Site icon Vistara News

Rakhi Sawant | ಅಮ್ಮನ ಚಿಕಿತ್ಸೆಗೆ ಉದ್ಯಮಿ ಅಂಬಾನಿ ನಮಗೆ ಸಹಾಯ ಮಾಡುತ್ತಿದ್ದಾರೆ: ರಾಖಿ ಸಾವಂತ್‌!

Rakhi Sawant

ಬೆಂಗಳೂರು : ಕೆಲವು ದಿನಗಳ ಹಿಂದೆ, ನಟಿ ರಾಖಿ ಸಾವಂತ್ (Rakhi Sawant ) ಅವರು ತನ್ನ ತಾಯಿಗೆ ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದ್ದರು. ಇದೀಗ ಮುಕೇಶ್‌ ಅಂಬಾನಿ ತಮ್ಮ ತಾಯಿಯ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲಾಗಿರುವ ಅವರ ತಾಯಿಯ ಆರೋಗ್ಯವನ್ನು ವಿಚಾರಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ತಾಯಿಯ ಆರೋಗ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ರಾಖಿ ಮಾತನಾಡಿ ʻʻಚಿಕಿತ್ಸೆಯು ಸ್ವಲ್ಪ ಅಗ್ಗವಾಗಿರುವುದರಿಂದ ಈಗ ತಮ್ಮ ತಾಯಿಯನ್ನು ಟಾಟಾ ಸ್ಮಾರಕ ಆಸ್ಪತ್ರೆಯಿಂದ ಕ್ರಿಟಿಕೇರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ‘ಅಂಬಾನಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ’. ಅವರು ನನ್ನ ರಕ್ಷಣೆಗೆ ಬಂದಿದ್ದಾರೆ ಮತ್ತು ಅವರ ಸಹಾಯಕ್ಕಾಗಿ ಧನ್ಯವಾದಗಳು. ತನ್ನ ತಾಯಿಗೆ ಈಗ ಯಾರನ್ನೂ ಗುರುತಿಸಲು ಸಾಧ್ಯವಾಗುತ್ತಿಲ್ಲ ʼʼಎಂದಿದ್ದಾರೆ.

ಇದನ್ನೂ ಓದಿ | Rakhi Sawant | ರಾಖಿ ಸಾವಂತ್‌ ಅಳುವಿನ ಬೆನ್ನಲ್ಲೇ ಮದುವೆ ಪೋಸ್ಟ್‌ ಹಂಚಿಕೊಂಡ ಪತಿ ಆದಿಲ್ ಖಾನ್ ದುರಾನಿ!

‘ಬಿಗ್ ಬಾಸ್ ಮರಾಠಿ’ಯಿಂದ ಹೊರಬಂದ ನಂತರ ರಾಖಿಗೆ ತಮ್ಮ ತಾಯಿಯ ಅನಾರೋಗ್ಯದ ಕುರಿತು ತಿಳಿದಿತ್ತು. 9 ಲಕ್ಷ ಮೌಲ್ಯದ ಬ್ರೀಫ್‌ಕೇಸ್ ತೆಗೆದುಕೊಂಡು ಸ್ವಯಂಪ್ರೇರಣೆಯಿಂದ ಕಾರ್ಯಕ್ರಮದಿಂದ ಹೊರನಡೆಯಲು ನಿರ್ಧರಿಸಿದ್ದರು.

ಕೆಲವು ದಿನಗಳ ಹಿಂದಷ್ಟೇ ರಾಖಿ, ಆಸ್ಪತ್ರೆಯಿಂದಲೇ ಲೈವ್‌ ಮಾಡಿ ತನ್ನ ತಾಯಿಗೆ ಬ್ರೈನ್‌ ಟ್ಯೂಮರ್‌ ಇದ್ದು ನೀವೆಲ್ಲರೂ ಆಕೆಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದರು. ಆಸ್ಪತ್ರೆ ಬೆಡ್‌ ಮೇಲೆ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಾಯಿಯನ್ನು ಕೂಡಾ ರಾಖಿ ಸಾವಂತ್‌ ತೋರಿಸಿದ್ದರು. ಇದರ ಬೆನ್ನಲ್ಲೇ ರಾಖಿ ಸಾವಂತ್‌, ತಾವು ಆದಿಲ್‌ ಖಾನ್‌ನನ್ನು ಮದುವೆಯ ಫೋಟೋ ಹಂಚಿಕೊಂಡಿದ್ದರು.  ಆದಿಲ್ ಜತೆಗೆ ಮದುವೆಯ ನಂತರ ರಾಖಿ ತನ್ನ ಹೆಸರನ್ನು ‘ರಾಖಿ ಸಾವಂತ್ ಫಾತಿಮಾ’ ಎಂದು ಬದಲಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ | Rakhi Sawant | ನನಗೀಗ ಮದುವೆಯಾಗಿದೆ, ದೂರ ನಿಲ್ಲಿ: ಸೆಲ್ಫಿ ಕ್ಲಿಕ್ಕಿಸುವ ವೇಳೆ ಅಭಿಮಾನಿಗೆ ರಾಖಿ ತಪರಾಕಿ!

Exit mobile version