲ ಚಿತ್ರ ʼನೈಟ್ ಔಟ್ʼ ಬಿಡುಗಡೆಯಾಗಿತ್ತು.
ಬಿಗ್‌ ಬಾಸ್‌ ಸೀಸನ್‌ 9ರಲ್ಲಿ ರನ್ನರ್‌ ಅಪ್‌ ಆದವರು ರಾಕೇಶ್‌. ರಾಕೇಶ್ ಅಡಿಗ ಈಗ ಹೊಸ ಸಿನಿಮಾ ‘ಲೈಫ್ ಆಫ್ ಎ ಕಾಕ್ರೋಚ್’ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದಲ್ಲಿನ ರಾಕೇಶ್ ಅಡಿಗ ಅವರ ಕ್ಯಾರೆಕ್ಟರ್ ರಿವೀಲ್ ಟೀಸರ್ ಬಿಡುಗಡೆಯಾಗಿದೆ.
Exit mobile version